ವಿವಿ ಸಂಧ್ಯಾ ಕಾಲೇಜಿಗೆ ಪ್ರವೇಶಾತಿ ಆರಂಭ
ಮಂಗಳೂರು, ಮೇ 26: ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಇಲ್ಲಿನ ಶೈಕ್ಷಣಿಕ ವರ್ಷ 2016-17ನೆ ಸಾಲಿನ ಪ್ರಥಮ ಪದವಿ ತರಗತಿಗಳ ವಿದ್ಯಾರ್ಥಿ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಬಿ.ಎ/ಬಿ.ಕಾಂ/ಬಿ.ಸಿ.ಎ./ಬಿ.ಬಿ.ಎ. ಹಾಗೂ ವಿದೇಶಿ ಭಾಷೆಗಳಲ್ಲಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾತಿ ಅರ್ಜಿ ಸಲ್ಲಿಸಬಹುದು. ಜೂನ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ವಿವಿ ಕಾಲೇಜು ಆವರಣದಲ್ಲಿರುವ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು ಕಚೇರಿಯನ್ನು ಅಥವಾ ದೂ.ಸಂ. 0824- 2424608/ 9449333919ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





