ಸೀಟಿಲ್ಲ!?
ಮಾನ್ಯರೆ,
ಇತ್ತೀಚೆಗೆ ಎಸ್ಸೆಸೆಲ್ಸಿ ಪರೀಕ್ಷೆ ತೇರ್ಗಡೆ ಯಾದ ವಿದ್ಯಾರ್ಥಿಗಳಿಗೆ ಕೆಲವು ‘ಪ್ರತಿಷ್ಠಿತ’ ಕಾಲೇಜುಗಳು ಅಂಕ ಕಡಿಮೆಯಿದೆ ಎಂಬ ನೆಪದಿಂದ ಸೀಟು ನಿರಾಕರಿಸುವುದು ಶೋಚನೀಯ.
ಆದರೆ ಅದೇ ಕಾಲೇಜುಗಳಲ್ಲಿ ಒಂದಷ್ಟು ಡೊನೇಶನ್ ಕಕ್ಕಿದರೆ ಈ ಅಂಕಗಳ ಮಾನದಂಡಕ್ಕೆ ಬೆಲೆಯೇ ಇಲ್ಲ!.
ಈಗ ಖಾಸಗಿ ಕಾಲೇಜುಗಳಿಗಿಂತಲೂ ಉತ್ತಮ ಗುಣಮಟ್ಟದ ಸರಕಾರಿ ಕಾಲೇಜು ಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ಮೂಲಕ ಇಂತಹ ಧನದಾಹಿ ವಿದ್ಯಾಸಂಸ್ಥೆಗಳಿಗೆ ಪಾಠಕಲಿಸಬೇಕಾಗಿದೆ.
Next Story





