ಫ್ರೆಂಚ್ ಓಪನ್‌ನಿಂದ ನಿರ್ಗಮಿಸಿದ ನಡಾಲ್!

ಪ್ಯಾರಿಸ್, ಮೇ 27: ಒಂಬತ್ತು ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ರಫೆಲ್ ನಡಾಲ್ ಎಡಗೈ ಮಣಿಕಟ್ಟಿನ ಗಾಯದ ಸಮಸ್ಯೆಯ ಕಾರಣದಿಂದ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ.
ನನಗೆ ಮಣಿಗಂಟಿನಲ್ಲಿ ಸಮಸ್ಯೆಯಿದೆ...ನಿನ್ನೆ ನಾನು ಇಂಜೆಕ್ಷನ್ ನೆರವಿನಿಂದ ಆಡಿದ್ದೆ. ನಿನ್ನೆ ರಾತ್ರಿ ನೋವು ಜಾಸ್ತಿಯಾಗಿರುವ ಕಾರಣ ಟೂರ್ನಿಯಿಂದ ಹಿಂದೆ ಸರಿಯುತ್ತಿರುವೆ. ಇದೀಗ ನನಗೆ ಮಣಿಕಟ್ಟನ್ನು ತಿರುಗಿಸಲು ಸಾಧ್ಯವಾಗುತ್ತಿಲ್ಲ’’ಎಂದು ಪತ್ರಿಕಾಗೋಷ್ಠಿಯಲ್ಲಿ ಕಿಕ್ಕಿರಿದು ನೆರೆದಿದ್ದ ಸುದ್ದಿಗಾರರಿಗೆ ಸ್ಪೇನ್‌ನ ಎಡಗೈ ಆಟಗಾರ ತಿಳಿಸಿದರು.
ನಡಾಲ್‌ಗೆ ಗುರುವಾರ ಫಕುಂಡೊ ಬಾಗ್ನಿಸ್ ವಿರುದ್ಧದ ಎರಡನೆ ಸುತ್ತಿನ ಪಂದ್ಯದಲ್ಲಿ ನೋವು ಕಾಣಿಸಿಕೊಂಡಿರಲಿಲ್ಲ.
Next Story





