ರಾಹುಲ್ ಗಾಂಧಿ , ವಿಳಾಸ : ಘಾಝಿಯಾಬಾದ್ ನ ಇಂದಿರಾಪುರಂ !, ವೃತ್ತಿ : ಡ್ರೈವರ್ !

ಹೊಸದಿಲ್ಲಿ , ಮೇ 25: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧೀ ಘಾಝಿಯಾಬಾದ್ ನ ಇಂದಿರಾಪುರಂನಲ್ಲಿ ವಾಸಿಸುತ್ತಿದ್ದಾರಾ ? ಇಲ್ಲ ಎಂದು ಯಾರೂ ಬೇಕಾದರೂ ಉತ್ತರಿಸುತ್ತಾರೆ. ಆದರೆ ಘಾಝಿಯಾಬಾದ್ ನ ಪೊಲೀಸರಿಗೆ ಮಾತ್ರ ಈ ಕನಿಷ್ಟ ಸಾಮಾನ್ಯ ಜ್ಞಾನ ಇಲ್ಲದೇ ಹೋಗಿದೆ. ಅವರ ಪ್ರಕಾರ ರಾಹುಲ್, ಘಾಝಿಯಾಬಾದ್ ನ ಇಂದಿರಾಪುರಂನಲ್ಲಿ ವಾಸಿಸುತ್ತಿರುವ ಕೆಲಸದ ವ್ಯಕ್ತಿ ಅಥವಾ ಡ್ರೈವರ್ !
ಹೀಗೆ ಪೋಲಿಸರನ್ನು ಬೇಸ್ತು ಬೀಳಿಸುವಲ್ಲಿ ವ್ಯಕ್ತಿಯೊಬ್ಬ ಯಶಸ್ವಿಯಾಗಿದ್ದಾನೆ. ರಾಹುಲ್ ಗಾಂಧೀ, ಸನ್ ಆಫ್ ಲೇಟ್ ರಾಜೀವ್ ಗಾಂಧೀ, ವೃತ್ತಿ - ರಾಜಕೀಯ, ಅವಿವಾಹಿತ ಎಂದು ವಿವರ ನೀಡಿರುವ ವ್ಯಕ್ತಿಯೊಬ್ಬ ತಾನು ಘಾಝಿಯಾಬಾದ್ ನ ಇಂದಿರಾಪುರಂನಲ್ಲಿ ವಾಸಿಸುತ್ತಿದ್ದೆನೆಂದು ಪೋಲಿಸರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಈಗ ಪೊಲೀಸರು ತಮ್ಮ ಜೊತೆ ಆಟವಾಡಿದ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.
Next Story





