ಮಾಡೂರು: ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಮಂಗಳೂರು, ಮೇ 27: 'ನಮ್ಮ ಊರಿನ ಜನಸೇವೆ ಗಲ್ಫ್ ಗೈಸ್ ಮಾಡೂರು ಕೊಂಡಾಣ' ಸಂಸ್ಥೆಯ ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಇತ್ತೀಚಿಗೆ ಮಾಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಗ್ಯಾಲಕ್ಷಿ ವಹಿಸಿದರು.
ಮಾಡೂರು ಜುಮಾ ಮಸೀದಿಯ ಖತೀಬ್ ಲತೀಫ್ ಉಸ್ತಾದ್, ಆದಂ ಮಾಡೂರು, ತುಳುನಾಡ ರಕ್ಷಣಾ ವೇದಿಕೆ ಸದಸ್ಯ ರವಿ ಶೆಟ್ಟಿ, ಎಸ್‌ಡಿಪಿಐ ಜಿಲ್ಲಾ ಸದಸ್ಯ ಅಶ್ರಫ್ ಮಂಚಿ, ಹಾರಿಶ್ ಮಲಾರ್, ಸಂತೋಷ್, ಕೆ.ಪಿ. ಸುರೇಶ್, ಜಯಂತ ಕೊಂಡಾಣ, ಮತ್ತು ಕೌನ್ಸಿಲರ್‌ಗಳಾದ ಲೋಹಿತ್ ಮಾಡೂರು, ಝುಲೈಕ ಬಶೀರ್, ಧೀರಜ್ ಕೊಂಡಾಣ ಮುಂತಾದವರು ಉಪಸ್ಥಿತರಿದ್ದರು,.
Next Story





