ಬಜರಂಗದಳ ಎಂದರೆ ಬಿಜೆಪಿ ಅಲ್ಲ : ಅಮಿತ್ ಷಾ

ನವದೆಹಲಿ : ವಿವಾದಾಸ್ಪದ ರಾಮ ಮಂದಿರ ನಿರ್ಮಾಣ ಹಾಗೂ ಸಮಾನನಾಗರಿಕ ಸಂಹಿತೆಯ ವಿಚಾರದಿಂದ ತಮ್ಮ ಪಕ್ಷ ದೂರವಿರುವುದಾಗಿ ಸೂಚ್ಯವಾಗಿ ತಿಳಿಸಿದಬಿಜೆಪಿ ಅಧ್ಯಕ್ಷ ಅಮಿತ್ ಷಾ, ತಮ್ಮ ಪಕ್ಷ ಉತ್ತರಪ್ರದೇಶ ಚುನಾವಣೆಯನ್ನು ಮೋದಿ ಸರಕಾರದ ಅಜೆಂಡಾ ಆಗಿರುವ ಅಭಿವೃದ್ಧಿ ಆಧಾರದಲ್ಲಿ ಹೋರಾಡಲಿದೆಯೆಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ಬಗ್ಗೆ ಪಕ್ಷದ ಅಭಿಪ್ರಾಯವನ್ನು ಕೇಳಿದಾಗ ‘ಬಜರಂಗದಳ ಎಂದರೆ ಬಿಜೆಪಿ ಅಲ್ಲ,’ ಎಂದು ಷಾ ನುಡಿದರು.
ಆರೆಸ್ಸೆಸ್ ಸಹ ಸಂಘಟನೆಗಳಾದ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ರಾಮ ಮಂದಿರ ನಿರ್ಮಾಣ ವಿಚಾರವನ್ನು ಮತ್ತೆ ಕೆದಕಿದ್ದರೂ,ಇಂತಹ ಸಂಘಟನೆಗಳನ್ನು ಹಾತೂ ಆಡಳಿತ ಬಿಜೆಪಿಯನ್ನು ಸಮನಾಗಿ ಕಾಣಲು ಸಾಧ್ಯವಿಲ್ಲವೆಂದಿದ್ದಾರೆ. ‘‘ನೀವು ಸರಕಾರ ಹೇಳಿದ್ದನ್ನು ಮಾತ್ರ ಕೇಳಬೇಕು,’’ಎಂದು ಷಾ ಹೇಳಿದರು.
ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದರೆ ಅದಕ್ಕಿಂತ ಬಹಳಷ್ಟು ಮುಂಚಿತವಾಗಿಯೇ ತಮ್ಮ ಪಕ್ಷ ಮತೀಯ ಧ್ರುವೀಕರಣ ನಡೆಸುತ್ತಿದೆಯೆಂದು ವಿಪಕ್ಷಗಳು ಆರೋಪಿಸುತ್ತಿರುವುದುತಮಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಶಾ ಹೇಳಿದ್ದಾರೆ.
ಮೋದಿ ಸರಕಾರದ ‘ಸಾಧನೆ’ಗಳನ್ನು ಪ್ರಚುರಪಡಿಸಲು ಆಯೋಜಿಸಲಾದ ಪತ್ರಿಕಾ ಗೊಷ್ಠಿಯಲ್ಲಿ ಪತ್ರಕರ್ತರು ರಾಜ್ಯದ ವಿವಾದಾತ್ಮಕ ವಿಚಾರಗಳ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ ತಮ್ಮ ಸರಕಾರಬಡವರ ಪರ ಹಾಗೂ ರೈತರ ಪರವೆಂದು ಷಾ ಪದೇ ಪದೇ ನುಡಿದರು.
ಭಜರಂಗದಳ ಸದಸ್ಯರಿಗೆ ಉತ್ತರಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆಯೆಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಷಾ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆದರೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.







