ಕಮ್ಯುನಿಸ್ಟ್ ಸಚಿವರಿಗೆ 13 ನಂಬ್ರದ ಕಾರು ಬೇಡ !
ತಿರುವನಂತಪುರಮ್, ಮೇ 26 : ಕೇರಳದ ನೂತನ ಸರಕಾರದ ಸಚಿವರು ಪ್ರಮಾಣ ವಚನ ಸ್ವೀಕರಿಸಿ ತಮ್ಮ ತಮ್ಮ ಇಲಾಖೆಗಳ ಉಸ್ತುವಾರಿ ಹೊತ್ತುಕೊಳ್ಳಲು ಅಣಿಯಾಗಿದ್ದಾರೆ. ಹೊಸ ಸಚಿವರಿಗೆ ಕಾರುಗಳನ್ನು ಮಂಜೂರು ಮಾಡುವಾಗ ಹೊಸ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೋಂದಣಿ ಸಂಖ್ಯೆ 1 ಇರುವ ಕಾರು ನೀಡಲಾಗಿದೆ. ರಾಜ್ಯ ಸರಕಾರದ ಕಾರುಗಳಾದ್ದರಿಂದ 1,2,3,4... ಹೀಗೆ ಕ್ರಮವಾಗಿ ನೋಂದಣಿ ಸಂಖ್ಯೆಯ ಕಾರುಗಳನ್ನು ಸಚಿವರಿಗೆ ನೀಡಲಾಗುತ್ತದೆ. ಆದರೆ 13 ಸಂಖ್ಯೆಯ ಕಾರು ಮಾತ್ರ ಬಡವಾಗುವ ಸಾಧ್ಯತೆ ನಿಚ್ಚಳವಾಗಿದೆ. ಏಕೆಂದರೆ ಆ ಕಾರು ಯಾವ ಸಚಿವರಿಗೂ ಬೇಡವಾಗಿದೆ.
ಈ ಹಿಂದಿನ ಎಡರಂಗದ ಸರಕಾರ ಇರುವಾಗ ಎಂ. ಎ. ಬೇಬಿ ಅವರು 13 ನೊಂದಣಿಯ ಕಾರು ಬಳಸುತ್ತಿದ್ದರು. ಆದರೆ ಈ ಕಮ್ಯುನಿಸ್ಟ್ ಸರಕಾರದ ಸಚಿವರಿಗೆ 13 ಸಂಖ್ಯೆ ಬಗ್ಗೆ ಅಲರ್ಜಿ ಇದೆ. ಇದು ಚರ್ಚೆಗೆ ಕಾರಣವಾಗಿದೆ. ಕಮ್ಯುನಿಸ್ಟರು ಯಾವಾಗಿನಿಂದ ಸಂಖ್ಯೆಯ ಅದೃಷ್ಟ ನಂಬಲು ಪ್ರಾರಂಭಿಸಿದರು ಎಂದು ಜನರು , ವಿಪಕ್ಷಗಳು ಆಡಿಕೊಳ್ಳುತ್ತಿವೆ.
Next Story