Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬಡವರಿಗೊದಗದ ಆರೋಗ್ಯ ಯೋಜನೆ!

ಬಡವರಿಗೊದಗದ ಆರೋಗ್ಯ ಯೋಜನೆ!

ಇಸ್ಮತ್ ಪಜೀರ್ಇಸ್ಮತ್ ಪಜೀರ್27 May 2016 11:08 PM IST
share
ಬಡವರಿಗೊದಗದ ಆರೋಗ್ಯ ಯೋಜನೆ!

ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಆರೋಗ್ಯ ಯೋಜನೆಗಳಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಬಹಳ ಮಹತ್ವದ್ದು. ಈ ಯೋಜನೆಯನುಸಾರ ಬಡತನ ರೇಖೆಯ ಕೆಳಗಿನ ಜನರಿಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ, ಬೈಪಾಸ್ ಸರ್ಜರಿ, ಆ್ಯಂಜಿಯೋಪ್ಲಾಸ್ಟಿಯಂತಹ ಹೃದಯದ ಶಸ್ತ್ರಚಿಕಿತ್ಸೆಗಳು ಮತ್ತಿತರ ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆಗಳನ್ನು ಸರಕಾರದ ಸೂಚಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಿಸಿಕೊಳ್ಳಬಹುದು. ಹೆಚ್ಚಿನೆಲ್ಲ ಶಸ್ತ್ರಚಿಕಿತ್ಸೆಗಳ ಸಂಪೂರ್ಣ ಪ್ಯಾಕೇಜ್ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಬರುತ್ತದೆ. ಆದರೆ ಕೆಲವು ಧಗಾಕೋರ ಆಸ್ಪತ್ರೆಗಳು ಸರಕಾರದಿಂದ ಈ ಯೋಜನೆಯ ಅನುದಾನ ಪಡೆದೂ ಬಡವರನ್ನು ಲೂಟಿ ಮಾಡುತ್ತಿರುವುದು ಮಾತ್ರ ದುರದೃಷ್ಟಕರ. ಒಂದರ್ಥದಲ್ಲಿ ‘ದೇವರು ಕೊಟ್ಟರೂ ಪೂಜಾರಿ ಬಿಡಲಿಲ್ಲ’ ಎಂಬಂತಾಗಿಬಿಟ್ಟಿದೆ.
ವಾಜಪೇಯಿ ಆರೋಗ್ಯಶ್ರೀ ಯೋಜನೆ ಅನುಷ್ಠಾನಕ್ಕೆ ಬಂದಂದಿನಿಂದ ರಾಜ್ಯಾದ್ಯಂತ ಸಹಸ್ರಾರು ಮಂದಿ ಬಡವರು ಉನ್ನತ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿ ಆರೋಗ್ಯ ಪೂರ್ಣ ಬದುಕು ಸಾಗಿಸುತ್ತಿದ್ದಾರೆ. ಈ ಯೋಜನೆ ಜಾರಿಗೆ ಬರುವ ಮುನ್ನ ದುಬಾರಿ ಶಸ್ತ್ರಚಿಕಿತ್ಸೆ ಕೈಗೆಟುಕದೆ ಅದೆಷ್ಟೊ ಬಡ ರೋಗಿಗಳು ಕಾಯಿಲೆಗಳಿಂದ ನರಳಿ ನರಳಿ ಸಾಯುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.
ಕೆಲವರು ತಮ್ಮ ಕುಟುಂಬದ ಆಧಾರಸ್ಥಂಭವನ್ನು ಉಳಿಸುವ ಸಲುವಾಗಿ ಸಾಲ ಸೋಲ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿ ಜೀವನಪರ್ಯಂತ ದುಡಿದೂ ದುಡಿದು ಅತ್ತ ಸಾಲ ಸಂದಾಯ ಮಾಡಲೂ ಆಗದೆ ಇತ್ತ ನೆಮ್ಮದಿಯಿಂದ ಬದುಕಲೂ ಆಗದೆ ನರಳಿ ನರಳಿ ಜೀವಬಿಟ್ಟದ್ದಿದೆ. ಮತ್ತೆ ಕೆಲವರು ಚಿಟ್‌ಫಂಡ್, ಸೋಡ್ತಿ, ಚೀಟಿ ಎಂದೆಲ್ಲಾ ಅರೆಹೊಟ್ಟೆ, ಹಸಿವೆ ನುಂಗಿ ಉಳಿತಾಯ ಮಾಡಿ ನಿರ್ಮಿಸಿದ ಸೂರುಗಳನ್ನು ಶಸ್ತ್ರಚಿಕಿತ್ಸೆಗಾಗಿ ಮಾರಿ ಬೀದಿಗೆ ಬಿದ್ದದ್ದೂ ಇದೆ. ಅಂತಹ ಬಡಜನತೆಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಆಶಾಕಿರಣವಾಗಿ ಪರಿಣಮಿಸಿತ್ತು.
ಒಂದೆಡೆ ಈ ಯೋಜನೆ ಅದೆಷ್ಟೋ ಜನರಿಗೆ ಜೀವನದಾನ ನೀಡಿದ್ದರೆ, ಇನ್ನೊಂದೆಡೆ ಕಾರ್ಪೊರೇಟ್ ಧಗಾಕೋರ ಆಸ್ಪತ್ರೆಗಳ ಮಾಲಕರಿಗೆ ಬಡವರನ್ನು ಹಿಂಡಿ ಹಿಪ್ಪೆಮಾಡಲು ಹೊಸ ಮಾರ್ಗವನ್ನೂ ಕಲ್ಪಿಸಿದೆ. ಉದಾಹರಣೆಗೆ ಹೃದಯದ ಶಸ್ತ್ರಚಿಕಿತ್ಸೆಗೆಂದು ಸರಕಾರ ಒಂದು ಲಕ್ಷ ರೂ.ಗಳವರೆಗೆ ಅರ್ಹ ಫಲಾನುಭವಿಗಳ ಆಸ್ಪತ್ರೆಯ ಬಿಲ್ ಭರಿಸುತ್ತದೆ. ಇದರಿಂದ ಸಂಪೂರ್ಣ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಿದೆ. ಆದರೆ ಕೆಲವು ಧಗಾಕೋರ ಆಸ್ಪತ್ರೆಗಳ ಮಾಲಕರು ಸರಕಾರಕ್ಕೆ ಶಸ್ತ್ರ ಚಿಕಿತ್ಸೆಯ ವರದಿ ಒಪ್ಪಿಸಿ ಲಕ್ಷಾಂತರ ರೂ.ಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ ರೋಗಿಗಳನ್ನು ವಂಚಿಸಿ ಅವರಿಂದಲೂ ದುಡ್ಡು ಪಡೆಯುತ್ತಾರೆ. ಇದು ಒಂಥರ ಸರಕಾರಿ ಕಾಮಗಾರಿಗಳಲ್ಲಿ ಒಂದೇ ಕೆಲಸಕ್ಕೆ ಎರಡು ಬಿಲ್ ಮಾಡುವಂತೆ. ಈ ಯೋಜನೆಯಡಿಯಲ್ಲಿ ಶಸ್ತ್ರಚಿಕಿತ್ಸೆ ಉಚಿತವಲ್ಲವೇ? ಎಂದು ಕೇಳಿದರೆ ‘‘ಸರಕಾರದಿಂದ ಸಿಗುವ ದುಡ್ಡಿನಿಂದ ಶಸ್ತ್ರ ಚಿಕಿತ್ಸೆಯೇನೋ ಮಾಡಬಹುದು. ಆದರೆ ನಿಮ್ಮ ಹೃದಯಕ್ಕೆ ಅಳವಡಿಸುವ ಸ್ಟಂಟ್‌ಗಳ ಅಥವಾ ವಾಲ್ವ್‌ಗಳ ಖರ್ಚನ್ನು ನೀವೇ ಭರಿಸಬೇಕಾಗುತ್ತದೆ’’ ಎಂದು ಹಸಿ ಹಸಿ ಸುಳ್ಳು ಹೇಳಿ ದುಡ್ಡು ಚಾಚುತ್ತಾರೆ. ವಾಸ್ತವದಲ್ಲಿ ವಾಜಪೇಯಿ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ಪಡೆದ ಆಸ್ಪತ್ರೆಗಳಿಗೆ ಶಸ್ತ್ರಕ್ರಿಯೆಯ ಮತ್ತು ರೋಗಿಗೆ ಅಳವಡಿಸಲಾಗುವ ಸಾಧನಗಳ ಮೊತ್ತ ಸರಕಾರ ಮಂಜೂರು ಮಾಡುವ ದುಡ್ಡಿನಿಂದಲೇ ಭರಿಸಲಾಗುತ್ತದೆ.
ಇನ್ನು ಕೆಲವು ಆಸ್ಪತ್ರೆಗಳ ಧಗಾಕೋರರು ರೋಗಿಗಳಿಗೆ ‘‘ನೋಡಿ, ಸರಕಾರದ ದುಡ್ಡಿನಲ್ಲಿ ಅಳವಡಿಸುವ ಸ್ಟಂಟ್, ವಾಲ್ವ್ ಮುಂತಾದವುಗಳು ತೀರಾ ಕಳಪೆ ಗುಣಮಟ್ಟದ್ದು. ಅದನ್ನು ಅಳವಡಿಸಿ ಶಸ್ತ್ರಕ್ರಿಯೆ ಮಾಡಿದರೂ ಒಂದೆ, ಮಾಡದಿದ್ದರೂ ಒಂದೇ’’ ಎಂದು ಸುಳ್ಳು ಹೇಳಿ ರೋಗಿಗಳನ್ನು ಒಂದು ವಿಧದಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಮಾತ್ರವಲ್ಲ ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಲೇ ಸರಕಾರವನ್ನು ದೂರುವ ನೀಚ ಕೆಲಸವನ್ನೂ ಮಾಡುತ್ತಾರೆ.
ಬಡರೋಗಿ, ‘‘ಪರವಾ ಗಿಲ್ಲ, ಸರಕಾರದ ಯೋಜನೆಯಲ್ಲಿ ಬರುವ ಸಾಧನಗಳನ್ನೇ ಅಳವಡಿಸಿ’’ ಎಂದು ಒತ್ತಾಯಿಸಿದರೆ, ಧಗಾಕೋರರು ರೋಗಿ ಗಳೊಂದಿಗೆ ಸರಕಾರ ದಿಂದ ಮಂಜೂರಾಗುವ ದುಡ್ಡಿನ ಮೇಲೆ ಒಂದು ಲಕ್ಷ ರೂ. ಖರ್ಚು ತಗಲುತ್ತದೆ, ನೀವು ಕನಿಷ್ಠ ಎಂಬತ್ತು ಸಾವಿರ ರೂಪಾಯಿಯಾದರೂ ಕಟ್ಟಿದರೆ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ಚೌಕಾಶಿಗೆ ಇಳಿಯುತ್ತಾರೆ. ರೋಗಿಯು ನಮ್ಮಿಂದ ಅಷ್ಟು ದುಡ್ಡು ಹೊಂದಿಸಲು ಸಾಧ್ಯವೇ ಇಲ್ಲ ಎಂದರೆ ನಿಮ್ಮ ಜೀವ ಉಳಿಸಬೇಕಾದರೆ ಐವತ್ತು ಸಾವಿರ ರೂಪಾಯಿ ಯಾದರೂ ಕಟ್ಟಲೇಬೇಕು. ಎಂದು ಖಡಾಖಂಡಿತವಾಗಿ ಹೇಳಿ ರೋಗಿಯ ಮೇಲೆ ಒತ್ತಡ ಹೇರುತ್ತಾರೆ.
ಮೊದಲೇ ಕಾಯಿಲೆಯಿಂದ ನರಳಿ ಹೈರಾಣಾಗಿರುವ ರೋಗಿ ಅನಿವಾರ್ಯವಾಗಿ ಈ ವೈಟ್‌ಕಾಲರ್ ಧಗಾಕೋರರ ಶರ್ತಕ್ಕೆ ಮಣಿಯಲೇಬೇಕಾಗುತ್ತದೆ. ಇವೆಲ್ಲ ಕಲ್ಪನೆಯ ಮೂಸೆಯಲ್ಲಿ ಅರಳಿದ ಮಾತುಗಳಲ್ಲ. ಧಗಾಕೋರರ ಲೂಟಿಯಿಂದ ಬಳಲಿ ಬೆಂಡಾದ ರೋಗಿಗಳ ನೋವಿನ ಮಾತುಗಳು. ಇಂತಹ ದರೋಡೆಕೋರರಿಗೆ ಯಾವ ಶಿಕ್ಷೆ ವಿಧಿಸಬೇಕು......?
ಒಂದು ಜನಪರ, ಜನಪ್ರಿಯ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಮಾತ್ರ ಸರಕಾರಗಳ ಕೆಲಸವಲ್ಲ. ಜಾರಿಗೆ ತಂದ ಯೋಜನೆಯು ಎಷ್ಟರ ಮಟ್ಟಿಗೆ ಅರ್ಹರಿಗೆ ತಲುಪುತ್ತದೆ ಎಂದು ಅರಿತು ಜನರಿಗೆ ತಲುಪಿಸುವುದೂ ಸರಕಾರದ ಜವಾಬ್ದಾರಿಯಾಗಿದೆ.
 ಸರಕಾರವು ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಶಸ್ತ್ರಚಿಕಿತ್ಸೆಗಳಿಗೆ ಅನುಮತಿ ನೀಡಿದ ಆಸ್ಪತ್ರೆಗಳ ಮೇಲೆ ನೇರ ನಿಗಾ ಇಡಬೇಕಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಕಾರದ ಆರೋಗ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ಯೋಜನೆಗೆ ಅನುದಾನ ಪಡೆಯುವ ಆಸ್ಪತ್ರೆಗಳಲ್ಲಿ ಕನಿಷ್ಠ ಸರಕಾರಿ ಸಹಾಯವಾಣಿ ಎಂದು ಒಂದು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಹಾಕಬೇಕಾಗಿದೆ. ಮತ್ತು ಆ ದೂರವಾಣಿ ಎಲ್ಲಾ ಸಮಯದಲ್ಲೂ ರೋಗಿಗಳ ಅಹವಾಲು ಆಲಿಸಲು ಲಭ್ಯವಿರುವಂತೆ ನೋಡಿಕೊಳ್ಳಬೇಕಿದೆ. ಇದರಿಂದ ಸ್ವಲ್ಪಮಟ್ಟಿಗಾದರೂ ಫಲಾನುಭವಿಗಳಿಗೆ ಅನುಕೂಲವಾಗಬಹುದು. ನಿಯಮಗಳನ್ನು ಮೀರಿ ಬಡವರನ್ನು ಲೂಟುವ ಆಸ್ಪತ್ರೆಗಳ ಯೋಜನೆಯ ಅನುಮತಿಯನ್ನು ರದ್ದುಮಾಡಬೇಕು. ಮತ್ತು ನಿಯಮ ಮೀರಿದವರ ಅನುದಾನವನ್ನು ಕಡ್ಡಾಯವಾಗಿ ತಡೆಹಿಡಿಯಬೇಕಾಗಿದೆ.

share
ಇಸ್ಮತ್ ಪಜೀರ್
ಇಸ್ಮತ್ ಪಜೀರ್
Next Story
X