ಅಪಘಾತ: ಗಾಯಾಳು ಕಲಾವಿದ ಮೃತ್ಯು
ಸುಳ್ಯ, ಮೇ 26: ಅಪಘಾತದಿಂದ ಗಾಯಗೊಂಡು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಕ್ಷಗಾನ ಕಲಾವಿದ ಶಿವಪ್ಪ ಆಚಾರ್ಯ(62) ಮೃತಪಟ್ಟಿದ್ದಾರೆ.
ಕೊಯನಾಡು ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ ಶಿವಪ್ಪ ಆಚಾರ್ಯ ಕಲ್ಲುಗುಂಡಿಯಲ್ಲಿ ಕಬ್ಬಿಣದ ಕೆಲಸ ಮಾಡುತ್ತಿದ್ದು, ಮೇ 22ರಂದು ಸಂಜೆ ಕೆಲಸ ಮುಗಿಸಿ ಕಲ್ಲುಗುಂಡಿ ಚರ್ಚ್ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
Next Story





