ಹಾಂಕಾಂಗ್ ಸ್ಕ್ವಾಷ್ ಟೂರ್ನಿ: ಜೋಶ್ನಾ ಸೆಮಿಫೈನಲ್‌ಗೆ

ದೀಪಿಕಾ ಪಲ್ಲಿಕಲ್ ಮನೆಗೆ
ಹಾಂಕಾಂಗ್, ಮೇ 26: ಹಾಂಕಾಂಗ್ ಇಂಟರ್‌ನ್ಯಾಶನಲ್ ಸ್ಕ್ವಾಷ್ ಟೂರ್ನಮೆಂಟ್‌ನಲ್ಲಿ ಭಾರತದ ಜೋಶ್ನಾ ಚಿನ್ನಪ್ಪ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಆದರೆ, ಜೋಶ್ನಾರ ಸಹ ಆಟಗಾರ್ತಿ ದೀಪಿಕಾ ಪಲ್ಲಿಕಲ್ ನೇರ ಗೇಮ್‌ಗಳ ಅಂತರದಿಂದ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಜೋಶ್ನಾ 15-13, 11-6, 6-11, 9-11, 11-4 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಮೊದಲ ಗೇಮ್‌ನ್ನು 15-13 ರಿಂದ ಪ್ರಯಾಸದಿಂದ ಜಯಿಸಿದ ಜೋಶ್ನಾ 2ನೆ ಗೇಮ್‌ನ್ನು 11-6 ರಿಂದ ಸುಲಭವಾಗಿ ಜಯಿಸಿದರು. ಆದರೆ, ಮೂರನೆ ಹಾಗೂ ನಾಲ್ಕನೆ ಗೇಮ್‌ನಲ್ಲಿ ಸೋಲುಂಡಿರುವ ಜೋಶ್ನಾ ಅಂತಿಮ ಪಂದ್ಯವನ್ನು 11-4 ರಿಂದ ಜಯಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.
ಜೋಶ್ನಾ ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಸ್ಥಳೀಯ ಆಟಗಾರ್ತಿ ಹಾಗೂ ದ್ವಿತೀಯ ಶ್ರೇಯಾಂಕಿತೆ ಅನ್ನಿ ಆವು ಅವರನ್ನು ಎದುರಿಸಲಿದ್ದಾರೆ.
ದೀಪಿಕಾ ಪಾಲಿಗೆ ಗುರುವಾರ ಶುಭ ದಿನವಾಗಿ ಪರಿಣಮಿಸಲಿಲ್ಲ. ದೀಪಿಕಾ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ನ್ಯೂಝಿಲೆಂಡ್‌ನ ಜೊಯೆಲ್ ವಿರುದ್ಧ 8-11, 6-11, 8-11 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.





