ರಾಜ್ಯಸಭೆಗೆ ಎಐಸಿಸಿಯಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕರ್ನಾಟಕದಿಂದ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್
ಹೊಸದಿಲ್ಲಿ, ಮೇ 28: ಮುಂಬರುವ ರಾಜ್ಯಸಭಾ ಚುನಾವಣೆಗೆ ಎಐಸಿಸಿ 8 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಕರ್ನಾಟಕದಿಂದ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್ ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶದಿಂದ ಹಿರಿಯ ಮುಖಂಡ ಕಪಿಲ್ ಸಿಬಾಲ್, ಮಹಾರಾಷ್ಟ್ರದಿಂದ ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಂ, ಪಂಜಾಬ್‌ನಿಂದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ, ಉತ್ತರ ಖಂಡದಿಂದ ಪ್ರದೀಪ್ ತಮ್ಟಾ, ಮಧ್ಯಪ್ರದೇಶದಿಂದ ಹಿರಿಯ ವಕೀಲ ವಿವೇಕ್ ತನ್ಖಾ, ಹಾಗೂ ಛತ್ತೀಸ್‌ಗಢ ರಾಜ್ಯದಿಂದ ಛಾಯಾ ವರ್ಮರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ.
ಕರ್ನಾಟಕದಲ್ಲಿ ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಪಿಸಿಸಿ ಮುಖ್ಯಸ್ಥರು ಹಾಗೂ ಸಿಎಲ್‌ಪಿ ಮುಖಂಡರು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
Next Story





