ಮೀನುಗಾರಿಕೆ ದೋಣಿಗಳಿಗೆ ಕಲರ್ ಕೋಡಿಂಗ್ ಕಡ್ಡಾಯ
ಕಾರವಾರ, ಮೇ 26: ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಎಲ್ಲ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಜುಲೈ 30ರೊಳಗೆ ಏಕ ರೂಪದ ಕಲರ್ ಕೋಡಿಂಗ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಎಲ್ಲ ಮೀನುಗಾರರು ತಮ್ಮ ಮೀನುಗಾರಿಕಾ ದೋಣಿಗಳಿಗೆ ಹಲ್-ಮರದ ದೋಣಿಗಳಿಗೆ ಬಿಳಿ, ಸ್ಟೀಲ್ ದೋಣಿಗಳು ತಿಳಿಕೆಂಪು (ರೆಡ್ ಅಕ್ಸೈಡ್), ಫೆಂಡರ್-ಕಪ್ಪು, ಕ್ಯಾಬಿನ್-ಕೆಳ ಅರ್ಧ ನೀಲಿ, ಮೇಲಿನ ಅರ್ಧ-ಬಿಳಿ ಕಲರ್ ಕೋಡಿಂಗ್ ಅಳವಡಿಸುವಂತೆ ಸೂಚಿಸಲಾಗಿದೆ. ಕಲರ್ ಕೋಡಿಂಗ್ ಅಳವಡಿಸದ ದೋಣಿಗಳಿಗೆ ಆಗಸ್ಟ್ ತಿಂಗಳಿನಿಂದ ಡೀಸೆಲ್ ವಿತರಣೆಯನ್ನು ನಿಲ್ಲಿಸಲಾಗುವುದು.
Next Story





