Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಗೈದ...

ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಗೈದ ವಿದ್ಯಾರ್ಥಿನಿ ಚೇತನಾಗೆ ಶೇ.83 ಫಲಿತಾಂಶ

ಮೆಡಿಕಲ್ ಕೆಲಸದ ಮಧ್ಯೆಯೂ ಸಾಧನೆ ಮೆರೆದ ವಿದ್ಯಾರ್ಥಿನಿ

ವಾರ್ತಾಭಾರತಿವಾರ್ತಾಭಾರತಿ26 May 2016 9:28 PM IST
share
ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಗೈದ ವಿದ್ಯಾರ್ಥಿನಿ ಚೇತನಾಗೆ ಶೇ.83 ಫಲಿತಾಂಶ

ಸುಳ್ಯ, ಮೇ 26: ಕಷ್ಟಗಳನ್ನು ಮೆಟ್ಟಿ ನಿಂತು, ಮೆಡಿಕಲ್ ಕೆಲಸದ ಮಧ್ಯೆಯೂ ವಿದ್ಯಾರ್ಥಿನಿಯೋರ್ವಳು ಪಿಯುಸಿಯಲ್ಲಿ ಶೇ.83 ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ.

ಅಪ್ಪಅಮ್ಮನ ಆರೈಕೆಯಲ್ಲಿ ಇಷ್ಟಪಟ್ಟು ಶಿಕ್ಷಣ ಪಡೆಯಬೇಕಾದ ಆಕೆ 3ನೆ ವರ್ಷದ ಎಳೆಯ ಪ್ರಾಯದಲ್ಲೇ ಅಮ್ಮನನ್ನು ಕಳೆದುಕೊಂಡಳು. ಸಾಕಿ ಸಲಹಬೇಕಾದ ಅಪ್ಪನೂ ದೂರವಾದ.. ವಿದ್ಯಾಭ್ಯಾಸದ ಮೆಟ್ಟಲು ಹತ್ತುವಾಗಲೇ ಅಪ್ಪ, ಅಮ್ಮ ಯಾರೆಂದು ತಿಳಿಯದ ಆಕೆ ಅಮ್ಮನ ತವರು ಮನೆಯ ಆರೈಕೆಯಲ್ಲಿ ಬೆಳೆದು ಎಸೆಸೆಲ್ಸಿವರೆಗೆ ಓದಿದಳು. ಶೇ.82 ಅಂಕಗಳೊಂದಿಗೆ ಉತ್ತೀರ್ಣಳಾದ ಆಕೆ ಪಿಯುಸಿ ವಿಜ್ಞಾನ ವಿಭಾಗ ಆರಿಸಿಕೊಂಡು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡು ಮೆಡಿಕಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಆದರೆ ಆಕೆಯ ಓದಿನ ಆಸಕ್ತಿ ಮತ್ತೆ ಶಿಕ್ಷಣದತ್ತ ಸೆಳೆಯುವಂತೆ ಮಾಡಿತು.

ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಮೂಲಕ ಖಾಸಗಿಯಾಗಿ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆ ಬರೆದಿರುವ ಆಕೆ ಕೇವಲ 4 ತಿಂಗಳು ಮಾತ್ರ ವ್ಯಾಸಂಗ ಮಾಡಿ 500 ಅಂಕ ಪಡೆದುಕೊಂಡಿದ್ದಾಳೆ. ಆದರೆ ಮುಂದಿನ ಶೈಕ್ಷಣಿಕ ಜೀವನದ ಚಿಂತೆ ಆಕೆಯನ್ನು ಕಾಡುತ್ತಿದೆ.

ಬೆಳ್ಳಾರೆ ಗ್ರಾಮದ ಮಣಿಮಜಲು ನಿವಾಸಿಯಾಗಿರುವ ವನಿತಾರವರನ್ನು ಬಂಟ್ವಾಳದ ರಾಮ ಮೂಲ್ಯ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಯ ಪುತ್ರಿ ಚೇತನಾ ಕುಮಾರಿ 3 ವರ್ಷದ ಮಗುವಾಗಿದ್ದಾಗ ತಾಯಿ ವನಿತಾ ಕಿಡ್ನಿ ಸಂಬಂಧಿ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದರು. ಆ ಬಳಿಕ ತವರು ಮನೆಯಾದ ಮಣಿಮಜಲಿನಲ್ಲಿ ಮಾವ ಜಾನಪ್ಪಹಾಗೂ ಚಿಕ್ಕಮ್ಮ ಪದ್ಮಿನಿಯ ಆರೈಕೆಯಲ್ಲಿ ಬೆಳೆದ ಚೇತನಾ ಪ್ರೌಢ ಶಿಕ್ಷಣವನ್ನು ಪೂರೈಸಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣಗೊಂಡು ಮೆಡಿಕಲ್ ಕೆಲಸಕ್ಕೆ ಸೇರಿಕೊಂಡಳು. ಆದರೆ ಓದು ಆಸಕ್ತಿ ಆಕೆಯಲ್ಲಿ ಮತ್ತೆ ಜೀವಂತವಾಗಿ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಾ ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆಯಲು ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಗೆ ಸೇರಿದಳು. ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಪಡೆಯುತ್ತಿದ್ದ ಚೇತನಾ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 500 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ.

ಮೆಡಿಕಲ್‌ನಲ್ಲಿ ಕೆಲಸ

ಅಪ್ಪ ಅಮ್ಮನ ಆರೈಕೆಯಲ್ಲಿ ಬೆಳೆಯಬೇಕಾದ ಚೇತನಾ ಅಮ್ಮನನ್ನು ಕಳೆದುಕೊಂಡ ಬಳಿಕ ಊರಿಗೆ ಬಂದಿದ್ದು, ತನ್ನ ಅಪ್ಪಎಲ್ಲಿದ್ದಾರೆಂಬುದೇ ತಿಳಿದಿಲ್ಲ. ಆದರೂ ಧೃತಿಗೆಡದೆ ಮಾವನ ಮನೆಗೋ ಚಿಕ್ಕಮನ ಮನೆಗೋ ಹೋಗಿ ಮೆಡಿಕಲ್ ಕೆಲಸವನ್ನೂ ನಿರ್ವಹಿಸುತ್ತಿದ್ದಾಳೆ. ಚೇತನಾಳ ವಿದ್ಯಾಭ್ಯಾಸಕ್ಕೆ ಆಕೆಯ ಚಿಕ್ಕಮ್ಮ ಪದ್ಮಿನಿ ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ. ಪಿಯುಸಿ ಖಾಸಗಿ ಪರಿಕ್ಷೆ ಬರೆದರೂ 4 ತಿಂಗಳೂ ಮಾತ್ರ ತರಗತಿಗೆ ಹೋಗಿ ಪರೀಕ್ಷೆ ಬರೆದಿರುವ ಈಕೆ ಶೇ.89 ಅಂಕ ಪಡೆದಿದ್ದಾಳೆ.

ಪ್ಯಾರಾ ಮೆಡಿಕಲ್ ಓದುವಾಸೆ

ಪಿಯುಸಿಯಲ್ಲಿ ಶೇ.89 ಅಂಕಗಳೊಂದಿಗೆ ಉತ್ತೀರ್ಣಳಾಗಿರುವ ಚೇತನಾಳಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಪಡೆದು ತನ್ನ ಕಾಲ ಮೇಲೆ ನಿಲ್ಲಬೇಕೆಂಬ ಮಹದಾಸೆಯಿದೆ. ಕಷ್ಟಪಟ್ಟು ಕೈ ತುಂಬಾ ಮಾರ್ಕ್ ಪಡೆದಿರುವ ಈಕೆಗೆ ಮಾತ್ರ ಪ್ಯಾರಾಮೆಡಿಕಲ್ ಕೋರ್ಸ್ ಗಗನ ಕುಸುಮವಾಗಿದೆ. ಚೇತನಾಳ ಮುಂದಿನ ವಿದ್ಯಾಭ್ಯಾಸಕ್ಕೆ ಆಕೆಯ ಪೋಷಕರು ತಮ್ಮಿಂದ ಸಾಧ್ಯವಿರುವಷ್ಟು ಸಹಕಾರ ನೀಡಿದ್ದಾರೆ. ಪ್ಯಾರಾಮೆಡಿಕಲ್ ಕೋರ್ಸ್ ಪಡೆಯುವ ಕನಸು ಹೊತ್ತಿರುವ ಚೇತನಾಳಿಗೆ ಸಹಕಾರ ದೊರೆತಲ್ಲಿ ಆಕೆಯ ಕನಸು ಈಡೇರಬಹುದು.

ಸಂಸ್ಥೆಯಲ್ಲಿ ತರಗತಿಗಳು ಆರಂಭವಾಗಿ 3-4 ತಿಂಗಳು ಕಳೆದಿದ್ದರೂ ಆಸಕ್ತಿಯಿಂದ ಓದಿರುವ ಚೇತನಾ ಶೇ.89 ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾಳೆ. ಆಕೆಯ ಉನ್ನತ ವಿದ್ಯಾಭ್ಯಾಸದ ಕನಸಿಗೆ ದಾನಿಗಳ ಸಹಕಾರ ಬೇಕಿದೆ. ಆಕೆಯ ಮುಂದಿನ ಶಿಕ್ಷಣಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ನೀಡಲು ಸಂಸ್ಥೆ ಸಿದ್ಧವಿದೆ.

ಉಮೇಶ್ ಮಣಿಕ್ಕಾರ, ನಿರ್ದೇಶಕರು, ಜ್ಞಾನದೀಪ ಬೆಳ್ಳಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X