Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಣಾಜೆ ಗ್ರಾಮ ಸಭೆಯಲ್ಲಿ ಆರೋಪ,...

ಕೊಣಾಜೆ ಗ್ರಾಮ ಸಭೆಯಲ್ಲಿ ಆರೋಪ, ಪ್ರತ್ಯಾರೋಪ

ವಾರ್ತಾಭಾರತಿವಾರ್ತಾಭಾರತಿ26 May 2016 9:07 PM IST
share
ಕೊಣಾಜೆ ಗ್ರಾಮ ಸಭೆಯಲ್ಲಿ ಆರೋಪ, ಪ್ರತ್ಯಾರೋಪ

ಕೊಣಾಜೆ, ಮೇ 26: ಕೊಣಾಜೆ ಪಂಚಾಯತ್‌ನ 2015-16ನೆ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಗುರುವಾರ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದು ಈ ಸಂದರ್ಭ ಗ್ರಾಮಸ್ಥರ ಆರೋಪ ಪ್ರತ್ಯಾರೋಪದೊಂದಿಗೆ ಕೆಲಕಾಲ ಗೊಂದಲದ ವಾತಾವರಣ ಉಂಟಾದ ಘಟನೆಯೂ ನಡೆಯಿತು.

ಗ್ರಾಮಸಭೆಯಲ್ಲಿ ಗ್ರಾಮಸ್ಥರೊರ್ವರು ಎದ್ದು ನಿಂತು, ಪಂಚಾಯತ್ ಸದಸ್ಯರ ಗಮನಕ್ಕೆ ತಾರದೆ ಹಿಟ್ಲರ್ ಮಾದರಿಯಲ್ಲಿ ಕೊಣಾಜೆ ಪಂಚಾಯತ್ ಅಧ್ಯಕ್ಷರು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ 28 ಮಂದಿ ಸದಸ್ಯರುಗಳೇ ಸಾಕ್ಷಿ ಎಂದು ಆರೋಪಿಸಿದಾಗ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಯೋಜನೆಗಳನ್ನು ತರುವಾಗ ಆಯಾ ವ್ಯಾಪ್ತಿಯ ಚುನಾಯಿತ ಪಂಚಾಯತ್ ಸದಸ್ಯರುಗಳ ಗಮನಕ್ಕೆ ತರಬೇಕು. ಆದರೆ ಕೊಣಾಜೆಯಲ್ಲಿ ದಾರಿದೀಪ ಅಳವಡಿಸುವಾಗ ಆಗಲಿ ಚರಂಡಿ ನಿರ್ಮಾಣ ಸಹಿತ ವಿವಿಧ ಯೋಜನೆಗಳನ್ನು ಜಾರಿಗೊಳಿಸುವಾಗ ಪ್ರದೇಶಕ್ಕೆ ಸಂಬಂಧಿಸಿದ ಸದಸ್ಯರ ಗಮನಕ್ಕೆ ತರಲಾಗುತ್ತಿಲ್ಲ. ಇದರಿಂದ ನೊಂದ ಸದಸ್ಯರೇ ‘ ಅಧ್ಯಕ್ಷರು ಹಿಟ್ಲರ್ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದು, 28 ಮಂದಿ ಸದಸ್ಯರ ಮಾತಿಗೆ ಬೆಲೆಕೊಡುತ್ತಿಲ್ಲ’ ಎಂದು ತನ್ನಲ್ಲಿ ತಿಳಿಸಿದ್ದಾರೆ ಎಂಬ ಆರೋಪ ಮಾಡಿದಾಗ ಕೆಲ ಸದಸ್ಯರು ಇಂತಹ ಆರೋಪ ಸುಳ್ಳು, ಹೇಳಿದವರ ಹೆಸರನ್ನು ಗ್ರಾಮ ಸಭೆಯಲ್ಲೇ ತಿಳಿಸುವಂತೆ ಆಗ್ರಹಿಸಿ ಪಟ್ಟು ಹಿಡಿದರು. ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಗ್ರಾಮದಲ್ಲಿ ದಾರಿದೀಪದ ಸಮಸ್ಯೆಯಿದ್ದರೂ ಅಸೈಗೋಳಿಯ ಕೆಎಸ್‌ಆರ್‌ಪಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಿಗೆ ಅಳವಡಿಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಲಕ್ಷಾಂತರ ತೆರಿಗೆ ಪಂಚಾಯಿತಿಗೆ ಪಾವತಿಸುವ ವಿ.ವಿ ಹಾಗೂ ಕೆಎಸ್‌ಆರ್‌ಪಿಯವರು 25 ರಷ್ಟು ದಾರಿದೀಪಗಳಿಗೆ ಒತ್ತಾಯಿಸಿದರೂ ಕೇವಲ 3-4 ದಾರಿದೀಪ ಹಾಕಲಾಗುತ್ತಿದೆ. ಸದ್ಯ ಕುಡಿಯುವ ನೀರಿನ ವ್ಯವಸ್ಥೆಗೂ ಅವರು ಪಂಚಾಯತ್‌ನ ಮೊರೆ ಹೋಗಿದ್ದಾರೆ. ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದುವರಿಯಲಾಗುವುದು ಎಂದರು.

ಪಂಪ್ ಚಾಲಕರ ವೇತನ ಪಂಚಾಯತ್‌ನಿಂದ ನೀಡುತ್ತಿರುವ ಬಗ್ಗೆ ನಿಧಿ ಲೆಕ್ಕಪತ್ರದಲ್ಲಿ ಉಲ್ಲೇಖವಿದೆ. ಆದರೆ ಅಲ್ಲಲ್ಲಿ ಪ್ರತ್ಯೇಕ ನೀರಿನ ಸಮಿತಿ ರಚಿಸಿ ಅಲ್ಲಿ ಸಂಗ್ರಹಿಸಿದ ಹಣವನ್ನು ಪಂಪ್ ಚಾಲಕರಿಗೆ ನೀಡಲಾಗುತ್ತಿದೆ. ಎರಡು ಬಾರಿ ನೀಡುತ್ತಿದ್ದೇವಾ? ಅನ್ನುವ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಆಯಾಯ ನೀರಿನ ಸಮಿತಿಯವರು ಸಂಗ್ರಹಿಸಿದ ಹಣವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲೇ ನೀಡಬೇಕು. ಅಲ್ಲಿಂದ ಕೊಡಬೇಕಾದವರಿಗೆ ಬಟವಾಡೆಯಾಗುತ್ತಿದೆ. ಒಂದೆರಡು ಸಮಿತಿಗಳ ಸೇರ್ಪಡೆ ಪಂಚಾಯತ್‌ನಲ್ಲಿ ಆಗಬೇಕಿದೆ ಎಂದರು.

ರಸ್ತೆ ಬದಿಗಳಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಪಂಚಾಯತ್ ಕ್ರಮಕೈಗೊಳ್ಳಲು ವಿಫಲವಾಗಿದೆ. ಸಿಸಿಟಿವಿಯನ್ನು ಅಳವಡಿಸಿಲ್ಲ, ಅಸೈಗೋಳಿಯಲ್ಲಿ ಪಂಚಾಯತ್ ಅಂಗಡಿಗಳನ್ನು ಏಲಂನಲ್ಲಿ ಪಡೆದುಕೊಂಡವರು ಒಳಬಾಡಿಗೆಗೆ ನೀಡುತ್ತಿದ್ದಾರೆ ಎಂಬ ದೂರುಗಳಿಗೆ ಸ್ಪಂದಿಸಿದ ಅಧ್ಯಕ್ಷರು ಸಿಸಿಟಿವಿ ಖರೀದಿಸಲಾಗಿದೆ. ಆದರೆ ಕಸ ಹಾಕುವವರನ್ನು ಪತ್ತೆಹಚ್ಚಲು ಬ್ರಾಡ್‌ಬ್ಯಾಂಡ್ನ ಅವಶ್ಯಕತೆ ಇದೆ. ಅದರ ನಿರ್ವಹಣೆ ಪಂಚಾಯತ್‌ನಿಂದ ಅಸಾಧ್ಯ. ಅದಕ್ಕಾಗಿ ಖಾಸಗಿಯವರ ಸಹಕಾರದ ಮೊರೆ ಹೋಗಬೇಕಾಗಿದೆ. ಸಿಸಿಟಿವಿ ಅಳವಡಿಸಿ ಬ್ರಾಡ್‌ಬ್ಯಾಂಡ್ ಮೂಲಕ ಇಂಟರ್ನೆಟ್ ಹಾಕಿದಲ್ಲಿ ಕಸ ಹಾಕುವವರನ್ನು ಮೊಬೈಲಿನ ಮುಖೇನ ನೋಡಬಹುದು. ತಕ್ಷಣ ಅವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯ ಎಂದ ಅವರು ಅಂಗಡಿ ಒಳಬಾಡಿಗೆ ಪಡೆದುಕೊಂಡವರ ವಿರುದ್ಧ ಸದ್ಯ ಕ್ರಮಕೈಗೊಳ್ಳಲು ಅಸಾಧ್ಯ. ಮುಂದಿನ ಏಲಂನಲ್ಲಿ ನಿಯಮ ಪಾಲಿಸುವವರಿಗೆ ಮಾತ್ರ ಅಂಗಡಿಗಳನ್ನು ನೀಡುವುದು ಕಡ್ಡಾಯಗೊಳಿಸಲಾಗುವುದು ಎಂದರು.

ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸದಾನಂದ.ಜಿ ನೋಡೆಲ್ ಅಧಿಕಾರಿಯಾಗಿದ್ದರು.

ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಬಾನು, ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ, ಅಬಕಾರಿ ಇಲಾಖೆಯ ನಿರೀಕ್ಷಕ ಸತೀಶ್ ಕುಮಾರ್, ಉಪನಿರೀಕ್ಷಕ ಅಮರ್ ನಾಥ್.ಎಸ್.ಎಸ್.ಭಂಡಾರಿ, ಪಶುಸಂಗೋಪನೆ ಇಲಾಖೆಯ ದೇವಾನಂದ್, ಮೆಸ್ಕಾಂನ ಜೆ.ಇ ವಿನೋದ್ ಕುಮಾರ್, ಪಂಚಾಯತ್ ಉಪಾಧ್ಯಕ್ಷೆ ಲಲಿತಾ. ಎಸ್.ರಾವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ್, ಸಹಿತ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X