ಮಗು, ಪತಿ ತೊರೆದು ಮಹಿಳೆ ನಾಪತ್ತೆ

ಬಂಟ್ವಾಳ, ಮೇ 28: ಪುರಸಭಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ಮಹಿಳೆಯೊಬ್ಬರು ತನ್ನ ನಾಲ್ಕು ವರ್ಷದ ಹೆಣ್ಣು ಮಗು ಮತ್ತು ಪತಿಯನ್ನು ಬಿಟ್ಟು ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ನಿವಾಸಿ ರೊನಾಲ್ಡ್ ಡಿಕ್ರೂಜ್ ಎಂಬವರು ಐದು ವರ್ಷಗಳ ಹಿಂದೆಯಷ್ಟೇ ಜಾನಿಫರ್ ಎಂಬಾಕೆಯನ್ನು ವಿವಾಹವಾಗಿ ನಾಲ್ಕು ವರ್ಷದ ಹೆಣ್ಣು ಮಗುವನ್ನೂ ಹೊಂದಿದ್ದಾರೆ. ಗುರುವಾರ ಮಧ್ಯಾಹ್ನದಿಂದ ಈಕೆ ಮನೆ ಬಿಟ್ಟು ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ನಗರ ಠಾಣೆಗೆ ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story





