ವಿದ್ಯಾರ್ಥಿ ತಂಡಗಳ ನಡುವೆ ಹೊಡೆದಾಟ
ಮಂಗಳೂರು, ಮೇ 25: ನಗರದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ತಂಡವೊಂದಕ್ಕೆ ಅದೇ ಕಾಲೇಜಿನ ಮತ್ತೊಂದು ತಂಡದ ವಿದ್ಯಾರ್ಥಿಗಳು ಥಳಿಸಿದ ಘಟನೆ ಇಂದು ಸಂಜೆ ನಡೆದಿದೆ. ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಕಾಲೇಜಿನ ಎರಡು ವಿದ್ಯಾರ್ಥಿ ತಂಡಳ ನಡುವೆ ಆಗಾಗ್ಗ ಸಣ್ಣಮಟ್ಟಿನ ಘರ್ಷಣೆಗಳಾಗುತ್ತಿತ್ತು ಎನ್ನಲಾಗಿದ್ದು, ಒಂದು ಬಣದ 5 ಮಂದಿ ವಿದ್ಯಾರ್ಥಿಗಳು ಮತ್ತೊಂದು ಬಣದ 5 ಮಂದಿ ವಿದ್ಯಾರ್ಥಿಗಳು ನಗರದಲ್ಲಿ ಕಾರಿನಲ್ಲಿ ಸುತ್ತುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಬಣದ ವಿದ್ಯಾರ್ಥಿಗಳು ಕಾರಿನಲ್ಲಿ ಕದ್ರಿಯಿಂದ ಕಂಕನಾಡಿಯತ್ತ ತೆರಳುತ್ತಿದ್ದರು. ಇದನ್ನು ಗಮನಿಸಿದ ಮತ್ತೊಂದು ತಂಡದವರು ಹಿಂಬಾಲಿಸಿ ಬಂದು ಸೈಂಟ್ ಅಗ್ನೆಸ್ ಕಾಲೇಜಿನ ಎದುರು ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕದ್ರಿ ಠಾಣಾ ಪೊಲೀಸರು ಹಲ್ಲೆಕೋರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





