Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೇಸರಿ ಭಯೋತ್ಪಾದನೆ ಏಕೆ ಕಟ್ಟುಕಥೆಯಲ್ಲ?

ಕೇಸರಿ ಭಯೋತ್ಪಾದನೆ ಏಕೆ ಕಟ್ಟುಕಥೆಯಲ್ಲ?

ಅಶೋಕ್ ಸ್ವೈನ್ಅಶೋಕ್ ಸ್ವೈನ್25 May 2016 10:48 PM IST
share
ಕೇಸರಿ ಭಯೋತ್ಪಾದನೆ ಏಕೆ ಕಟ್ಟುಕಥೆಯಲ್ಲ?

ಮಾಲೇಗಾಂವ್‌ನಲ್ಲಿ 2008ರಲ್ಲಿ ಸಂಭವಿಸಿದ ಸ್ಫೋಟದ ಸಂಬಂಧ ಸಾಧ್ವಿ ಪ್ರಜ್ಞಾ ಠಾಕೂರ್ ವಿರುದ್ಧದ ಎಲ್ಲ ಆರೋಪಗಳನ್ನು ಕೈಬಿಡಲು ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚೆಗೆ ನಿರ್ಧರಿಸಿದೆ. ಹಿಂದೆ ತನಿಖೆ ನಡೆಸಿದ ಏಜೆನ್ಸಿಗಳು ತನಿಖೆಯಿಂದ ಕಂಡುಕೊಂಡ ಅಂಶಗಳನ್ನು ನರೇಂದ್ರ ಮೋದಿ ಆಡಳಿತದ ಅಪೇಕ್ಷೆಯಂತೆ ನಿರ್ಲಕ್ಷಿಸಿದಂತಿದೆ ಎಂದು ಊಹಿಸಬಹುದು.

ಇತ್ತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ, ಸೇನೆಯ ಮಾಜಿ ಅಧಿಕಾರಿ ಶ್ರೀಕಾಂತ್ ಪುರೋಹಿತ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಸ್ವಾಮಿ ಅಸೀಮಾನಂದ ವಿರುದ್ಧ ಇದ್ದ ಗಂಭೀರ ಆರೋಪಗಳನ್ನು ಕೂಡಾ ದುರ್ಬಲಗೊಳಿಸಿದೆ. ಈ ಇಬ್ಬರು ಗಣ್ಯರು ಮುಸ್ಲಿಂ ಸಮುದಾಯವನ್ನು ಗುರಿ ಮಾಡಿ, ಭಯೋತ್ಪಾದಕ ಕೃತ್ಯಗಳನ್ನು ಎಸಗಿದ ಆರೋಪ ಎದುರಿಸುತ್ತಿದ್ದವರು. ಇದರಲ್ಲಿ 2007ರಲ್ಲಿ 68 ಮಂದಿಯನ್ನು ಬಲಿ ತೆಗೆದುಕೊಂಡ ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ದಾಳಿ ಪ್ರಕರಣವೂ ಸೇರಿದೆ. ಆದಾಗ್ಯೂ ಠಾಕೂರ್ ವಿರುದ್ಧದ ಎಲ್ಲ ಆರೋಪಗಳನ್ನು ಕೈಬಿಡುವ ಮೂಲಕ ಹಿಂದುತ್ವ ಗುಂಪುಗಳು ಕೇಸರಿ ಉಗ್ರರು ಎನ್ನುವ ಪರಿಕಲ್ಪನೆ ಕಟ್ಟುಕಥೆ ಎಂದು ಬಿಂಬಿಸಲು ಅವಕಾಶ ಮಾಡಿಕೊಟ್ಟಿದೆ.

ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್ ಪಕ್ಷ ಮೃದು ಧೋರಣೆ ಹೊಂದಿದೆ ಎಂದು ಸಂಘ ಪರಿವಾರ ಆಪಾದಿಸುತ್ತಲೇ ಬಂದಿದೆ. ಅದಾಗ್ಯೂ, ಸಂಘ ‘ಭಯೋತ್ಪಾದನೆ’ ಎಂಬ ಪದ ಬಳಸುವಾಗ ವಾಸ್ತವವಾಗಿ ಅದು ಇಸ್ಲಾಮಿಕ್ ಭಯೋತ್ಪಾದನೆ ಎಂಬ ಅರ್ಥದಲ್ಲೇ ಬಳಸುತ್ತದೆ. ಹಿಂದುತ್ವ ಗುಂಪುಗಳ ಭಯೋತ್ಪಾದಕ ಚಟುವಟಿಕೆಗಳ ವಿಚಾರಕ್ಕೆ ಬಂದರೆ, ರಾಷ್ಟೀಯ ಸ್ವಯಂಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷ ಅದರ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಕೂಡಾ ನಿರಾಕರಿಸುತ್ತಿವೆ.

ಕೇಸರಿ ಉಗ್ರರ ವಿರುದ್ಧ ಹೋರಾಟ
ಗುಜರಾತ್ ಗಲಭೆಯ ನಂತರದ ದಿನಗಳಲ್ಲಿ, ಪಾಶ್ಚಾತ್ಯ ವೀಕ್ಷಕ ವಿವರಣೆಕಾರರು, ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಹಿಂದೂ ಭಯೋತ್ಪಾದಕ ಸಂಘಟನೆಗಳಿಂದ ಇರುವ ಅಪಾಯದ ಬಗ್ಗೆ ಲೇಖನಗಳನ್ನು ಬರೆದರು. ಆದರೆ 2010ರವರೆಗೂ ಆ ಪದ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರಲಿಲ್ಲ. ಗೃಹಸಚಿವ ಪಿ.ಚಿದಂಬರಂ ಅವರು ಗುಪ್ತಚರ ಮಾಹಿತಿಯನ್ನು ಆಧರಿಸಿ ಈ ಅಪಾಯವನ್ನು ‘ಕೇಸರಿ ಭಯೋತ್ಪಾದನೆ’ ಎಂದು ಬಣ್ಣಿಸಿದರು. ನರೇಂದ್ರ ಮೋದಿ ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಚಿದಂಬರಂ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಮೋದಿ, ‘‘ಕಾಶ್ಮೀರದ ಭಯೋತ್ಪಾದನೆಯ ಬಣ್ಣ ಯಾವುದು?’’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಚಿದಂಬರಂ ಹೇಳಿಕೆಗೆ ಪ್ರತಿಯಾಗಿ ಈ ಹಿಂದೂ ಹೃದಯ ಸಾಮ್ರಾಟ, ಭಗವಾ ಗೌರವ ಆಂದೋಲನವನ್ನೂ ರಾಜ್ಯದಲ್ಲಿ ಸಂಘಟಿಸಿದರು.
ಆದರೆ ಈ ಕೇಸರಿ ಭಯೋತ್ಪಾದನೆಯ ಪ್ರಶ್ನೆ ಎತ್ತಿದವರಲ್ಲಿ ಚಿದಂಬರಂ ಮೊದಲಿಗರಲ್ಲ. 2010ರ ಡಿಸೆಂಬರ್‌ನಲ್ಲಿ ವಿಕಿಲೀಕ್ಸ್ ಕೇಬಲ್ ಬಹಿರಂಗಪಡಿಸಿದಂತೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು, ದಿಲ್ಲಿಯಲ್ಲಿರುವ ಅಮೆರಿಕನ್ ರಾಯಭಾರಿಗೆ ಹಿಂದೂ ಉಗ್ರ ಸಂಘಟನೆಗಳ ಅಪಾಯದ ಬಗೆಗೆ ವಿವರಿಸಿದ್ದರು. ಇದು ಮುಸ್ಲಿಂ ಸಮುದಾಯದ ಬಗ್ಗೆ ಧಾರ್ಮಿಕ ಸಂಘರ್ಷ ಹುಟ್ಟಿಕೊಳ್ಳಲು ಹಾಗೂ ಮುಸ್ಲಿಂ ಸಮುದಾಯದ ವಿರುದ್ಧದ ರಾಜಕೀಯ ವಾಗ್ವಾದಕ್ಕೂ ಇದು ವೇದಿಕೆ ಕಲ್ಪಿಸಿತು.
2013ರಲ್ಲಿ ಚಿದಂಬರಂ ಅವರ ಉತ್ತರಾಧಿಕಾರಿ ಸುಶೀಲ್‌ಕುಮಾರ್ ಶಿಂಧೆಯವರು ಮತ್ತೆ ಕೇಸರಿ ಭಯೋತ್ಪಾದನೆಯ ಅಪಾಯ ವಿಚಾರವನ್ನು ಸಾರ್ವಜನಿಕ ಗಮನಕ್ಕೆ ತಂದರು. ಆದರೆ ಬಿಜೆಪಿ ಅವರನ್ನು ಈ ಹೇಳಿಕೆಯಿಂದ ಹಿಂದೆ ಸರಿಯುವಂತೆ ಮಾಡಿತು.

ಶಿಂಧೆ ಹೇಳಿಕೆಯಿಂದ ಹಿಂದೆ ಸರಿದರೂ, ಗೃಹ ಕಾರ್ಯದರ್ಶಿ ಹಾಗೂ ಹಾಲಿ ಬಿಜೆಪಿ ಸಂಸದರಾಗಿರುವ ಆರ್.ಕೆ.ಸಿಂಗ್, ಶಿಂಧೆಯವರ ಹೇಳಿಕೆಯನ್ನು ದೃಢೀಕರಿಸಿದರು. ಈ ಹೇಳಿಕೆ ಎನ್‌ಐಎ ತನಿಖೆಯನ್ನು ಆಧರಿಸಿದೆ ಎಂದು ಸಮರ್ಥಿಸಿಕೊಂಡರು.
2013ರಲ್ಲಿ ತನಿಖಾ ಸಂಸ್ಥೆಗಳು ಕಂಡುಕೊಂಡಂತೆ ಸಂಘ ಪರಿವಾರದ ಜತೆ ಪ್ರಬಲ ಸಂಪರ್ಕ ಹೊಂದಿರುವ ಕನಿಷ್ಠ 10 ಮಂದಿ ದೇಶದ ವಿವಿಧೆಡೆಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ತನಿಖಾ ಸಂಸ್ಥೆ ಗಮನಕ್ಕೆ ಬಂದಿತು. ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರು ಈ ವೇಳೆ, ‘‘ಕಾಂಗ್ರೆಸ್ ಪಕ್ಷ ತಮ್ಮ ಸಂಘಟನೆಗೆ ಉಗ್ರ ಸಂಘಟನೆ ಎಂಬ ಮಸಿ ಬಳಿಯಲು ಹೊರಟಿದೆ’’ ಎಂದು ಆಪಾದಿಸಿದರು. ಮತ್ತೊಮ್ಮೆ ಧಾರ್ಮಿಕ ಮುಖಂಡ ರವಿಶಂಕರ್ ಕೂಡಾ ‘ಕೇಸರಿ ಉಗ್ರರು’ ಎಂಬ ಪದ ಬಳಸುವುದನ್ನು ಆಕ್ಷೇಪಿಸಿದರು
‘ಕೇಸರಿ ಉಗ್ರ’ ಎಂಬ ಪದ ಬಳಕೆಗೆ ಆರೆಸ್ಸೆಸ್ ಆಕ್ಷೇಪಿಸಿದರೂ, ‘ಇಸ್ಲಾಮಿಕ್ ಭಯೋತ್ಪಾದನೆ’ ಎಂಬ ಪದ ಬಳಸುವುದಕ್ಕೆ ಅವರಿಂದ ಯಾವ ಆಕ್ಷೇಪವೂ ಇರಲಿಲ್ಲ. 2011ರಲ್ಲಿ, ಮೋದಿ ಟಿವಿ ಚರ್ಚಾ ಕಾರ್ಯಕ್ರಮವೊದರಲ್ಲಿ, ಅಮೆರಿಕದ ಅವಳಿ ಗೋಪುರಗಳ ಮೇಲೆ ದಾಳಿ ನಡೆದ ಕೃತ್ಯವನ್ನು ಇಸ್ಲಾಮಿಕ್ ಭಯೋತ್ಪಾದನೆ ಎಂದು ಬಣ್ಣಿಸಿದರು.

ಹಿಂದುತ್ವ ವಿಶ್ವದಲ್ಲೇ ಅತ್ಯಂತ ಸಹಿಷ್ಣು ಧರ್ಮ ಎನ್ನುವುದನ್ನು ಆರೆಸ್ಸೆಸ್ ಸದಾ ಪ್ರತಿಪಾದಿಸುತ್ತಲೇ ಬಂದಿತ್ತು. ಆದ್ದರಿಂದ ಕೇಸರಿ ಹಾಗೂ ಭಯೋತ್ಪಾದನೆ ಎನ್ನುವುದು ಪರಸ್ಪರ ವಿರೋಧ ಪದಗಳು. ಅವೆರಡನ್ನೂ ಜತೆ ಸೇರಿಸಲು ಸಾಧ್ಯವಿಲ್ಲ ಎಂಬ ವಾದ ಮಂಡಿಸಿದರು. ಬಿಜೆಪಿಯ ಮಾಜಿ ಮುಖಂಡ ಗೋವಿಂದಾಚಾರ್ಯ ವಾದಿಸುವಂತೆ, ‘‘ಕೇಸರಿ ಭಯೋತ್ಪಾದನೆ ಎಂದು ಬಣ್ಣಿಸುವುದು ಹಾಲಿನ ಬಣ್ಣ ಕಪ್ಪುಎಂದು ಹೇಳಿದಂತೆ.’’ ಕಳೆದ ವರ್ಷ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಮುಸ್ಲಿಮರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ಪಕ್ಷ ಕೇಸರಿ ಭಯೋತ್ಪಾದನೆ ಎಂಬ ಪಟ್ಟ ಕಟ್ಟಿದೆ ಎಂದು ಹೇಳಿದರು. ಒಂದು ಸಂಘರ್ಷದಲ್ಲಿ ಉಗ್ರಗಾಮಿ ಕೃತ್ಯಗಳನ್ನು ಸಂಘರ್ಷದಲ್ಲಿ ಗೆಲ್ಲುವ ತಂತ್ರವಾಗಿ ಬಳಸಿಕೊಳ್ಳಲು ಹಿಂದೂಗಳು ಅಸಮರ್ಥರೇ?

ಸ್ಥಳೀಯ ಸಮಸ್ಯೆ ಅಲ್ಲ
ವಿಶ್ವದಲ್ಲೇ ಅತ್ಯಂತ ಮಾರಕ ಭಯೋತ್ಪಾದಕರಲ್ಲಿ ಶ್ರೀಲಂಕಾದ ತಮಿಳು ಟೈಗರ್ಸ್‌ ಸೇರುತ್ತಾರೆ. ಅವರು ಕೂಡಾ ಹಿಂದೂಗಳು. 1984ರಲ್ಲಿ, ಆಲ್‌ಖೈದಾದ ಆಂಥ್ರಾಕ್ಸ್ ದಾಳಿಯ ಹಲವು ವರ್ಷಗಳ ಮುನ್ನವೇ, ಹಿಂದೂ ಸ್ವಯಂಘೋಷಿತ ದೇವಮಾನವ ರಜನೀಶ್ ಅವರ ಬೆಂಬಲಿಗರ ಮೂಲಕ ಅಮೆರಿಕಕ್ಕೆ ಜೈವಿಕ- ಭಯೋತ್ಪಾದನೆ ಲಗ್ಗೆ ಇಟ್ಟಿತ್ತು. ಆದ್ದರಿಂದ ಹಿಂದೂಗಳು ಉಗ್ರ ಚಟುವಟಿಕೆಗಳನ್ನು ನಡೆಸಲು ಅಸಮರ್ಥರು ಎನ್ನುವ ವಾದದಲ್ಲಿ ಯಾವುದೇ ಹುರುಳಿಲ್ಲ.

ಸಹಜವಾಗಿಯೇ ಎಲ್ಲ ಧರ್ಮಗಳಂತೆ ಹಿಂದೂ ಧರ್ಮ ಕೂಡಾ ಭಯೋತ್ಪಾದನೆಯನ್ನು ಬೋಧಿಸುವುದಿಲ್ಲ. ಆದರೆ ವಿಶಿಷ್ಟ ಲಕ್ಷಣದ ಧರ್ಮ ಎಂದು ಒಂದು ಧರ್ಮವನ್ನು ವಿಶ್ಲೇಷಿಸಬೇಕಾದರೆ, ಅದರ ವಿನಾಶಕಾರಿ ಮಗ್ಗುಲನ್ನು ಬದಿಗಿರಿಸಬೇಕು. ವಿಶ್ವದ ಎಲ್ಲ ಧರ್ಮಗಳೂ ಒಂದಲ್ಲ ಒಂದು ಹಂತದಲ್ಲಿ ಯುದ್ಧ ಹಾಗೂ ಹಿಂಸೆಯನ್ನು ಸಮರ್ಥಿಸಲು ಹೊರಟು ವಿರೂಪಗೊಂಡಿವೆ. ಹಿಂದೂ ಧರ್ಮ ಕೂಡಾ ಇದಕ್ಕೆ ಹೊರತಾಗಿಲ್ಲ. ಇದೀಗ ಮೋದಿ ಸರಕಾರದ ಕೃಪಾಕಟಾಕ್ಷದಲ್ಲಿ ಹಿಂದುತ್ವ ಗುಂಪುಗಳು ಹಿಂದುತ್ವವನ್ನು ಆಳವಾದ ಕಂದಕಕ್ಕೆ ತಳ್ಳಿವೆ. ಸ್ವಾತಂತ್ರ್ಯ ಬಂದ ಬಳಿಕ, ಆರೆಸ್ಸೆಸ್ ಗಾಂಧೀಜಿಯವರ ಮೇಲೆ ವಾಗ್ದಾಳಿ ನಡೆಸಿ, ಅವರು ಮುಸ್ಲಿಮರ ಬಗ್ಗೆ ಮೆದು ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ಇದು ಬಾಪು ಅವರ ಹತ್ಯೆಗೆ ಕಾರಣವಾಯಿತು. ಗಾಂಧೀಜಿಯವರನ್ನು ಕೊಂದ ನಾಥೂರಾಂ ಗೋಡ್ಸೆ ಕೂಡಾ ಹಿಂದೂ ಹಾಗೂ ಆರೆಸ್ಸೆಸ್‌ನ ಮಾಜಿ ಸದಸ್ಯ.

ಸ್ವಾತಂತ್ರ್ಯೋತ್ತರ ಯುಗದಲ್ಲಿ ಕಾಂಗ್ರೆಸ್ ಪಕ್ಷ ಹಿಂದುತ್ವ ಶಕ್ತಿಗಳನ್ನು ಹಲವು ದಶಕಗಳ ಕಾಲ ದೂರ ಇಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಅವನತಿಯೊಂದಿಗೆ, ಅದರಲ್ಲೂ ಮುಖ್ಯವಾಗಿ ಅಯೋಧ್ಯಾ ಚಳವಳಿಯ ಬಳಿಕದ ದಿನಗಳಲ್ಲಿ, ಹಿಂದುತ್ವ ಗುಂಪುಗಳನ್ನು ಬಲಗೊಳಿಸುವ ಸಲುವಾಗಿ ಕೇಸರಿ ಭಯೋತ್ಪಾದನೆಯ ಅಪಾಯವನ್ನು ಮತ್ತೆ ತಂದೊಟ್ಟಿತು.
1999ರಲ್ಲಿ ಒಡಿಶಾದಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರಕ ಗ್ರಹಾಂ ಸ್ಟೈನ್ ಹಾಗೂ ಇಬ್ಬರು ಮಕ್ಕಳನ್ನು ಜೀವಂತವಾಗಿ ಸುಟ್ಟುಹಾಕಿದ ಘಟನೆಯಲ್ಲಿ ಇದು ಸ್ಪಷ್ಟವಾಗಿ ಗೋಚರವಾಗಿದೆ. ಹಿಂದೂ ಧರ್ಮವನ್ನು ಸಂರಕ್ಷಿಸುವ ಹೆಸರಿನಲ್ಲಿ ಈ ಹೇಯ ಕೃತ್ಯವನ್ನು ಎಸಗಿದ ಧಾರಾ ಸಿಂಗ್, ವಿಶ್ವಹಿಂದೂ ಪರಿಷತ್ತಿನ ಪ್ರಬಲ ರಾಷ್ಟ್ರೀಯವಾದಿ ಯುವ ಸಂಘಟನೆ ಎನಿಸಿಕೊಂಡ ಬಜರಂಗದಳ ಕಾರ್ಯಕರ್ತ.
ಇತ್ತೀಚೆಗೆ ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಎಂ.ಎಂ.ಕಲ್ಬುರ್ಗಿ ಅವರಂಥ ವಿಚಾರವಾದಿಗಳನ್ನು ಹತ್ಯೆ ಮಾಡಿರುವುದನ್ನು ನೋಡಿದರೆ, ಹಿಂದುತ್ವ ಗುಂಪುಗಳ ಬಗ್ಗೆಯೇ ಅನುಮಾನ ಮೂಡುತ್ತದೆ. ಹಿಂದೂ ಭಾವನೆಗಳಿಗೆ ನೋವು ತಂದ ಇಂಥ ಮುಖಂಡರ ಬೇಟೆಗೆ ಹಿಂದೂ ಸಂಘಟನೆಗಳು ಹೊಂಚು ಹಾಕಿದ್ದವು.

ಕಾರವಾನ್ ಮ್ಯಾಗಝಿನ್‌ಗೆ ನೀಡಿದ ಧ್ವನಿಮುದ್ರಿತ ಸಂದರ್ಶನವೊಂದರಲ್ಲಿ, ಸ್ವಾಮಿ ಅಸೀಮಾನಂದ, ‘‘2006ರಿಂದ 2008ರವರೆಗೆ ನಡೆದ ಸರಣಿ ಸ್ಫೋಟಗಳಿಗೆ ಆರೆಸ್ಸೆಸ್ ಅನುಮತಿ ನೀಡಿತ್ತು’’ ಎಂದು ಘೋಷಿಸಿದ್ದರು. ಆದರೆ ಆ ಬಳಿಕ ಅದನ್ನು ನಿರಾಕರಿಸಿದ್ದರು.
ನರೇಂದ್ರ ಮೋದಿ ಪ್ರಧಾನಿಯಾಗಿ ದಿಲ್ಲಿಗೆ ಬಂದ ಬಳಿಕ, ಹಿಂದುತ್ವ ಗುಂಪುಗಳಿಗೆ ಆನೆಬಲ ಬಂದಂತಾಗಿದೆ. ಉತ್ತರಪ್ರದೇಶದಲ್ಲಿ, 15 ಸಾವಿರ ಮಂದಿಯನ್ನು ಹೊಂದಿರುವ ಪ್ರಬಲ ಧರ್ಮಸೇನಾ ಎಂಬ ಹಿಂದೂ ಯುವಕರ ಸಶಸ್ತ್ರ ತಂಡವನ್ನು ಸೃಷ್ಟಿಸಲಾಗಿದ್ದು, ಹಿಂದೂ ರಾಷ್ಟ್ರದ ಬಗ್ಗೆ ಒತ್ತಡ ತರಲು ಈ ಸಂಘಟನೆ ಕೆಲಸ ಮಾಡಲಿದೆ. ದೇಶದ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಹಲವು ತರಬೇತಿ ಕೇಂದ್ರಗಳು ಈಗಾಗಲೇ ತಲೆ ಎತ್ತಿವೆ. ಹಿಂದೂ ಯುವಕರಿಗೆ ಮಿಲಿಟರಿ ಶೈಲಿಯ ಯುದ್ಧಕಲೆಯನ್ನು ಇವರಿಗೆ ಬೋಧಿಸಲಾಗುತ್ತದೆ. ಈ ಮೂಲಕ ಹಿಂದುತ್ವದ ಪ್ರಾಬಲ್ಯವನ್ನು ಉತ್ತೇಜಿಸುವ ಪ್ರಯತ್ನ ನಡೆಯುತ್ತಿದೆ. ನಿಶಾ ಪಹುಜಾ ಅವರ ಸಾಕ್ಷ್ಯಚಿತ್ರ, ‘ದ ವರ್ಲ್ಡ್ ಬಿಫೋರ್ ಹರ್’ ಉಲ್ಲೇಖಿಸುವ ಪ್ರಕಾರ, ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು ಕೂಡ ಈ ಶಿಬಿರಗಳಲ್ಲಿ ತರಬೇತುಗೊಳಿಸಲಾಗಿದೆ.
ಭಾರತದ ವಿರುದ್ಧ ಮೇಲುಗೈ ಸಾಧಿಸುವ ಪ್ರಯತ್ನವಾಗಿ ಇಸ್ಲಾಮಿಕ್ ಉಗ್ರ ಗುಂಪುಗಳ ಪೋಷಕತ್ವ ವಹಿಸಿಕೊಂಡ ಪಾಕಿಸ್ತಾನ ಸೇನೆಗೆ ಈ ತಂತ್ರ ತಿರುಗುಬಾಣವಾಗುತ್ತಿದೆ. ಮೋದಿ ಕೂಡಾ ಅದೇ ತಪ್ಪನ್ನು ಮಾಡುತ್ತಿದ್ದು, ಹಿಂದೂ ಜಿಹಾದಿಗಳನ್ನು ಮರೆ ಮಾಚುತ್ತಿದ್ದಾರೆ. ನಮ್ಮ ಹಿಂದೆಯೇ ಇರುವ ಇಂಥ ವಿಷಸರ್ಪಗಳು ಭಾರತದ ಶಾಂತಿ ಮತ್ತು ಭದ್ರತೆಗೆ ದೊಡ್ಡ ಅಪಾಯವಾಗುವುದು ನಿಸ್ಸಂದೇಹ.

share
ಅಶೋಕ್ ಸ್ವೈನ್
ಅಶೋಕ್ ಸ್ವೈನ್
Next Story
X