ಗುಲ್ಬರ್ಗ ಸೊಸೈಟಿ ಪ್ರಕರಣ: ಜೂ.2ರಂದು ತೀರ್ಪು ಸಾಧ್ಯತೆ
ಅಹ್ಮದಾಬಾದ್,ಮೇ 25: ಗುಜರಾತ್‌ನಲ್ಲಿ 2002ರಲ್ಲಿ ಗೋಧ್ರೋತ್ತರ ಗಲಭೆಗಳ ಸಂದರ್ಭದ ಗುಲ್ಬರ್ಗ ಹೌಸಿಂಗ್ ಸೊಸೈಟಿ ದಂಗೆ ಪ್ರಕರಣದಲ್ಲಿ ತನ್ನ ತೀರ್ಪನ್ನು ಇಲ್ಲಿಯ ವಿಶೇಷ ನ್ಯಾಯಾಲಯವು ಜೂನ್ 2ರಂದು ಪ್ರಕಟಿಸುವ ಸಾಧ್ಯತೆಯಿದೆ. ಈ ಘಟನೆಯಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಮತ್ತು ಇತರ 68 ಜನರು ಕೊಲ್ಲಲ್ಪಟ್ಟಿದ್ದರು.
ವಿಶೇಷ ನ್ಯಾಯಾಧೀಶ ಪಿ.ಬಿ.ದೇಸಾಯಿ ಅವರು ಜೂ.2ರಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಬುಧವಾರ ಸಂಬಂಧಿಸಿದ ವಕೀಲರಿಗೆ ನೋಟಿಸುಗಳನ್ನು ಹೊರಡಿಸಿದರು.
ಈ ಮೊದಲು ಕಳೆದ ವರ್ಷದ ಸೆ.22ರಂದು ವಿಚಾರಣೆಯು ಮುಗಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಮೇ 31ರೊಳಗೆ ತೀರ್ಪನ್ನು ಪ್ರಕಟಿಸುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶ ನೀಡಿತ್ತು.
Next Story





