ಜೀವ ಉಳಿಸಿಕೊಳ್ಳಲು ಕುಟುಂಬವೊಂದು ನಾಲ್ಕನೆ ಮಹಡಿಯಿಂದ ಕೆಳಗೆ ಹಾರಿದ ದೃಶ್ಯವನ್ನು ವೀಡಿಯೊದಲ್ಲಿ ನೋಡಿ

ರಷ್ಯಾ, ಮೇ 26: ತಂದೆ ತಾಯಿ ಎಂತಹ ಪ್ರಾಣಸಂಕಟದಲ್ಲಿದ್ದರೂ ತಮ್ಮ ಮಕ್ಕಳಿಗಾಗಿ ಎಂತಹ ಸಾಹಸಕ್ಕಿಳಿಯಲು ಹಿಂಜರಿಯುವುದಿಲ್ಲ. ರಷ್ಯದ ಮಾಸ್ಕೊದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಹೊಗೆ ತುಂಬಿಕೊಂಡಿತ್ತು. ನೆರೆಯವರೆಲ್ಲ ಕೆಳಗೆ ನೆರೆದರು. ಜೀವಉಳಿಸಿಕೊಳ್ಳಲು ಕೆಳಗೆ ಜಿಗಿಯಲು ಹೇಳಿದರು. ಒಂದು ದೊಡ್ಡೆ ಬಟ್ಟೆಯನ್ನು ತಂದು ಹಿಡಿದರು. ಜೀವ ಉಳಿಸಲಿಕ್ಕಾಗಿ ಅಪಾರ್ಟ್‌ಮೆಂಟ್‌ನಿಂದ ಕುಟುಂಬ ಸದಸ್ಯರು ಒಂದೊಂದಾಗಿ ಆ ಬಟ್ಟೆಗೆ ಜಿಗಿದಿದ್ದರಿಂದ ಅವರ ಜೀವ ಉಳಿಯಿತು.
ತಂದೆ ತಾಯಿ ಬಾಲ್ಕನಿಯಿಂದ ಮೊದಲು ತಮ್ಮ ಮಕ್ಕಳನ್ನು ಕೆಳಗೆ ಎಸೆದರು. ಆನಂತರ ಅವರೂ ಕೆಳಗೆ ಹಾರಿದರು. ನಾಲ್ಕು ಮಂದಿಯ ಕುಟುಂಬ ನೆರೆಯವರ ನೆರವಿನಿಂದ ಸುರಕ್ಷಿತವಾಗಿ ಬೆಂಕಿ ಅವಘಡದಿಂದ ಪಾರಾಗಿದೆ. ಮಕ್ಕಳ ತಾಯಿ ಎಲಿನಾ ನ್ಯೂಸ್ ನ್ಯೂಇಂಫಾಮ್‌ಗೆ ಅಪಾರ್ಟ್‌ಮೆಂಟ್‌ನಲ್ಲಿಡೀ ಹೊಗೆ ತುಂಬಿಕೊಂಡಾಗ ನಾವು ಬದುಕಿ ಉಳಿಯುವುದಿಲ್ಲ ಎಂದು ಪತಿಗೆ ಅನಿಸಿತ್ತು. ನಾವೆಲ್ಲರೂ ಬಾಲ್ಕನಿಯ ಬಳಿ ಸೇರಿದೆವು ನಮಗೆ ಇಬ್ಬರು ಮಕ್ಕಳು ಹನ್ನೊಂದು ತಿಂಗಳ ಮಗುವಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇದೆ. ನಂತರ ನಾನು ನನ್ನ ಇಬ್ಬರೂ ಮಕ್ಕಳನ್ನು ಬಾಲ್ಕನಿಯಿಂದ ಕೆಳಗೆ ಎಸೆದೆ. ಆನಂತರ ನಾನು ಹಾರಿದೆ. ಕೊನೆಯಲ್ಲಿ ನನ್ನ ಪತಿ ಹಾರಿದರು ಎಂದು ತಿಳಿಸಿದ್ದಾರೆ.
ಇಬ್ಬರು ಮಕ್ಕಳಿಗೂ ಯಾವುದೇ ಗಾಯವಾಗಿಲ್ಲ. ಆದರೆ ಪತಿಗೆ ಸ್ವಲ್ಪಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ನಂತರ ಸಂಬಂಧಿಸಿದ ಸ್ಥಾನೀಯ ಅಧಿಕಾರಿಗಳು ಕುಟುಂಬದ ನಿರ್ಲಕ್ಷ್ಯಕ್ಕಾಗಿ ಗದರಿಸಿದ್ದಾರೆಂದು ವರದಿಯಾಗಿದೆ.







