ಮೇ 28ರಂದು ಮೂಲರಪಟ್ಣ ಮಸೀದಿ ಉದ್ಘಾಟನೆ
ಬಂಟ್ವಾಳ, ಮೇ 26: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ಣ ಇದರ ಆಧೀನಕ್ಕೊಳಪಟ್ಟಿರುವ ಮುತ್ತೂರು ಮಾರ್ಗದಂಗಡಿ ಆಲಮುಲ್ ಹುದಾ ಅರಬಿಕ್ ಮದರಸ ಮತ್ತು ಮಸೀದಿಯ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಮಸೀದಿಯ ಉದ್ಘಾಟನಾ ಸಮಾರಂಭ ಮೇ 28ರಂದು ಸಂಜೆ ಅಸರ್ ನಮಾಝ್‌ನ ಬಳಿಕ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಅಬ್ದುಲ್ ಹಕೀಂ ತಿಳಿಸಿದ್ದಾರೆ.
ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮಸೀದಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ಉದ್ಘಾಟಿಸಲಿದ್ದಾರೆ. ದುಆಶೀರ್ವಚನ ಹಾಗೂ ಮಸೀದಿಯ ಬಳಿ ನಿರ್ಮಿಸಲು ಉದ್ದೇಶಿಸಿರುವ ನೂತನ ಮದರಸ ಕಟ್ಟಡದ ಶಿಲಾನ್ಯಾಸವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಮಸೀದಿ ಉದ್ಘಾಟನೆಯ ಅಂಗವಾಗಿ ಬಳಿಕ ಮಸೀದಿ ವಠಾರದಲ್ಲಿ ನಡೆಯುವ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಯೆನೆಪೊಯ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞಿ, ಬಜಪೆ ಠಾಣೆ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್, ಮೂಲರಪಟ್ಣ ಜುಮಾ ಮಸೀದಿಯ ಖತೀಬ್ ಅಬ್ದುಲ್ ಖಾದರ್ ಮದನಿ ಸೇರಿದಂತೆ ಧಾರ್ಮಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಧಾರ್ಮಿಕ ಮತ ಪ್ರವಚನ ನಡೆಯಲಿದ್ದು ‘ನಮಾಝ್‌ನ ಮಹತ್ವ’ ಎಂಬ ವಿಷಯದಲ್ಲಿ ಮೂಡುಬಿದಿರೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬೂಬಕ್ಕರ್ ದಾರಿಮಿ ಪ್ರವಚನ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಎಸ್.ಶಾಲಿ, ಅಬ್ದುಲ್ ಹಮೀದ್, ಜವಾದ್ ಎಂ.ಎಸ್. ಉಪಸ್ಥಿತರಿದ್ದರು.







