ಕೊಂಚಾಡಿ: ಬ್ಯಾಟರಿ ಕಳವು
ಮಂಗಳೂರು, ಮೇ 26: ಕೊಂಚಾಡಿ ಮಂದಾರಬೈಲ್ ಬಳಿಯ ರಿಲಾಯನ್ಸ್ ಟವರ್‌ನಿಂದ ಕಳ್ಳರು ಬ್ಯಾಟರಿ ಕಳವು ಮಾಡಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳವಾಗಿರುವ ಬ್ಯಾಟರಿಯ ವೌಲ್ಯ 49, 000 ರೂ.ಎಂದು ಅಂದಾಜಿಸಲಾಗಿದೆ. ಟವರ್‌ನ ತಾಂತ್ರಿಕ ತಜ್ಞರು ವೀಕ್ಷಣೆಗೆಂದು ಗುರುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾವೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





