ಪಿಸಿಎಂಬಿ ನಾಲ್ಕೂ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಪುತ್ತೂರಿನ ವರ್ಷಾ

ಪುತ್ತೂರು, ಮೇ 25:ಪುತ್ತೂರಿನ ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ಪಿ. ವಿಜ್ಞಾನ ವಿಭಾಗದಲ್ಲಿ 591 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರಗಳಲ್ಲಿ ಪೂರ್ತಿ ತಲಾ ನೂರು ಅಂಕ ಪಡೆದಿರುವ ವರ್ಷಾ ಇಂಗ್ಲೀಷ್‌ನಲ್ಲಿ 94 ಮತ್ತು ಕನ್ನಡದಲ್ಲಿ 97 ಅಂಕ ಪಡೆದಿದ್ದಾರೆ.
ಈಕೆ ಪುತ್ತೂರು ನಗರದ ಏಳ್ಮುಡಿ ಸಮೀಪದ ಪಾಂಗ್ಲಾಯಿ ರಸ್ತೆ ನಿವಾಸಿ ರಮೇಶ್ ಪಿ. ಮತ್ತು ಯಶೋಧಾ ಅವರ ಪುತ್ರಿ.
2014ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವರ್ಷಾ 625ರಲ್ಲಿ 614 ಅಂಕ ಪಡೆಯುವ ಮೂಲಕ ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕೇಂದ್ರ ಸರಕಾರದ ಸಹಯೋಗದೊಂದಿಗೆ ನಡೆಸುವ ಅಖಿಲ ಭಾರತ ಮಟ್ಟದ ಪ್ರತಿಷ್ಠಿತ ಕೆವಿಪಿವೈ ಪರೀಕ್ಷೆಯಲ್ಲಿ ಇತ್ತೀಚೆಗಷ್ಟೇ 577ನೆ ರ್ಯಾಂಕ್ ಪಡೆದಿರುವ ವರ್ಷಾ, ಈ ಮೂಲಕ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಆಯ್ಕೆಯಾಗಿದ್ದಾರೆ.





