ಉಡುಪಿಯಲ್ಲಿನ್ನು ಮೂರು ದಿನಗಳಿಗೊಮ್ಮೆ ಮಾತ್ರ ನೀರು

ಉಡುಪಿ, ಮೇ 26: ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ ಮಳೆಯ ಕೊರತೆ ಕಾರಣ ನೀರಿನಮಟ್ಟ ತೀವ್ರವಾಗಿ ಕುಸಿದಿದೆ. ಆದುದರಿಂದ ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಿಗೆ ಮೇ 27ರಿಂದ ಈ ಮುಂದಿನ ವೇಳಾಪಟ್ಟಿಯಂತೆ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು ಎಂದು ಪೌರಾಯುಕ್ತರ ಪ್ರಕಟನೆ ತಿಳಿಸಿದೆ.
ಅಜ್ಜರಕಾಡು, ಕಿನ್ನಿಮೂಲ್ಕಿ, ತೆಂಕಪೇಟೆ, ಒಳಕಾಡು, ಬೈಲೂರು, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಚಿಟ್ಪಾಡಿ, ನಿಟ್ಟೂರು, ಕರಂಬಳ್ಳಿ, ಕಕ್ಕುಂಜೆ, ಕಡಿಯಾಳಿ, ಗುಂಡಿಬೈಲು(ದೊಡ್ಡಣಗುಡ್ಡೆ) ಪ್ರದೇಶಗಳಲ್ಲಿ ಮುಂಜಾನೆ 4:30ರಿಂದ 9:30ರವರೆಗೆ, ಇಂದಿರಾ ನಗರ, ಕಸ್ತೂರ್ಬಾ ನಗರ, ಬಡಗುಬೆಟ್ಟು, ಕುಂಜಿಬೆಟ್ಟು, ಇಂದ್ರಾಳಿ, ಮಂಚಿ, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಮೂಡುಬೆಟ್ಟು, ಮೂಡುಪೆರಂಪಳ್ಳಿ, ಸಗ್ರಿ, ಕೊಡಂಕೂರು, ಕೊಡವೂರು ಪ್ರದೇಶಗಳಿಗೆ ಬೆಳಗ್ಗೆ 9:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಪರ್ಕಳ, ಸೆಟ್ಟಿಬೆಟ್ಟು ಮುಂಜಾವ 5:30ರಿಂದ 8:30ರವರೆಗೆ, ಕೊಡವೂರು (ಭಾಗಶಃ), ಕಲ್ಮಾಡಿ, ಈಶ್ವರನಗರ, ಸರಳೇಬೆಟ್ಟು, ಮಲ್ಪೆ ಸೆಂಟ್ರಲ್, ವಡಬಾಂಡೇಶ್ವರ, ಕೊಳ ಈ ಸ್ಥಳಗಳಲ್ಲಿ ಅಪರಾಹ್ನ 2ರಿಂದ ಸಂಜೆ 6:30ರವರೆಗೆ ಹಾಗೂ ಮಣಿಪಾಲ, ಅನಂತನಗರ, ದುಗ್ಲಿಪದವು ಈ ಭಾಗಗಳಲ್ಲಿ ಮುಂಜಾನೆ 5:30ರಿಂದ 7:30ರವರೆಗೆ ನೀರು ಸರಬರಾಜು ಮಾಡಲಾಗುವುದು, ನೀರನ್ನು ಮಿತವಾಗಿ ಬಳಸಿ ಸಹಕರಿಸುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ





