ಉಡುಪಿ: ನೀರು ಸರಬರಾಜಿಗೆ ಹೊಸ ವೇಳಾಪಟ್ಟಿ ಪ್ರಕಟ
ಉಡುಪಿ, ಮೇ 27: ಉಡುಪಿ ನಗರಸಭಾ ವ್ಯಾಪ್ತಿಗೆ ಲಭ್ಯವಿರುವ ಕುಡಿಯುವ ನೀರನ್ನು ಪರಿಷ್ಕೃತ ವೇಳಾಪಟ್ಟಿಯಂತೆ ಈ ಕೆಳಗಿನ ವಾರ್ಡ್‌ಗಳಿಗೆ ಸರಬರಾಜು ಮಾಡಲಾ ಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಮೇ 28, 31, ಜೂ.3 ಮತ್ತು 6ರಂದು ಬೆಳಗ್ಗೆ 5:30ರಿಂದ ಮಧ್ಯಾಹ್ನ 12:30ರವರೆಗೆ ಇಂದಿರಾ ನಗರ, ಕಸ್ತೂರ್ಬಾನಗರ, ಬಡಗುಬೆಟ್ಟು, ಚಿಟ್ಪಾಡಿ, ಕುಂಜಿಬೆಟ್ಟು, ಅಜ್ಜರಕಾಡು, ಶಿರಿಬೀಡು, ಬನ್ನಂಜೆ, ತೆಂಕಪೇಟೆ, ಅಂಬಲಪಾಡಿ, ಒಳಕಾಡು, ಬೈಲೂರು, ಕಿನ್ನಿಮುಲ್ಕಿ, ಕೊಳ, ವಡ ಭಾಂಡೇಶ್ವರ, ಮಲ್ಪೆ ಸೆಂಟ್ರಲ್, ಕೊಡವೂರು ಭಾಗಶಃ, ಕಲ್ಮಾಡಿ, ಮಣಿಪಾಲ.
ಮೇ 29, ಜೂ.1, 4 ಮತ್ತು 7ರಂದು ಬೆಳಗ್ಗೆ 5:30ರಿಂದ ಅಪರಾಹ್ನ 12:30ರವರೆಗೆ ಇಂದ್ರಾಳಿ, ಸಗ್ರಿ, ಮೂಡುಪೆರಂಪಳ್ಳಿ(ಗುಂಡಿಬೈಲು), ದೊಡ್ಡಣಗುಡ್ಡೆ, ಕರಂಬಳ್ಳಿ, ಕಕ್ಕುಂಜೆ, ನಿಟ್ಟೂರು, ಕಡಿಯಾಳಿ, ಸುಬ್ರಹ್ಮಣ್ಯ ನಗರ, ಕೊಂಡಕೂರು, ಗೋಪಾಲಪುರ, ಕೊಡವೂರು ಭಾಗಶಃ, ಈಶ್ವರ ನಗರ, ಸರಳೇಬೆಟ್ಟು, ಪರ್ಕಳ, ಸೆಟ್ಟಿಬೆಟ್ಟು, ಮೂಡುಬೆಟ್ಟು ಇಲ್ಲಿಗೆ ನೀರು ಸರಬ ರಾಜು ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.





