Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಇತಿಹಾಸದಿಂದ ಯಾಕೆ ಪಾಠ ಕಲಿಯುವುದಿಲ್ಲ?

ಇತಿಹಾಸದಿಂದ ಯಾಕೆ ಪಾಠ ಕಲಿಯುವುದಿಲ್ಲ?

ರಮಾನಂದ ಶರ್ಮಾರಮಾನಂದ ಶರ್ಮಾ26 May 2016 11:35 PM IST
share

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶಗಳನ್ನು ಚುನಾ ವಣೆಯ ಮೊದಲೇ ಗೋಡೆಯ ಮೇಲೆ ಬರೆಯಲಾಗಿತ್ತು. ಆದರೆ, ಎಂದಿನಂತೆ ಕಾಂಗ್ರೆಸ್ ಪಕ್ಷ ಅದನ್ನು ಓದಲು ಪ್ರಯತ್ನಿಸಿಲ್ಲ. ಲೋಕಸಭೆ ಮತ್ತು ದಿಲ್ಲಿ ಚುನಾವಣೆಯ ನಂತರ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತದೆ ಮತ್ತು ಚುನಾವಣಾ ಇತಿಹಾಸದಿಂದ ಪಾಠ ಕಲಿಯುತ್ತದೆ ಎನ್ನುವ ನಿರೀಕ್ಷೆ ಇನ್ನೊಮ್ಮೆ ಸುಳ್ಳಾಗಿದೆ. ಕಾಂಗ್ರೆಸ್ ಒಂದೇ ರಾಷ್ಟ್ರ ಮಟ್ಟದ ಪಕ್ಷ ಮತ್ತು ಉಳಿದ ಪಕ್ಷಗಳೆಲ್ಲ ಲೆಕ್ಕಕ್ಕಿಲ್ಲದ ಪ್ರಾಂತೀಯ ಪಕ್ಷಗಳು ಎಂದು ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷ, ರಾಜಕೀಯ ನಕಾಶೆಯಿಂದ ಕ್ರಮೇಣ ಕಾಣೆಯಾಗುತ್ತಿರುವುದು ಸ್ವತಂತ್ರ ಭಾರತದ ಮಹಾನ್ ರಾಜಕೀಯ ದುರಂತ. ನೆಲಕಚ್ಚಿದರೂ ಇನ್ನೂ ಸೋಲಿಗೆ ಪ್ರಾಮಾಣಿಕ ಆತ್ಮ ವಿಮರ್ಶೆೆ ಮಾಡದೆ, ಸೋಲಿನ ಹಿಂದಿನ ಕಾರಣವನ್ನು ಹುಡುಕಲು ಪ್ರಯತ್ನಿಸದೆ, ತಮ್ಮ ಕೆಲವು ಧುರೀಣರನ್ನು ರಕ್ಷಿಸಲು ಮುಂದಾಗುತ್ತಿರುವುದು ಇನ್ನೊಂದು ವಿಷಾದನೀಯ ಬೆಳವಣಿಗೆ. ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್ ಒಬ್ಬರೇ ಈ ನಿಟ್ಟಿನಲ್ಲಿ ಸ್ವಲ್ಪಧ್ವನಿ ಎತ್ತುವ ಪ್ರಯತ್ನ ಮಾಡಿದ್ದು, ಅರ್ಧ ಸತ್ಯವನ್ನು ಹೇಳಿ ಬೇರೆ ಯಾರಾದರೂ ಪೂರ್ಣಗೊಳಿಸಲಿ ಎಂದು ಕಾಯುತ್ತಿದ್ದಾರೆ.
  
    ಚುನಾವಣೆಯಲ್ಲಿ ಗೆಲುವು ಖಾಯಂ ಅಲ್ಲ. ಹಾಗೆಯೇ ಸೋಲೂ ಅನಿರೀಕ್ಷಿತ ಮತ್ತು ಒಮೊಮ್ಮೆ ಅನಿವಾರ್ಯ ಕೂಡಾ. ಸೋಲು-ಗೆಲುವುಗಳು ಪಾತ್ರವನ್ನು ಬದಲಾಯಿಸಿತ್ತವೆ. ಸೋಲು ಸಹನೀಯವಾಗಿರಬೇಕು ಮತ್ತು ಗೌರವಾನ್ವಿತವಾಗಿರಬೇಕು. ಹಾಗೆಯೇ ಇದಕ್ಕೊಂದು ಕಾರಣವೂ ಇರಬೇಕು. ಆದರೆ, ಕಾಂಗ್ರೆಸ್‌ನ ಸೋಲಿಗೆ ಇವು ಯಾವುದೂ ಇಲ್ಲ. ಇಲ್ಲಿ ಒಬ್ಬಿಬ್ಬರು ವ್ಯಕ್ತಿಗಳ ಮೇಲೆ ಅತಿಯಾದ ಅವಲಂಬನೆ ಮತ್ತು ಕುರುಡು ವಿಶ್ವಾಸ, ಅದೇ ರಾಗ-ತಾಳದಲ್ಲಿ ಅರ್ಥ ಕಳೆದುಕೊಂಡ, ಮಾಸಿದ, ಸವಕಲು ಹಿಡಿದ ಮತ್ತು ದಶಕಗಳಷ್ಟು ಹಳೆಯದಾದ ಘೋಷಣೆಗಳು, ಹೈಕಮಾಂಡ್ ಹೆಸರಿನಲ್ಲಿ ದಿಲ್ಲಿಯಿಂದ ಹಿಡಿತ, ಸ್ಥಳೀಯ ನಾಯಕರ ಮತ್ತು ಸಮಸ್ಯೆಗಳ ನಿರ್ಲಕ್ಷವು ಕಾಂಗ್ರೆಸ್ ಪಕ್ಷವನ್ನು ಈ ಪರಿಸ್ಥಿತಿಗೆ ದೂಡಿವೆ. ಲೋಕಸಭಾ ಚುನಾವಣೆಯ ಸೋಲಿನ ವಿಶ್ಲೇಷಣೆ ಮಾಡಿದ ಅಂಥೋನಿ ಸಮಿತಿ ಸೋಲಿನ ಕಾರಣಗಳನ್ನು ಪಟ್ಟಿ ಮಾಡಿತ್ತು. ಮತ್ತು ್ಚಟ್ಟ್ಟಛ್ಚಿಠಿಜಿಛಿ ಞಛಿಠ್ಠ್ಟಛಿ ನ್ನೂ ಸೂಚಿಸಿತ್ತು. ಆದರೆ, ಆ ವರದಿ ಕಡತ ಸೇರಿತೇ ವಿನಹ ಅದರ ಬಗೆಗೆ ಚರ್ಚೆಯೇ ಆಗಲಿಲ್ಲ. ಮತ್ತು ಈ ಪಕ್ಷದಲ್ಲಿ ಸೋಲಿನ ಪರಾಮರ್ಶೆೆ ಮಾಡದೇ, ಕೆಲವು ಧುರೀಣರನ್ನು ಸದಾ ರಕ್ಷಿಸುವ ಕಾರ್ಯ ನಡೆಯಿತು. ಧ್ವನಿ ಎತ್ತಿದವರನ್ನು ನಿರ್ಲಕ್ಷಿಸಲಾಯಿತು ಅಥವಾ ಅವರನ್ನು ಬಾಯ್ಮುಚ್ಚಿಸಲಾಯಿತು.
 ಕಾಂಗ್ರೆಸ್‌ನ ದ್ವಂದ್ವ ನೀತಿಯೂ ಅದಕ್ಕೆ ಕೈ ಕೊಟ್ಟಿದೆ. 2ಜಿ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಡಿಎಂಕೆ ಸಂಗಡ ತಮಿಳುನಾಡಿನಲ್ಲಿ ದೋಸ್ತಿ, ಬಂಗಾಳದಲ್ಲಿ ಕಡು ವೈರಿ ಎಡ ಪಕ್ಷದೊಂದಿಗೆ ಹೊಂದಾಣಿಕೆ ಮತ್ತು ಕೇರಳದಲ್ಲಿ ಅವರ ವಿರುದ್ಧ ಸೆಣಸಾಟ ಮತದಾರರನ್ನು ಗಲಿಬಿಲಿಗೊಳಿಸಿದೆ. ಭಾಜಪವನ್ನು ಮತ್ತು ಇತರ ಪಕ್ಷಗಳನ್ನು ಅಧಿಕಾರ ವ್ಯಾಮೋಹಿಗಳೆಂದು ಜರಿಯುವ ಕಾಂಗ್ರೆಸ್, ಅಧಿಕಾರಕ್ಕಾಗಿ ತತ್ವಾದರ್ಶಗಳಿಗೆ ತಿಲಾಂಜಲಿ ಕೊಟ್ಟು ಅವಕಾಶವಾದಿ ರಾಜಕಾರಣಕ್ಕೆ ಇಳಿದದ್ದು ಹಲವರಿಗೆ ಹಿಡಿಸಲಿಲ್ಲ. ಅತಿ ಹೆಚ್ಚು ಶಿಕ್ಷಿತ ಮತದಾರರಿರುವ ಕೇರಳದಲ್ಲಿ ಸರಕಾರ ಭ್ರಷ್ಟಾಚಾರ ಮತ್ತು ಹಗರಣಗಳ ಆರೋಪದಲ್ಲಿ ಸಿಲುಕಿತ್ತು. ಕಾಂಗ್ರೆಸ್ ಈ ನಿಟ್ಟಿನಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿದ್ದರೆ ಪಕ್ಷ ಇನ್ನೂ ಹೆಚ್ಚು ಸ್ಥಾನ ಗಳಿಸುತ್ತಿತ್ತೇನೋ? ಅಸ್ಸಾಂನಲ್ಲಿ ಹಿಮಂತ್ ಬಿಸ್ವ ಶರ್ಮರ ಶಕ್ತಿಯನ್ನು ಕೀಳಂದಾಜು ಮಾಡಿ ಅವರನ್ನು ಕಳೆದುಕೊಂಡು, ರಾಜ್ಯವನ್ನೂ ಕಳೆದುಕೊಂಡಿತು.
 ಕಾಂಗ್ರೆಸ್ ಪಕ್ಷದ ದುರಂತ ಎಂದರೆ ಪಕ್ಷದಲ್ಲೀಗ ಸರಿಯಾದ ‘ಥಿಂಕ್‌ಟ್ಯಾಂಕ್’ ಇಲ್ಲ. ಬುದ್ಧ್ದಿಜೀವಿಗಳು, ಮುತ್ಸದ್ಧ್ದಿಗಳೆಂದೆನಿಸಿಕೊಂಡವರು ಮತ್ತು ಅಧಿಕಾರ ಅನುಭವಿಸಿದವರು, ಅಧಿಕಾರ ತಪ್ಪಿದೊಡನೆ ಹಿಂದೆ ಸರಿಯುತ್ತಾರೆ. ಆಧಿಕಾರದ ಅವಕಾಶ ಗೋಚರಿಸಿದಾಗಲೇ ಅವರು ಅನುಭವದ ಹೆಸರಿನಲ್ಲಿ ಅಧಿಕಾರ ಹಿಡಿಯಲು ವೇದಿಕೆಯಲ್ಲಿ ಕಾಣುತ್ತಾರೆ. ಈಗಿರುವ ಎರಡನೆ ಸ್ತರದ ನಾಯಕತ್ವ ಮತ್ತು ಉನ್ನತ ನಾಯಕತ್ವದ ನಡುವೆ ಸಂವಹನ ಕೊರತೆ ಎದ್ದು ಕಾಣುತ್ತದೆ. ಎಲ್ಲವನ್ನೂ ‘‘ಹೈಕಮಾಂಡ್ ಗುಮ್ಮ’’ನ ಹೆಸರಿನಲ್ಲಿ ನಿಭಾಯಿಸುವ ಪರಿ ಪಕ್ಷವನ್ನು ಇನ್ನೂ ಆಳಕ್ಕೆ ದೂಡುತ್ತಿದೆ.
ಬದಲಾವಣೆ ಸಹಜ ಪ್ರಕ್ರಿಯೆ. ಆದರೆ, ಪಕ್ಷ ತನ್ನ ನೂರಾರು ವರ್ಷಗಳ ನೆಲೆಯನ್ನು ಕಳೆದುಕೊಳ್ಳುತ್ತಿರುವುದನ್ನು ನೋಡಿ ಕಾಂಗ್ರೆಸ್ ಕಾರ್ಯಕರ್ತರು ವ್ಯಾಕುಲಗೊಂಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ನಾಯಕತ್ವ ಇನ್ನಾದರೂ ನಿದ್ದೆಯಿಂದ ಎದ್ದೇಳುವುದು ಉತ್ತಮ. ಇಲ್ಲವಾದರೆ......?

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X