ಮುಸ್ಲಿಮರು, ಏಕಾಂಗಿಗಳಿಗೆ ಬಾಡಿಗೆ ಮನೆ ಇಲ್ಲ!
ಮುಂಬೈನಲ್ಲಿ ಅಲಿಖಿತ ಸಂಹಿತೆ

ಹೆಚ್ಚಿನ ಮುಸ್ಲಿಂ ದಂಪತಿಗಳಿಂದ ಇಂಥ ಭಯಾನಕ ಕಥೆಗಳನ್ನು ನಾನು ಕೇಳಿದ್ದೇನೆ ಹಾಗೂ ಇದಕ್ಕೆ ಹಾಸ್ಯಾಸ್ಪದ ನೆಪಗಳನ್ನೂ ನೋಡಿದ್ದೇನೆ. ಕೆಲವೊಂದು ನಿದರ್ಶನಗಳಲ್ಲಂತೂ ನೇರವಾಗಿ ''ಕ್ಷಮಿಸಿ, ಮುಸ್ಲಿಮರಿಗೆ ಅವಕಾಶವಿಲ್ಲ'' ಎಂಬ ಮಾತನ್ನೂ ಕೇಳಿಸಿಕೊಂಡಿದ್ದೇನೆ. ದಶಕಗಳ ಬಳಿಕ ನಾನು ನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದೇನೆ. ಆದರೆ ಇದು ಹತಾಶೆ ಹಾಗೂ ಅವಮಾನಕ್ಕೆ ಕಾರಣವಾಗಿದೆ. ಇಷ್ಟಾಗಿಯೂ ಇದು ಚಿತ್ರಣದ ಒಂದು ಭಾಗ ಮಾತ್ರ
ಸಮರ್ಪಕ ವಸತಿ ವ್ಯವಸ್ಥೆ ಬಗ್ಗೆ ವರದಿ ಮಾಡಲು ಭಾರತಕ್ಕೆ ಆಗಮಿಸಿದ್ದ ವಿಶ್ವಸಂಸ್ಥೆಯ ವಿಶೇಷ ವರದಿಗಾರ, ದೇಶದ ಗೃಹನಿರ್ಮಾಣ ವಲಯದ ಸಮಸ್ಯೆಗಳ ಬಗ್ಗೆ ಕೆಲ ಕಟು ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಇತರ ಹಲವು ಕಳಕಳಿಗಳ ಜತೆಗೆ ಆಕೆ, ಮುಸ್ಲಿಮರೂ ಸೇರಿದಂತೆ ದುರ್ಬಲ ವರ್ಗದವರಿಗೆ ವಸತಿ ವ್ಯವಸ್ಥೆ ಲಭ್ಯತೆಯಲ್ಲಿ ಎದುರಾಗುವ ತಾರತಮ್ಯ ಪರಿಸ್ಥಿತಿ ಬಗ್ಗೆಯೂ ಸುದೀರ್ಘವಾಗಿ ವಿವರಿಸಿದ್ದಾರೆ. ವಿಶ್ವಸಂಸ್ಥೆಯ ಅಂಗಸಂಸ್ಥೆ ಇತ್ತೀಚೆಗೆ ಕೈಗೊಂಡ ಒಂದು ಅಧ್ಯಯನದ ಪ್ರಕಾರ, ದಿಲ್ಲಿ, ಗುರ್‌ಗಾಂವ್ ಹಾಗೂ ನೋಯ್ಡೆದಲ್ಲಿ ಮುಸ್ಲಿಮರು ಬಾಡಿಗೆಗೆ ಮನೆ ಪಡೆಯುವುದು ಕಷ್ಟ ಎನ್ನುವ ಅಂಶ ಬಹಿರಂಗವಾಗಿದೆ.
ಮುಂಬೈನಲ್ಲಿ ವಾಸಿಸುವ ನಮ್ಮಂಥ ಬಹುತೇಕ ಮಂದಿಗೆ ಇದು ಹಳೆ ಸುದ್ದಿ. ಸಸ್ಯಾಹಾರಿಗಳಿಗಷ್ಟೇ ಸೀಮಿತವಾದ ಎಂಬ ಗಡಿ ಹಾಕಿಕೊಂಡಿರುವ ಗಗನಚುಂಬಿ ಕಟ್ಟಡಗಳಲ್ಲಿ ಮುಸ್ಲಿಂ ವ್ಯಕ್ತಿಗಳಿಗೆ ಅಪಾರ್ಟ್‌ಮೆಂಟ್ ಖರೀದಿಸಲು ಅವಕಾಶ ನಿರಾಕರಿಸಲಾಗುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪದೇ ಪದೇ ಬರುತ್ತಲೇ ಇರುತ್ತವೆ. ಇಲ್ಲಿನ ಪರಿಸ್ಥಿತಿಯೇ ಹಾಗೆ. ನಮ್ಮ ಕಿಟಕಿಗಳಲ್ಲಿರುವ ಗ್ರಿಲ್‌ಗಳಂತೆ ಹಾಗೂ ಪಾದಚಾರಿ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸುವಂತೆ ಇದು ನಾವು ಸ್ವೀಕರಿಸಿದ ನಗರ ವಿನ್ಯಾಸದ ಭಾಗ.
ಹೆಚ್ಚಿನ ಮುಸ್ಲಿಂ ದಂಪತಿಗಳಿಂದ ಇಂಥ ಭಯಾನಕ ಕಥೆಗಳನ್ನು ನಾನು ಕೇಳಿದ್ದೇನೆ ಹಾಗೂ ಇದಕ್ಕೆ ಹಾಸ್ಯಾಸ್ಪದ ನೆಪಗಳನ್ನೂ ನೋಡಿದ್ದೇನೆ. ಕೆಲವೊಂದು ನಿದರ್ಶನಗಳಲ್ಲಂತೂ ನೇರವಾಗಿ ‘‘ಕ್ಷಮಿಸಿ, ಮುಸ್ಲಿಮರಿಗೆ ಅವಕಾಶವಿಲ್ಲ’’ ಎಂಬ ಮಾತನ್ನೂ ಕೇಳಿಸಿಕೊಂಡಿದ್ದೇನೆ. ದಶಕಗಳ ಬಳಿಕ ನಾನು ನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದೇನೆ. ಆದರೆ ಇದು ಹತಾಶೆ ಹಾಗೂ ಅವಮಾನಕ್ಕೆ ಕಾರಣವಾಗಿದೆ. ಇಷ್ಟಾಗಿಯೂ ಇದು ಚಿತ್ರಣದ ಒಂದು ಭಾಗ ಮಾತ್ರ.
ಯಾರಿಗಾದರೂ ಎನ್ನುವುದು ಯಾವಾಗ?
ಮುಂಬೈಗೆ ಭೇಟಿ ನೀಡಿ, ಒಂದು ತಿಂಗಳ ಕಾಲ ವಾಸ್ತವ್ಯ ಇರಲು ಆಗಮಿಸುವ ನನ್ನ ಸ್ನೇಹಿತನೊಬ್ಬನಿಗೆ ನಾನು ಸ್ಥಳಾವಕಾಶ ಹುಡುಕುತ್ತಿದ್ದೆ. ಅಂತಿಮವಾಗಿ ನಾನು ಮಧ್ಯವಯಸ್ಕ ದಂಪತಿಯ ಅಂಧೇರಿ ಉಪನಗರದ ಜತೆಗೆ ಲೋಖಂಡವಾಲ ಪ್ರದೇಶದ ಹಲವಾರು ಸಣ್ಣಪುಟ್ಟ ಅಪಾರ್ಟ್‌ಮೆಂಟ್‌ಗಳಿಗೆ ಸುತ್ತುಹೊಡೆದೆ.
ಈ ದಂಪತಿ ಕೊಠಡಿಯನ್ನು ಕೆಲ ವಾರಗಳ ಮಟ್ಟಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆಗಮಿಸುವವರಿಗಾಗಿ ಭೋಗ್ಯಕ್ಕೆ ನೀಡುತ್ತಿದ್ದರು. ನಾವು ಹೋದ ಪ್ರತಿ ಕಡೆಗಳಲ್ಲೂ, ದೊಡ್ಡ ಕೀಲಿಕೈಗಳ ಗೊಂಚಲಿನೊಂದಿಗೆ ಆ ವ್ಯಕ್ತಿ ನಡೆಯುತ್ತಿದ್ದರು. ಕೊನೆಗೊಂದು ಕಡೆ ಹೊಸದಾಗಿ ನಿರ್ಮಾಣವಾದ ಸಂಕೀರ್ಣದಲ್ಲಿ ಭಾಗಶಃ ಕೊಠಡಿಗಳು ಮಾತ್ರ ಭರ್ತಿಯಾಗಿದ್ದವು. ನಿರ್ಜನ ಪ್ರದೇಶದಂತೆ ಕಾಣುತ್ತಿತ್ತು. ಇಲ್ಲಿ ಎಲಿವೇಟರ್‌ಗಳು ಕೆಲಸ ಮಾಡುತ್ತಿರಲಿಲ್ಲ. ನೀರು ಸರಬರಾಜು ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಕೈದೋಟ ಒಣಗಿ ಹೋಗಿತ್ತು. ಕಟ್ಟಡದ ಸಾಮಗ್ರಿಗಳು ಹಾಗೂ ಕಂಬಿಗಳು ನೆಲದ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಕಟ್ಟಡದ ಪ್ರವೇಶದ್ವಾರದ ಬಳಿ, ಮೂವರು ಸೋಮಾರಿ ಯುವಕರನ್ನು ಕಂಡೆವು. ಬಿಗಿದಾದ ಟಿ ಷರ್ಟ್‌ಗಳು ಅವರ ಕಟ್ಟುಮಸ್ತಾದ ದೇಹಕ್ಕೆ ಅಂಟಿಕೊಂಡಿದ್ದವು. ಇವರು ನಟನೆಯ ಆಕಾಂಕ್ಷಿಗಳಂತೆ ಕಾಣುತ್ತಿದ್ದರು. ನಗರದ ಬಹುತೇಕ ಭಾಗಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯ. ಏಕೆಂದರೆ ಇಲ್ಲಿ ಹಲವು ಟಿವಿ ಸ್ಟುಡಿಯೋಗಳು ಹಾಗೂ ನಿರ್ಮಾಣ ಕಚೇರಿಗಳು ಅಧಿಕವಾಗಿರುವುದರಿಂದ ಇದು ಸಾಮಾನ್ಯ. ಅವರ ಅಸ್ತಿತ್ವಕ್ಕೆ ನನ್ನ ಮಾರ್ಗದರ್ಶಕ ತಕ್ಷಣ ಪ್ರತಿಕ್ರಿಯೆ ನೀಡಿದರು. ಆ ಯುವಕರನ್ನು ಹೇಸಿಗೆಯಿಂದ ಕಂಡರು. ‘‘ಈ ಭಾಗದ ಜನ ತೀರಾ ಧನದಾಹಿಗಳು’’ ಎಂದು ಹೇಳುತ್ತಾ ತಮ್ಮ ಕೀಲಿ ಗೊಂಚಲನ್ನು ಅಲುಗಾಡಿಸಿದರು. ‘‘ಯಾರಿಗಾದರೂ ಬಾಡಿಗೆಗೆ ಕೊಡುತ್ತಾರೆ’’. ಹೀಗೆ ಮುಂಬೈನಲ್ಲಿ ಬಾಡಿಗೆ ನಿಮ್ಮನ್ನು ‘ಯಾರ’ನ್ನಾದರೂ ಮಾಡುತ್ತದೆ.
ಯಾವಾಗಲೂ ಎಲ್ಲೆ
ಮುಂಬೈನಲ್ಲಿ ನನ್ನ ಮೊದಲ ದಿನದಿಂದಲೂ, ನಗರದ ಈ ವಿಚಿತ್ರ ಪ್ರದೇಶದಲ್ಲಿ ನಾನು ವಾಸವಿದ್ದೇನೆ. ಪಶ್ಚಿಮ ಉಪನಗರವಾದ ಅಂಧೇರಿಯ ಈ ಭಾಗದಲ್ಲಿ ಮನೋರಂಜನೆ ಹಾಗೂ ಮಾಧ್ಯಮ ಉದ್ಯಮದಲ್ಲಿ ಕೆಲಸ ಮಾಡಲು ನಗರಕ್ಕೆ ಆಗಮಿಸಿದವರೇ ಅಧಿಕವಾಗಿದ್ದಾರೆ. ಹತ್ತು ವರ್ಷಗಳ ಹಿಂದೆ, ಪ್ರತಿ ಬಾರಿ ನಾನು ನನ್ನ ನೆರೆಹೊರೆಯ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ನನ್ನ ಸುತ್ತಲೂ ಯುವ ನಟರು, ಯುವ ನಿರ್ದೇಶಕರು ಪುರುಷರು-ಮಹಿಳೆಯರು ಎಂಬ ಭೇದವಿಲ್ಲದೇ ಚಹಾ ಅಂಗಡಿಗಳಲ್ಲಿ, ಮಾಲ್‌ಗಳಿಗೆ ಹೋಗುವ ಮೆಟ್ಟಲುಗಳಲ್ಲಿ ತಡರಾತ್ರಿಯವರೆಗೂ ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬರುತ್ತಿತ್ತು. ಇಂದು ಈ ಸಮೂಹದ ಬಹುತೇಕ ಮಂದಿ, ಹೊರಗೆ ಹೋದಂತೆ ಕಾಣುತ್ತಿದೆ. ಬಹುಶಃ ನಾನು ಕಂಡಂಥ ನಿರ್ಜನ ಸಂಕೀರ್ಣಗಳಿಗೆ. ಈ ಬಗೆಯಲ್ಲಿ ಕೊಠಡಿಗಳನ್ನು ಬಾಡಿಗೆಗೆ ಕೊಡುವ ಮನೆಗಳು ಬದಿಗಳಲ್ಲಿ ಇರುತ್ತಿದ್ದವು. ಇವಕ್ಕೆ ಒಂದಕ್ಕಿಂತ ಹೆಚ್ಚಿನ ದಾರಿಗಳಿರುತ್ತಿದ್ದವು. ಸಾಮಾನ್ಯವಾಗಿ ಅಪೂರ್ಣ ಅಥವಾ ನಿರ್ಮಾಣ ಹಂತದ ವಸತಿ ಸಂಕೀರ್ಣಗಳಲ್ಲಿ ಇಂಥ ದೃಶ್ಯ ಕಾಣುತ್ತಿತ್ತು.
ಇಂಥ ವಾಸ್ತವ್ಯ ನಿಮ್ಮ ಆದಾಯ ಮಟ್ಟ ಅಥವಾ ನಿಮ್ಮ ನಂಬಿಕೆ, ವೈವಾಹಿಕ ಸ್ಥಿತಿ ಹಾಗೂ ಜಾತಿಗೆ ಅನುಗುಣವಾಗಿ ಹೆಚ್ಚಳ ಅಥವಾ ಕುಸಿತವಾಗುತ್ತಿತ್ತು. ಇಂಥ ಅನುಭವಕ್ಕೆ ಅಪವಾದಗಳೂ ಇವೆ. ಇಂಥ ದೊಡ್ಡ ನಗರದಲ್ಲಿ ವಿಭಿನ್ನ ಅನುಭವಗಳು ನಿಮಗಾಗಬಹುದು. ಆದರೆ ಮೂಲಭೂತವಾಗಿ, ಗರಿಷ್ಠ ವರ್ಗಕ್ಕಿಂತ ಕೆಳಗಿನ ಬಾಡಿಗೆದಾರರಾಗಿದ್ದಲ್ಲಿ, ನೀವು ಅಪೂರ್ಣ ವ್ಯಕ್ತಿ ಎಂಬ ಅರ್ಥದಲ್ಲಿ ಕಾಣಲಾಗುತ್ತಿತ್ತು.
ನಾನು ಮುಂಬೈಗೆ ಬಂದು ಒಂದು ವರ್ಷವಾದಾಗ, ನಾನು ಒಳ್ಳೆಯ ಪ್ರದೇಶಕ್ಕಾಗಿ ಹುಡುಕಾಟ ಆರಂಭಿಸಿದೆ. ಮತ್ತೆ ತಲೆ ಕೆರೆದುಕೊಳ್ಳುವಂಥ ಮನೆ ಭೇಟೆ ಆರಂಭವಾಯಿತು. ಒಬ್ಬ ಬ್ರೋಕರ್ ಜೊತೆಗೆ ಸಣ್ಣ ಮಗುವಿದ್ದ ಯುವ ದಂಪತಿ ಇದ್ದ ಅಪಾರ್ಟ್‌ಮೆಂಟ್ ತಲುಪಿದೆ. ಕೊಠಡಿಯ ಅರ್ಧ ಭಾಗ ಅವರ ಸಾಮಗ್ರಿಗಳಿಂದ ತುಂಬಿತ್ತು. ಕೊಠಡಿಯನ್ನು ಪರಿಶೀಲಿಸಲು ಅವರ ಬ್ಯಾಗ್‌ಗಳ ಮೇಲೆಯೇ ಕಾಲಿಟ್ಟುಕೊಂಡು ಬರುವಂತೆ ದಲ್ಲಾಳಿ ಹೇಳಿದ. ಅವರಿದ್ದ ಕೊಠಡಿಯ ಬಾಡಿಗೆಯನ್ನು ತೀವ್ರವಾಗಿ ಹೆಚ್ಚಿಸಿರುವುದರಿಂದ ಅವರು ಅದನ್ನು ತೆರವು ಮಾಡುವುದು ಅನಿವಾರ್ಯವಾಗಿತ್ತು. ಅವರನ್ನು ಒಕ್ಕಲೆಬ್ಬಿಸುವುದರಿಂದ ಇಂದು ಅವರಿಗಾದ ಸ್ಥಿತಿ ನಾಳೆ ನನಗೂ ಬರಬಹುದು ಎಂಬ ಭೀತಿಯಿಂದ ಅಪರಾಧಿ ಮನೋಭಾವ ಹೊತ್ತು ಹೊರಬಂದೆ.
ನಾನು ಮುಂಬೈಗೆ ಬಂದಾಗ ನನಗೆ 20ರ ಆಸುಪಾಸು ವಯಸ್ಸು. ನನ್ನ ಮೊದಲ ಕೆಲಸದಲ್ಲಿ ನಾನು ಮನೆ ಖರೀದಿ ಮಾಡುವುದಕ್ಕಿಂತ ಬಾಡಿಗೆಗೆ ಪಡೆಯುವುದರಲ್ಲಿನ ಪ್ರಯೋಜನಗಳ ಬಗ್ಗೆ ಲೇಖನ ಬರೆಯುವುದು ನನ್ನಲ್ಲಿ ಆಸಕ್ತಿ ಮೂಡಿಸಿತು. ರಿಯಲ್ ಎಸ್ಟೇಟ್ ಬೆಲೆಗಳು ಗಗನಮುಖಿಯಾಗಿದ್ದವು. ಈ ಆಸಕ್ತಿ ಸಹಜವಾಗಿಯೇ ಹೆಚ್ಚು ವೃತ್ತಿಪರವಾಗತೊಡಗಿತು. ಮುಂಬೈನಲ್ಲಿ ಒಂದು ಮನೆ ಖರೀದಿಸುವುದು ಎಂದರೆ, ಕೇವಲ ಮನೆಯ ಮಾಲಕನಾಗುವುದಕ್ಕಿಂತ ಬಹಳಷ್ಟು ಹೆಚ್ಚಿನ ಗೌರವ. ಸ್ವಂತ ಮನೆ ಹೊಂದಿರುವುದು ಎಂದರೆ ಯಶಸ್ವಿ ವ್ಯಕ್ತಿ, ಬದುಕಿನಲ್ಲಿ ನೆಲೆ ಕಂಡುಕೊಂಡ ವ್ಯಕ್ತಿ ಎಂಬ ಭಾವನೆ. ಅಲೆದಾಟದಿಂದ ಸ್ಥಿರತೆಗೆ ತಲುಪಿದ ಪರಮಾನಂದ ಸ್ಥಿತಿ ಅದು.
ಕೆಲವರಿಗೆ ಈ ಮಾಲಕತ್ವ ಹಲವು ಅಡೆತಡೆಗಳನ್ನು ನೆಟ್ಟಗೆಗೊಳಿಸುವ ಅಗತ್ಯತೆಯನ್ನು ತರುವಂಥದ್ದು. ಇಂಥಹ ಸ್ಪರ್ಧಾತ್ಮಕ ನಗರದಲ್ಲಿ ನೀವು ಒಂದು ಕಡೆ ವಾಸ್ತವ್ಯ ಪಡೆಯಬೇಕಾದರೆ, ಮತ್ತೆ ಯಾರನ್ನಾದರೂ ಒಕ್ಕಲೆಬ್ಬಿಸಲೇಬೇಕು ಎಂಬ ಸ್ಥಿತಿ. ಸುಮಾರು 200 ಅಪಾರ್ಟ್‌ಮೆಂಟ್‌ಗಳಿದ್ದ ಒಂದು ದುಬಾರಿ ಹೌಸಿಂಗ್ ಸೊಸೈಟಿಯಲ್ಲಿ, ಅವಿವಾಹಿತ ಪುರುಷ ಹಾಗೂ ಮಹಿಳೆಯರಿಗೆ ಮನೆ ಬಾಡಿಗೆಗೆ ನೀಡುವುದನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಂಡ ಬಗ್ಗೆ ನನಗೆ ತಿಳಿದುಬಂತು. ಈ ನಿರ್ಧಾರವನ್ನು ಕೆಲ ಮಾಲಕರಷ್ಟೇ ವಿರೋಧಿಸಿದರು. ಅದು ಕೂಡಾ ಇದು ಅನ್ಯಾಯ ಎಂಬ ಕಾರಣಕ್ಕಲ್ಲ; ನಾವು ವಿದೇಶಗಳಲ್ಲಿ ವಾಸವಾಗಿರುವುದರಿಂದ, ಯಾರಿಗೆ ಬಾಡಿಗೆಗೆ ನೀಡಿದರೂ ಚಿಂತೆ ಇಲ್ಲ ಎಂಬ ಕಾರಣಕ್ಕೆ.
ಇಂಥ ತಾತ್ಕಾಲಿಕ ಪ್ರದೇಶಗಳಲ್ಲಿ ಕೆಲಸ ಮಾಡುವ ಬರಹಗಾರನಾಗಿದ್ದ ನನಗೆ ಒಬ್ಬ ಬಾಡಿಗೆದಾರನಾಗಿರುವುರ ಹಿಂದೆ ಅಡಕವಾದ ಗುಪ್ತ ವೆಚ್ಚ ಅಂಶ ಸ್ಪಷ್ಟವಾಗಿ ತಿಳಿದುಬಂತು.
ಮುಂಬೈನಲ್ಲಿ ಮನೆ ಬಾಡಿಗೆಗೆ ನೀಡುವುದಕ್ಕೆ ಹಲವು ನಿಯಮಗಳು ಇವೆ. ಇದು ಒಂದು ಬಗೆಯ ನೀತಿಸಂಹಿತೆ. ಇದರಲ್ಲಿ ನಿಮ್ಮ ನಡವಳಿಕೆ ಹಾಗೂ ಧ್ವನಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು, ಅಪಾಯಕಾರಿ ಅಲ್ಲ ಎನಿಸುವಂತೆ ನಿಮ್ಮನ್ನು ಬಿಂಬಿಸಿಕೊಳ್ಳುವುದು ಅಂದರೆ ಹೆಚ್ಚು ಜಾಗರೂಕತೆಯಿಂದ ಮಾತನಾಡುವುದು, ಹೆಚ್ಚು ದೂರುಗಳನ್ನು ನೀಡದಿರುವುದು, ನಿಮ್ಮ ಇರುವಿಕೆ ಅಥವಾ ನಿಮ್ಮ ಕುಟುಂಬದ ಇರುವಿಕೆ ಇಲ್ಲವೇ ಅತಿಥಿಗಳ ಇರುವಿಕೆಯಿಂದ ನಿಮ್ಮ ಕಟ್ಟಡದ ಯಾರಿಗೂ ತೊಂದರೆಯಾಗದಂತೆ ಎಚ್ಚರ ವಹಿಸುವುದು ಹೀಗೆ. ಪ್ರತಿದಿನವೂ ಕೆಲವೊಂದು ವಿಚಾರದಲ್ಲಿ ರಾಜಿ ಮಾಡಿಕೊಳ್ಳಲೇಬೇಕಾಗುತ್ತದೆ. ನಿಮ್ಮ ಆಯ್ಕೆಯ ಮನೆಗಳಲ್ಲಿ ನೀವು ಆರಾಮದಾಯಕ ಬದುಕು ಮುಂದುವರಿಸಬೇಕಿದ್ದರೆ ನಿಮ್ಮ ಅನಾನುಕೂಲತೆ ಹಾಗೂ ಅನ್ಯಾಯವನ್ನು ನೀವು ನುಂಗಿಕೊಳ್ಳಬೇಕಾಗುತ್ತದೆ.
ಗಲ್ಫ್ ದೇಶಗಳಲ್ಲಿ ಸಾಕಷ್ಟು ಹಣ ಮಾಡಿ, ಮುಂಬೈನ ಪ್ಲಾಟ್‌ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದ ಒಬ್ಬ ಯುವ ಮುಸ್ಲಿಂ ವ್ಯಕ್ತಿಯ ಜತೆ ನಾನು ಒಮ್ಮೆ ಮಾತನಾಡಿದೆ. ನಾನು ವಾಸವಿದ್ದ ಜಾಗದ ಪಕ್ಕದ ಒಂದು ಕಾಲೋನಿಯಲ್ಲಿ, ಉತ್ತಮ ಉದ್ಯಾನವನ, ತಾಜಾ ಬಣ್ಣ, ಭದ್ರತಾ ಸಿಬ್ಬಂದಿ ಹಾಗೂ ವಾಕಿಂಗ್ ಟ್ರ್ಯಾಕ್ ಇದ್ದುದನ್ನು ನನ್ನ ಗಮನಕ್ಕೆ ತಂದರು. ‘‘ಇದು ಭವ್ಯ ವಸತಿ ಸಂಕೀರ್ಣದಂತೆ ಕಾಣಿಸಿತು. ಆದರೆ ಮುಸುಕು ಹಾಕಿದ ಮಹಿಳೆಯರು ಅತ್ತಿಂದಿತ್ತ ಓಡಾಡುತ್ತಿದ್ದುದು ಕಾಣಿಸಿತು. ಅಂದರೆ ಇದು ನಮಗೆ ಮುಕ್ತವಾಗಿದೆ ಎನಿಸಿತು’’ ಎಂದು ಹೇಳಿದ.
ಒಬ್ಬ ದಲ್ಲಾಳಿಯನ್ನು ಸಂಪರ್ಕಿಸಿದಾಗ ಒಂದು ಅಪಾರ್ಟ್‌ಮೆಂಟ್ ಪತ್ತೆ ಮಾಡಿದ. ಆದರೆ ಮಾರಾಟ ನಡೆಯಲಿಲ್ಲ. ಏಕೆಂದರೆ ಅವರು ಮುಸ್ಲಿಂ ವ್ಯಕ್ತಿಗೆ ಮಾರಾಟ ಮಾಡಲು ಇಚ್ಛಿಸಲಿಲ್ಲ ಎಂದು ಆತ ಹೇಳಿದ. ಆತನ ಧ್ವನಿಯಲ್ಲಿ ಯಾವುದೇ ಮುನಿಸು ಅಥವಾ ಕುತೂಹಲವೂ ಇರಲಿಲ್ಲ. ಆತನ ಅಚ್ಚರಿಗೆ ಕಾರಣವಾಗಿದ್ದ ಅಂಶವೆಂದರೆ, ಅಲ್ಲಿಂದ ಹೊರಹಾಕಲ್ಪಟ್ಟದ್ದಲ್ಲ. ಆದರೆ ಭವ್ಯ ಎನಿಸುವಂಥ ಇಂಥ ಪ್ರದೇಶದ, ಆತನಂಥ ಜನರಿಗೆ ಮುಕ್ತವಾಗಿರುವ ಸಾಧ್ಯತೆ. ಆತನ ಧ್ವನಿಯಲ್ಲೇ ಆ ಅಚ್ಚರಿಯನ್ನು ನಾನು ಗಮನಿಸಿದೆ. ಅದು ನನ್ನ ನೆನಪಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿಯುವಷ್ಟರ ಮಟ್ಟಿಗೆ ಅದು ಹರಿತವಾಗಿತ್ತು. ತನಗೆ ತಾನೇ ವಿವರಣೆ ಕೊಟ್ಟುಕೊಂಡ ‘‘ಬಹುಶಃ ನಾನು ನೋಡಿದ ಜನ ಕೇವಲ ಬಾಡಿಗೆಗೆ ನೀಡುತ್ತಾರೆ’’
ಕೃಪೆ: scroll.in







