ಮುಲ್ಕಿ: ಜಯಕರ್ನಾಟಕ ಸಂಘಟನೆಯ ಘಟಕ ಉದ್ಘಾಟನೆ

ಮಂಗಳೂರು,ಮೇ 26: ಜಯಕರ್ನಾಟಕ ಸಂಘನೆಯ ಮುಲ್ಕಿ ಘಟಕವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಂದ್ರನಾಥ್ ಆಳ್ವ ಇತ್ತೀಚೆಗೆ ಉದ್ಘಾಟಿಸಿದರು.
ನೂತನ ಘಟಕದ ಅಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿಗಾರ್, ಗೌರವಾಧ್ಯಕ್ಷರಾಗಿ ಆದಿಲ್ ಇಸ್ಮಾಯಿಲ್, ಕಾರ್ಯಧ್ಯಕ್ಷರಾಗಿ ದೇವದಾಸ್ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಆಸಿಫ್ ಎಸ್ ಕೋಡಿ , ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಕುಬೆವೂರು ಹಾಗೂ ಹತ್ತು ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಜಯಕರ್ನಾಟಕ ಸಂಘಟನೆಯ ಮೂಡಬಿದ್ರೆ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಉದ್ಯಮಿ ಯಾದವ್ ಕೋಟ್ಯಾನ್ ಉಪಸ್ಥಿತರಿದ್ದರು. ಧನುಷ್ ಗಜನಿ ಸ್ವಾಗತಿಸಿದರು.
Next Story





