ಪತ್ರಿಕೋದ್ಯಮ ಕಲಿಯಲು ಅರ್ನಬ್ ಗೆ ಟ್ರೈನಿ ಹುದ್ದೆಯ ಕೊಡುಗೆ ನೀಡಿದ ತೆಹಲ್ಕಾ ತಂಡ
ಹೊಸದಿಲ್ಲಿ, ಮೇ 26: ಟೈಮ್ಸ್ ನೌ ಟಿವಿ ಚಾನೆಲಿನ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಇತ್ತೀಚೆಗೆ ಸಂವಾದ ಕಾರ್ಯಕ್ರಮವೊಂದರಲ್ಲ ಮುಸ್ಲಿಮ್ ಪತ್ರಕರ್ತನೊಬ್ಬನನ್ನು ಐಎಸ್ ಪರ ಎಂದು ಹೇಳಿ ಸಾಕಷ್ಟು ವಿವಾದಕ್ಕೀಡಾಗಿರುವಂತೆಯೇ ತೆಹಲ್ಕಾದ ಮಾಜಿಪತ್ರಕರ್ತ ಅನುರಾಗ್ ತ್ರಿಪಾಠಿಫೇಸ್ ಬುಕ್ ಪೋಸ್ಟ್ ಒಂದರ ಮುಖಾಂತರ ಗೋಸ್ವಾಮಿಯನ್ನು ಖಂಡಿಸಿದ್ದಾರಲ್ಲದೆ ತಾನು ಹಾಗೂ ತೆಹಲ್ಕಾದಲ್ಲಿರುವ ಇತರ ಪತ್ರಕರ್ತರು ತೆಹಲ್ಕಾದಲ್ಲಿ ಟ್ರೈನೀ ಹುದ್ದೆಯನ್ನು ನೀಡಿ ಅವರಿಗೆ ಪತ್ರಿಕೋದ್ಯಮದ ಕೆಲವು ‘ಬೇಸಿಕ್ಸ್’ ಕಲಿಯುವಅವಕಾಶ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಅವರ ಫೇಸ್ ಬುಕ್ಪೋಸ್ಟ್ -ನಲ್ಲಿ ಅವರು ಸಹಿತ ಹಲವು ಪತ್ರಕರ್ತರಿರುವ ಫೊಟೋ ಕೂಡ ಹಾಕಲಾಗಿದ್ದು ಹೀಗೆಂದು ಬರೆದಿದೆ -‘‘ಅರ್ನಬ್ ಗೋಸ್ವಾಮಿ ನೀವುಅಸದ್ ಅಶ್ರಫ್ ಅಥವಾ ಬೇರೆ ಯಾವುದಾದರೂ ಪತ್ರಕರ್ತ ಅಥವಾ ತೆಹಲ್ಕಾದ ಮಾಜಿ ಪತ್ರಕರ್ತರ ಗುಣಮಟ್ಟಕ್ಕೆ ಸರಿಗಟ್ಟಲಾರರೆಂಬುದು ನಿಮಗೆ ಗೊತ್ತಿದೆಯಲ್ಲವೇ? ನಿಮ್ಮಲ್ಲಿ ಪ್ರಾಮಾಣಿಕತೆ, ವಿನಯ ಹಾಗೂ ನ್ಯಾಯಸಮ್ಮತವಾಗಿರುವಂತಹ ಗುಣಗಳಿಲ್ಲದ ಕಾರಣ... ನನ್ನನ್ನು ಬಿಡಿ, ತೆಹಲ್ಕಾದಲ್ಲಿರುವ ಹೊಸದಾಗಿ ಸೇರ್ಪಡೆಯಾದ ಪತ್ರಕರ್ತನೂ ನಿಮಗಿಂತ ಉತ್ತಮರಾಗಿರುತ್ತಾರೆ. ನಾವು ನಿಮಗೆ ತೆಹಲ್ಕಾದಲ್ಲಿ ಇಂಟರ್ನ್ ಹುದ್ದೆಯನ್ನು ನೀಡಿ ನಿಮಗೆ ಪತ್ರಿಕೋದ್ಯಮದ ಕೆಲವೊಂದು ಬೇಸಿಕ್ಸ್ ಕಲಿಯುವ ಅವಕಾಶ ಒದಗಿಸಲಿದ್ದೇವೆ, ಆದರೆ ನಿಮಗೆ ಆಸಕ್ತಿಯಿದ್ದಲ್ಲ್ಲಿ ಮಾತ್ರ. ಅಸದ್ ಅವರನ್ನು ನನ್ನ ಸಹೋದ್ಯೋಗಿಯಾಗಿ ಪಡೆದಿರುವುದು ನನಗೆ ಗೌರವ ತಂದಿದೆ ಹಾಗೂ ನಾನು ಯಾವತ್ತೂ ಸ್ಟ್ಯಾಂಡ್ ವಿದ್ ಅಸದ್ ಅಶ್ರಫ್.’’
ಟೈಮ್ಸ್ ನೌ ಚಾನೆಲ್ ಈಗಾಗಲೇ ತನಗೆ ಮುಜುಗರವಾಗುವ ಸನ್ನಿವೇಶ ಬಂದಾಗಲೆಲ್ಲಾ ಕೇಂದ್ರ ಸರಕಾರವನ್ನು ಸಮರ್ಥಿಸುತ್ತಿರುವುದು ಸಾಕಷ್ಟುಆಶ್ಚರ್ಯ ಹುಟ್ಟಿಸುತ್ತಿದೆ.
ಜನತಾಕಾರಿಪೋರ್ಟರ್.ಕಾಂ ಇದರ ಮುಖ್ಯ ಸಂಪಾದಕ ರಿಫತ್ ಜಾವೈದ್ ಹೀಗೆಂದು ಹೇಳುತ್ತಾರೆ ‘‘ಮೋದಿ ಸರಕಾರದ ಎರಡನ ವಾರ್ಷಿಕೋತ್ಸವದ ನಿಮಿತ್ತ ಅಮಿತಾಭ್ ಬಚ್ಚನ್ ಸೇವೆ ಪಡೆಯಲು ನಿರ್ಧರಿಸಿದ್ದಕ್ಕೆಕಾಂಗ್ರೆಸ್ ಪಕ್ಷ ಸರಕಾರವನ್ನು ಟೀಕಿಸಿದ ಹಿನ್ನೆಲೆಯಲ್ಲಿ ಅರ್ನಬ್ ಅವಸವಸರವಾಗಿ ನೇರ ಪ್ರಸಾರ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡುಸರಕಾರವನ್ನು ಸಮರ್ಥಿಸಿರುವುದನ್ನು ನೀವು ನೋಡಬೇಕು.’’ ‘‘ಟೈಮ್ಸ್ ನೌ ಕಾಂಗ್ರೆಸ್ಸನ್ನು ಟೀಕಿಸಿ ಟ್ವಿಟ್ಟರ್ ಹ್ಯಾಶ್ಟ್ಯಾಗ್ ಒಂದನ್ನೂ ಪ್ರಾರಂಭಿಸಿತು’’ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಇಂಡಿಯಾ ಟುಡೆ ಸಮೂಹದ ಆಡಳಿತ ಸಂಪಾದಕರಾಗಿದ್ದು ನಾಲ್ಕು ಟಿವಿ ಚಾನೆಲ್ಲುಗಳ ನಿರ್ವಹಣೆ ಮಾಡಿದ್ದ ಜಾವೈದ್ ಹೇಳುವಂತೆ ಮೋದಿ ವಿರೋಧಿ ಬೆಳವಣಿಗೆಯಾದಾಗಲೆಲ್ಲಾ ಸರಕಾರವನ್ನು ಟೈಮ್ಸ್ ನೌ ಸಮರ್ಥಿಸಹೊರಟಿರುವುದು ಹಾಗೂ ಇತರ ಚಾನೆಲ್ ಗಳೂ ಇದನ್ನೇ ಅನುಸರಿಸುತ್ತಿರುವುದು ಗಮನಿಸಬೇಕಾದ ಅಂಶವೆಂದಿದ್ದಾರೆ.
ಟೈಮ್ಸ್ ನೌ ಚಾನೆಲ್ಲಿನ ತಾರತಮ್ಯ ನೀತಿಯಿಂದ ರೋಸಿ ಹೋಗಿ ಈ ಹಿಂದೆ ಹಲವು ಖ್ಯಾತನಾಮರು ಈ ಚಾನೆಲ್ಲನ್ನು ಬಹಿಷ್ಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.