ಬಾಲಾಪರಾಧಿಯ ಜಾಮೀನಿಗೆ ಅರ್ಜಿ ಅಗತ್ಯವಿಲ್ಲ: ನ್ಯಾಯಾಲಯ
ಹೊಸದಿಲ್ಲಿ, ಮೇ 25: ಬಾಲಾಪರಾಧಿಯೊಬ್ಬನ ಬಿಡುಗಡೆಗೆ ಜಾಮೀನು ಅರ್ಜಿಯ ಅಗತ್ಯವಿಲ್ಲ. ಬಾಲಕನನ್ನು ಎಷ್ಟು ಕಾಲ ಸುಧಾರಣಾ ಗೃಹದಲ್ಲಿ ಇರಿಸಿಕೊಳ್ಳಬೇಕೆಂಬುದು ಬಾಲಾಪರಾಧ ನ್ಯಾಯ ಮಂಡಳಿಯ ವಿಮೋಚನೆಗೆ ಬಿಟ್ಟ ವಿಚಾರವೆಂದು ದಿಲ್ಲಿಯ ನ್ಯಾಯಾಲಯವೊಂದು ತೀರ್ಪು ನೀಡಿದೆ.
32ರ ಹರೆಯದ ಮಾರುಕಟ್ಟೆ ಕಾರ್ಯವಾಹಿಯೊಬ್ಬನನ್ನು ತನ್ನ ಮರ್ಸಿಡಿಸ್ ಕಾರಿನಡಿ ಹಾಕಿ ಕೊಂದಿದ್ದ ಬಾಲಕನೊಬ್ಬನಿಗೆ ಜಾಮೀನು ಮಂಜೂರು ಮಾಡಿರುವುದನ್ನು ಅದು ಎತ್ತಿ ಹಿಡಿದಿದೆ.
ಬಾಲ ನ್ಯಾಯ ಕಾಯ್ದೆಯ (ಮಕ್ಕಳ ಘೋಷಣೆ ಹಾಗೂ ರಕ್ಷಣೆ) ಅನ್ವಯ ಅಪ್ರಾಪ್ತ ವಯಸ್ಕನೊಬ್ಬನಿಗೆ ಸಂಬಂಧಿಸಿದ ನಿಭಾಯಿಸುವ ಆತನ ಕಲ್ಯಾಣವನ್ನು ಗಮನದಲ್ಲಿರಬೇಕೆಂದು ನ್ಯಾಯಾಲಯ ಹೇಳಿದೆ.
ಎಪ್ರಿಲ್ 4ರಂದು ಸಿದ್ಧಾರ್ಥ ಶರ್ಮಾ ಎಂಬವರು ಉತ್ತರ ದಿಲ್ಲಿಯ ಲುಡ್ಲೊ ಕ್ಯಾಸೆಲ್ ಸ್ಕೂಲ್‌ನ ಸಮೀಪ ರಸ್ತೆ ದಾಟಲು ಪ್ರಯತ್ನಿಸಿದಾಗ, ತನ್ನ ತಂದೆಯ ಕಾರಿನಡಿಗೆ ಹಾಕಿ ಅವರನ್ನು ಕೊಂದಿದ್ದ ಬಾಲಕನಿಗೆ ಜಾಮೀನು ಮಂಜೂರು ಮಾಡಿದ ಬಾಲನ್ಯಾಯ ಮಂಡಳಿಯ ಆದೇಶವನ್ನು ಎತ್ತಿ ಹಿಡಿಯುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇತ್ತೀಚೆಗೆ ಪ್ರಾಪ್ತ ವಯಸ್ಕನಾಗಿರುವ ಹುಡುಗನಿಗೆ, ಆತ ಯಾವುದೇ ಅರ್ಜಿಯನ್ನು ದಾಖಲಿಸಿದೆ ಮಂಡಳಿಯು ಜಾಮೀನು ಮಂಜೂರು, ಮಾಡಿದೆಯೆಂಬ ಮೃತನ ಕುಟುಂಬಿಕರು ಹಾಗೂ ದಿಲ್ಲಿ ಪೊಲೀಸರ ಪರ ವಕೀಲರ ವಾದವನ್ನು ಹೆಚ್ಚುವರಿ ಸತ್ರ ನ್ಯಾಯಾಧೀಶ ಅರವಿಂದ್ ಕುಮಾರ್ ತಿರಸ್ಕರಿಸಿದ್ದಾರೆ.





