Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉತ್ತಮ ಚಿತ್ರಗಳನ್ನು ಸಾಯಿಸುವುದು ಹೇಗೆ?

ಉತ್ತಮ ಚಿತ್ರಗಳನ್ನು ಸಾಯಿಸುವುದು ಹೇಗೆ?

ಮರಾಠಿ ಚಿತ್ರ ಸೈರಾಟ್‌ನ ಉದಾಹರಣೆ

ಸತ್ಯನ್ ಕೆ. ಬರ್ಡೋಲಿಮೊದಲಸತ್ಯನ್ ಕೆ. ಬರ್ಡೋಲಿಮೊದಲ28 May 2016 1:50 PM IST
share
ಉತ್ತಮ ಚಿತ್ರಗಳನ್ನು ಸಾಯಿಸುವುದು ಹೇಗೆ?

ಮರಾಠಿ ಸಿನಿಮಾ ಸೈರಾಟ್‌ ನೋಡಲು ನಾನು ಮನೆಗೆ ಸಮೀಪವಿರುವ ಜುಹು ಪಿವಿಆರ್‌ಗೆ ಮೊದಲ ಎರಡು ವಾರಗಳಲ್ಲಿ ನಾಲ್ಕು ಬಾರಿ ಹೋದಾಗ ಪ್ರತೀ ಬಾರಿ ಹೌಸ್ ಫುಲ್ ಇದ್ದ ಕಾರಣ ವಾಪಾಸು ಬಂದೆ. ಹಾಗಿದ್ದರೂ ಆ ಎರಡು ವಾರಗಳಲ್ಲಿ ಥಿಯೇಟರ್ ಸಿನಿಮಾದ ಒಂದು ಚಾರಿಟಿ ಶೋವನ್ನು ಮಾತ್ರ ಓಡಿಸಿತು. ಮರಾಠಿ ಸಿನಿಮಾಗಾಗಿ ಸರ್ಕಾರ ಕಡ್ಡಾಯಗೊಳಿಸಿದ ಚಾರಿಟಿ ಇದು. ನಾಗರಾಜ್ ಮಂಜುಲೆ ಅವರ ಸೈರಾಟ್ ಸ್ಪಷ್ಟವಾಗಿ ಚಾರಿಟಿ ಸಿನಿಮಾವಲ್ಲ. ಕೆಲವು ಕಡೆ ಎಲ್ಲರಿಗೂ ನೋಡುವ ಅವಕಾಶ ಸಿಗಲು ಬೆಳಗಿನ ಜಾವ 3 ಗಂಟೆಯ ಶೋಗಳನ್ನೂ ತೋರಿಸಿದ್ದಿದೆ. ಮರಾಠಿ ಸಿನಿಮಾವೊಂದು ಮಹಾರಾಷ್ಟ್ರದಲ್ಲಿ ಇಷ್ಟೊಂದು ಅಲೆ ಎಬ್ಬಿಸಿದ ಉದಾಹರಣೆ ಹಿಂದೆಂದೂ ಇರಲಿಲ್ಲ. ಈ ಸಿನಿಮಾಗೆ ದೊಡ್ಡ ಕ್ರೇಜ್ ಇತ್ತು. ಹಾಗಿದ್ದರೂ ಪಿವಿಆರ್ ಜುಹು ಮೊದಲ ಎರಡು ವಾರಗಳಲ್ಲಿ ಮತ್ತೊಂದು ಸಿನಿಮಾ ಶೋ ತೋರಿಸಲಿಲ್ಲ. ನಂತರ ಸಿನಿಮಾವನ್ನೇ ತೆಗೆದುಬಿಟ್ಟರು.

ಪಿವಿಆರ್ ಉತ್ತಮ ಭಾರತೀಯ ಸಿನಿಮಾಗಳಿಗೆ ಧೀರ್ಘ ಶೋ ನೀಡಿದ ದಾಖಲೆಗಳನ್ನು ಹೊಂದಿರುವ ಚಿತ್ರಮಂದಿರ ಸರಣಿಗಳಲ್ಲಿ ಒಂದಾಗಿದೆ. ಸೈರಾಟ್ ಈವರೆಗೆ 75 ಕೋಟಿ ರೂ.ಗಳನ್ನು ಮಾಡಿರುವುದು ಆಶ್ಚರ್ಯ. ಈ ಸಿನಿಮಾಗೆ 200 ಕೋಟಿ ರೂಪಾಯಿ ಮಾಡುವ ಶಕ್ತಿಯಿತ್ತಾದರೂ ಅದಕ್ಕೆ ಅವಕಾಶ ಸಿಗಲಿಲ್ಲ. ಅಂದಾಜಿನ ಪ್ರಕಾರ ಸಾಮಾನ್ಯ ಪರಿಸ್ಥಿತಿಯಲ್ಲಿ ಇದು ಖಂಡಿತಾ 400 ಕೋಟಿ ರೂಪಾಯಿ ಮೇಲೆ ಲಾಭ ಮಾಡುವ ಶಕ್ತಿ ಹೊಂದಿತ್ತು. ಆದರೆ ಈ ಸಿನಿಮಾ ಇಷ್ಟು ಜನಪ್ರಿಯವಾಗಿರುವುದು ಏಕೆ?

ಈ ಸಿನಿಮಾ ಯುವ, ಅಮಾಯಕ ಜೋಡಿಯೊಂದು ಸಮಾಜದ ನಿಯಮಗಳಿಗೆ ಬಗ್ಗದೆ ಪ್ರೀತಿಗೆ ಬಿದ್ದ ವಾಸ್ತವ ಹೊಂದಿದೆ. ಈ ಕತೆಗಳು ನಿಮ್ಮ ಹೃದಯ ಕಲಕುತ್ತದೆ. ಯುವ ಪ್ರೇಕ್ಷಕರಿಗೆ ತಮ್ಮ ಪ್ರಸ್ತುತ ಸಮಸ್ಯೆಯನ್ನು ಹೇಳಿದ್ದು ಇಷ್ಟವಾಗಿದೆ. ಹಿರಿಯರಿಗೆ ಇದು ಅವರ ಅಮಾಯಕ ಯುವ ದಿನಗಳನ್ನು ನೆನಪಿಸುತ್ತದೆ. ವಾಣಿಜ್ಯ ಭಾರತೀಯ ಸಿನಿಮಾಗಳಲ್ಲಿ ದೊಡ್ಡ ಸೂಪರ್ ಹಿಟ್ ಆಗಿರುವ ಬಾಲಿವುಡ್ ಅಥವಾ ಪ್ರಾದೇಶಿಕ ಸಿನಿಮಾಗಳು ಪ್ರೇಮ ಕತೆಗಳು. ಪ್ರತೀ ಬಾರಿ ತಾರೆಯ ಮಗ ತಾರೆಯಾಗುವಾಗ ಪ್ರೇಮ ಕತೆಯೇ ಬರುತ್ತದೆ. ಕುಮಾರ್ ಗೌರವ್ ಅವರ ಲವ್ ಸ್ಟೋರಿ, ಅಮೀರ್ ಖಾನ್ ಅವರ ಖಯಾಮತ್ ಸೆ ಖಯಾಮತ್ ತಕ್, ಸಲ್ಮಾನ್ ಖಾನ್‌ರ ಮೈನೇ ಪ್ಯಾರ್ ಕಿಯಾ, ಹೃತಿಕ್ ರೋಶನ್‌ರ ಕಹೋ ನಾ ಪ್ಯಾರ್ ಹೇ ಇದಕ್ಕೆ ಉದಾಹರಣೆ. ಕಳೆದ ಕೆಲವು ವರ್ಷಗಳಲ್ಲಿ ಬಂದ ಹೊಸ ತಾರೆಯರ ಮಕ್ಕಳು ತಾರೆಯಾದ ಸಿನಿಮಾಗಳೂ ಪ್ರೇಮ ಕತೆಗಳೇ. ಪ್ರೇಮಿಗಳು ಹೆಚ್ಚು ಕಠಿಣ ಸವಾಲನ್ನು ಎದುರಿಸಿದಾಗೆಲ್ಲ ಬಾಕ್ಸ್ ಆಫೀಸಲ್ಲಿ ಹೆಚ್ಚು ದುಡ್ಡು ಮಾಡುತ್ತದೆ ಸಿನಿಮಾ. ಕತೆ ಅಥವಾ ನಿರ್ದೇಶನ ಜಾಳಾಗದೆ ಇದ್ದಲ್ಲಿ ಈ ಫಾರ್ಮುಲ ಸೋಲುವುದೇ ಇಲ್ಲ. ಹೀಗಾಗಿ ಸೈರಾಟ್ ಒಂದು ಅಸಂಭವ ಪ್ರೇಮಕತೆ. ಆರಂಭದಲ್ಲಿಯೇ ಎಲ್ಲವೂ ಇದಕ್ಕೆ ಸರಿಯಾಗಿಯೇ ಹೋಗುತ್ತಿದೆ. ಹಾಗಿದ್ದರೂ ಇದು ಸಿನಿಮಾದ ಯಶಸ್ಸಿಗೆ ಮುಖ್ಯ ಕಾರಣವಲ್ಲ. ಯಶಸ್ಸಿಗೆ ಅತೀ ಮುಖ್ಯ ಕಾರಣ ಲೇಖಕ-ನಿರ್ದೇಶಕ ನಾಗರಾಜ್ ಮಂಜುಲೆ ಅವರ ಬಹಳ ಸ್ಮಾರ್ಟ್ ಆಗಿರುವ ಆಯ್ಕೆಗಳು. ಸೈರಾಟ್ ಸಿನಿಮಾದಲ್ಲಿ ಜಾತಿಯನ್ನು ನೇರವಾಗಿ ತೋರಿಸಿದಂತೆ ಜಾಣವಾಗಿ ಪ್ಯಾಕೇಜ್ ಮಾಡಲಾಗಿದೆ. ಚಳವಳಿಗಾರರು ಇದರ ಜಾತಿ ಕೋನವನ್ನು ಮುಖ್ಯವಾಗಿ ತೋರಿಸಿದರೆ, ಸಾಮಾನ್ಯ ಜನಸಮೂಹ ಈ ಕೋನದ ಬಗ್ಗೆ ಮಾತೇ ಆಡುವುದಿಲ್ಲ. ಬಾಲಕಿಯ ತಂದೆ-ತಾಯಿ ಹುಡುಗನನ್ನು ಏಕೆ ಒಪ್ಪುವುದಿಲ್ಲ ಎನ್ನುವುದಕ್ಕೆ ಕಾರಣವೇ ಕೊಡಲಾಗಿಲ್ಲ. ಪ್ರೇಕ್ಷಕರು ತಮಗೆ ತೋಚಿದ ಅರ್ಥವನ್ನು ಹೇಳಬಹುದು. ಜಾತಿಯ ಬಗ್ಗೆ ಜಾಗೃತವಾಗಿರುವವರು ವಿರೋಧಕ್ಕೆ ಜಾತಿ ಕಾರಣವಾಗಿ ಮುಂದಿಡಬಹುದು. ಜಾತಿ ಇಲ್ಲ ಎಂದು ಹೇಳುವವರು ಎರಡು ಪಕ್ಷಗಳ ನಡುವಿನ ಶ್ರೀಮಂತಿಕೆಯಲ್ಲಿ ಇರುವ ವ್ಯತ್ಯಾಸವನ್ನು ಹೇಳಬಹುದು. ವಾಣಿಜ್ಯ ಸಿನಿಮಾಗಳ ಸಮಸ್ಯೆಯೇ ಅದು. ಅದನ್ನು ಮಾಡಲು ಹಣ ಬೇಕು ಮತ್ತು ಹಣ ವಾಪಾಸು ಬರಬೇಕು. ಅಂತಹ ಸಮಯದಲ್ಲಿ ಸಾಧ್ಯವಾದಷ್ಟು ಮಂದಿಗೆ ಸಿನಿಮಾ ತಲುಪುವಂತೆ ನೋಡಿಕೊಳ್ಳಬೇಕು. ಸಿನಿಮಾವು ಅತೀ ಕಡಿಮೆ ಮಂದಿ ಅವಹೇಳನ ಮಾಡುವಂತಿರಬೇಕು. ಹೀಗಾಗಿ ಜಾತಿ ಕಾರ್ಡು ಬಳಸುವ ಮೂಲಕ ಸ್ವಲ್ಪ ಮಂದಿಯನ್ನು ತಲುಪಬಹುದು. ಆದರೆ ಸಿನಿಮಾದ ನಾಯಕ-ನಾಯಕಿಯರ ಜಾತಿ ಬಗ್ಗೆ ನೇರ ಉಲ್ಲೇಖವಿಲ್ಲ. ಸಾಮಾನ್ಯವಾಗಿ ನೋಡಿದರೆ ಇದು ಶ್ರೀಮಂತ ವರ್ಸಸ್ ಬಡವ ಎಂದು ಕಾಣುತ್ತದೆ. ಮೈನೇ ಪ್ಯಾರ್ ಕಿಯಾದಲ್ಲಿ ಹುಡುಗಿ ಬಡವೆ, ಕಹೋ ನ ಪ್ಯಾರ್ ಹೇಯಲ್ಲಿ ಹುಡುಗ ಬಡವ ಇದ್ದ ಹಾಗೆ. ಆದರೆ ಜಾತಿ ಬಗ್ಗೆ ಜಾಗೃತರಾಗಿರುವವರು ಸಿನಿಮಾದಲ್ಲಿ ಎಲ್ಲ ಕಡೆ ಜಾತಿಬೇದ ಕಾಣುತ್ತಾರೆ. ಅವರ ದೊಡ್ಡ ಮನೆ ವರ್ಸಸ್ ಒಂದು ಕೋಣೆಯ ಮನೆ, ರಾಜಕೀಯ ವರ್ಸಸ್ ಮೀನುಗಾರಿಕೆ ವೃತ್ತಿ, ಮಾತನಾಡುವ ಭಾಷೆ, ಅವರು ಪ್ರಯಾಣಿಸುವ ರೀತಿ (ರಾಯಲ್ ಎನ್ಫೀಲ್ಡ್ ವರ್ಸಸ್ ರಿಪೇರಿ ಮಾಡಿದ ಬೈಕ್), ಅವರ ನಡವಳಿಕೆಗಳು (ಮೇಲ್ವರ್ಗದ ಸೌಲಭ್ಯಗಳಿಂದ ಯುವತಿ ಗಂಡುಬೀರಿಯಾಗಿದ್ದರೆ, ಬಲಿಷ್ಠ ಹುಡುಗ ತನ್ನ ಸಾಮರ್ಥ್ಯವನ್ನು ತೋರಿಸದೆ ಇರುವುದು), ಬಡತನಕ್ಕೆ ಅವರು ಹೇಗೆ ಹೊಂದಿಕೊಳ್ಳುತ್ತಾರೆ, ಅವರ ಮೂಗುಳಿಗೆ ಬಡಿಯುವ ವಾಸನೆ, ಅವರ ಹೆಸರುಗಳು, ಅವರ ಸ್ನೇಹಿತರು, ಕವಿತೆ ತರಗತಿ ಇತ್ಯಾದಿ. ಈ ಸಿನಿಮಾದ ನಾಯಕಿ ಸಾಮಾನ್ಯ ಗ್ರಾಮೀಣ ಯುವತಿ. ಶಿಸ್ತಿನ ದೇಹ ದಂಡಿಸಿರುವ ಸೌಂದರ್ಯ ರಾಣಿಯಲ್ಲ. ಹೀಗಾಗಿ ಸಾಮಾನ್ಯ ಜನರು ಆಕೆಯ ಜೊತೆಗೆ ಗುರುತಿಸಿಕೊಳ್ಳುತ್ತಾರೆ. ಹಿಂದಿಯ ದಮ್ ಲಗಾ ಕೆ ಹೈಸಾ ಸಿನಿಮಾದ ನಾಯಕಿ ಜನರಿಗೆ ಇಷ್ಟವಾಗಿದ್ದೂ ಆಕೆಯ ಸಾಮಾನ್ಯ ಯುವತಿಯ ಶೈಲಿ. ಈ ಯುವತಿಯರನ್ನು ಸಾಮಾನ್ಯ ಯುವತಿಯರು ಹೆಚ್ಚು ಅಸೂಯೆ ಪಡದೆಸ್ವೀಕರಿಸಬಲ್ಲರು. ಬಲಿಷ್ಠ ಮನಸ್ಸಿನ ಯುವತಿ ಬೈಕ್ ಸವಾರಿ ಮಾಡಿ ದೈಹಿಕ ಜಗಳಕ್ಕೂ ಹೇಸುವುದಿಲ್ಲ. ಬಾಲಿವುಡ್ ನಾಯಕಿಯರಿಗೆ ಈಕೆ ವಿಭಿನ್ನವಾಗಿ ಮಾರ್ಗದರ್ಶಿಯಾಗಬೇಕು. ಆಕೆಯ ತರಹ ಕಾಣುವುದಲ್ಲ, ಆಕೆಯಂತೆ ಬಲಿಷ್ಠ, ಸ್ವತಂತ್ರ ಮತ್ತು ಇಚ್ಛೆಯಂತೆ ನಡೆಯುವವಳು. ಹುಡುಗ ನಿಜ ಜೀವನದಲ್ಲಿ ಬಾಡಿ ಬಿಲ್ಡರ್. ಆದರೆ ಬಾಲಿವುಡ್‌ಗೆ ವಿರುದ್ಧವಾಗಿ ಆತನ ದೇಹ ಸಾಮಾನ್ಯವಾಗಿದೆ. ಈ ಕಾರಣಕ್ಕೆ ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶನದ ಬದಲಾಗಿ ಸಾಮಾನ್ಯನಂತೆ ಕಾಣುವ ಹುಡುಗ ಜನರಿಗೆ ಇಷ್ಟವಾದ. ವಿತರಣೆಯೂ ಸಿನಿಮಾದ ಭವಿಷ್ಯವನ್ನು ಹೇಳುತ್ತದೆ. ನಾಗರಾಜ್ ಮಂಜುಲೆಯಂತಹ ನಿರ್ದೇಶಕರು ವಿತರಕತರ ನಿಟ್ಟಿನಲ್ಲಿ ಹೇಳುವುದಾದಲ್ಲಿ ಉದ್ಯಮದ ದೊಡ್ಡ ಬ್ರಾಹ್ಮಣರ ಮುಂದಿರುವ ದಲಿತರು. ಇದೇ ಸಮಯದಲ್ಲಿ ಬಿಡುಗಡೆಯಾದ ಪ್ರೇಮ್ ರತನ್ ದನ್ ಪಾಯೋ ಬಾಲಿವುಡ್ ಸಿನಿಮಾ ಮೊದಲ ದಿನವೇ 40 ಕೋಟಿ ಮಾಡಿದೆ. ಆದರೆ ಅದು ಬರೋಬ್ಬರಿ 5000 ಸ್ಕ್ರೀನುಗಳಲ್ಲಿ ತೆರೆಕಂಡಿದೆ. ಈ ಸಿನಿಮಾ ತೆರೆಕಂಡ ದಿನ ಅಂತರ್ಜಾಲದಲ್ಲಿ ಸಿನಿಮಾ ಬುಕ್ ಮಾಡಲು ನೋಡಿದರೆ ಮುಂಬೈಯಾದ್ಯಂತೆ ಎರಡೇ ಹಿಂದಿ ಸಿನಿಮಾ ಪ್ರದರ್ಶನವಾಗುತ್ತಿತ್ತು. ಇಲ್ಲಿ ಪ್ರೇಮ್ ರತನ್ ದನ್ ಪಾಯೋ ಸಿನಿಮಾಗೆ ಸ್ಪರ್ಧೆಯೇ ಇರಲಿಲ್ಲ. ಆ ವಾರ ಹಿಂದಿ ಸಿನಿಮಾ ನೋಡಲು ನೀವು ಬಯಸಿದರೆ ನಿಮಗೆ ಆಯ್ಕೆಯೇ ಇರುವುದು ಎರಡು! ಇದ ಹಿಂದಿನ ಪ್ರಚಾರದ ಅಬ್ಬರಕ್ಕೆ ಎಲ್ಲರೂ ಒಮ್ಮೆ ನೋಡಲು ಆರಿಸಿಕೊಳ್ಳುವುದು ಸಾಮಾನ್ಯ. ಮೊದಲ ದಿನದ ಓಪನಿಂಗ್ ನಂತರ ಈ ಸಿನಿಮಾದ ನಂತರದ ದಿನಗಳ ಕಲೆಕ್ಷನ್ ಇಳಿದಿದೆ. ಸ್ಪಷ್ಟವಾಗಿ ಯಶಸ್ಸಿಗಾಗಿ ಆರಿಸಿದ ದಾರಿ ಭಿನ್ನ. ಸೈರಾಟ್ 450 ಸ್ಕ್ರೀನಲ್ಲಿ ತೆರೆಕಂಡಿದೆ. ಹೆಚ್ಚು ಪ್ರಚಾರವೂ ಇರಲಿಲ್ಲ. ಹಾಗಿದ್ದರೂ ಬಾಯಿ ಮಾತಿನ ಪ್ರಚಾರಕ್ಕೇ ಅದು 3 ದಿನಗಳಲ್ಲಿ 12.1 ಕೋಟಿ ಮಾಡಿದೆ. ಸೈರಾಟ್ ಸಿನಿಮಾಗೆ ಪ್ರೇಮ್ ರತನ್ ದನ್ ಪಾಯೋ ಸಿನಿಮಾಗೆ ಸಿಕ್ಕ ಪ್ರಚಾರ ಮತ್ತು ಸ್ಕ್ರೀನುಗಳು ಸಿಕ್ಕಿದ್ದಲ್ಲಿ ಲಾಭ ಹೇಗಿರುತ್ತಿತ್ತೆಂದು ಯೋಚಿಸಿ. ಹೀಗಾಗಿ ಸಿನಿಮಾ ರಂಗದ ದಲಿತರಾಗಿದ್ದರೂ ನಿರ್ದೇಶಕರು ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. 525 ಸ್ಕ್ರೀನುಗಳಿಂದ ಈವರೆಗೆ 75 ಕೋಟಿ ರೂಪಾಯಿ ಗಳಿಸಿದ್ದಾರೆ. ಆದರೆ ಹಿಂದಿ ಸಿನಿಮಾವನ್ನು ಮತ್ತೊಮ್ಮೆ ಜುಹು ಪಿವಿಆರ್ ಅಲ್ಲಿ ನೋಡುವಾಗ ಎಂತಹ ಉದ್ಯಮ ಪ್ರಜ್ಞೆ ಒಂದು ಉತ್ತಮ ಸಿನಿಮಾವನ್ನು ಪ್ರದರ್ಶಿಸದೆ ಹೊರಗಿಡಲು ಅವರಿಗೆ ನೆರವಾಗಿದೆ ಎಂದು ಅಚ್ಚರಿಯಾಗುತ್ತಿದೆ. ವಿತರಣೆಯ ಸಂದರ್ಭದ ಜಾತಿವಾದವೆ? ಜಾತಿವಾದ ನಿಜ ಜೀವನದಲ್ಲಿ ವಿಭಿನ್ನ ಆಕಾರ ಮತ್ತು ಗಾತ್ರದಲ್ಲಿ ಕಾಣ ಬರುತ್ತದೆ.

ಕೃಪೆ: www.sify.com

share
ಸತ್ಯನ್ ಕೆ. ಬರ್ಡೋಲಿಮೊದಲ
ಸತ್ಯನ್ ಕೆ. ಬರ್ಡೋಲಿಮೊದಲ
Next Story
X