ಕುವೈಟ್: ಪವಿತ್ರ ರಮಝಾನ್‌ಗೆ ಮುಸ್ಲಿಮರನ್ನು ಸ್ವಾಗತಿಸಲು ಮಸ್ಚಿದುಲ್ ಕಬೀರ್ ಸಜ್ಜು

ಕುವೈಟ್ ಸಿಟಿ, ಮೇ 28: ಪವಿತ್ರರಮಝಾನ್ ಗೆ ದೇಶದ ಪ್ರಧಾನ ಮಸೀದಿಯಲ್ಲೊಂದಾದ ಮಸ್ಚಿದುಲ್ ಕಬೀರ್ ಮುಸ್ಲಿಮರನ್ನು ಸ್ವಾಗತಿಸಲು ಸಜ್ಜಾಗಿದೆ ಎಂದು ವಕ್ಫ್ ಮತ್ತು ಇಸ್ಲಾಮೀ ವಿಷಯಗಳ ಸಚಿವ ಯಯ್ಕೂಬ್ ಅಲ್‌ಸಾನಿಅ್ ಹೇಳಿದ್ದಾರೆ. ರಮಝಾನ್ ಸಿದ್ಧತೆಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ರಮಝಾನ್‌ಗಿಂತ ಮುಂಚೆ ಆರಂಭವಾಗಿದ್ದ ರಿಪೇರಿ ಕೆಲಸಗಳು ಮುಗಿದ್ದಿದ್ದು ಮಸೀದಿ ಈಗ ಮುಸ್ಲಿಮರನ್ನು ಸ್ವಾಗತಿಸಲು ಸಜ್ಜಾಗಿದೆ. ಹೊಸ ಪೈಟಿಂಗ್ ಅದಕ್ಕೆ ಸಂಬಂಧಿಸಿದ ಇತರ ಕೆಲಸಗಳು ತೃಪ್ತಿಕರವಾಗಿ ಮುಗಿದಿದೆ. ಮಸೀದಿಗೆ ಸಮೀಪದ ಪ್ರದೇಶಗಳಲ್ಲಿ ಇದಕ್ಕೆ ಸಂಬಂಧಿಸಿದ ಕೆಲಸವೂ ಮುಗಿದಿದೆ ಎಂದು ಸಚಿವರು ತಿಳಿಸಿದ್ದಾರೆ. ರಮಝಾನ್ 27ರಂದು ಒಂದೂವರೆ ಲಕ್ಷ ಮುಸ್ಲಿಮರು ಮಸೀದಿ ಮತ್ತು ಪರಿಸರದಲ್ಲಿ ಸೇರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಪರಿಗಣಿಸಿ ಅಗತ್ಯ ಭದ್ರತಾ ಏರ್ಪಾಟು ಮಾಡಲಾಗಿದೆ. ಜೊತೆಗೆ ದೇಶದ ಆರು ಗವರ್ನರೇಟ್‌ಗಳ ಆರು ರಮಝಾನ್ ಕೇಂದ್ರಗಳು ಕಾರ್ಯಪ್ರವೃತ್ತವಾಗಲು ಸಜ್ಜಾಗಿ ನಿಂತಿದೆ ಎಂದೂ ಸಚಿವರು ಹೇಳಿದ್ದಾರೆ. ರಮಝಾನ್‌ನಲ್ಲಿ ಇಅ್ತಿಕಾಫ್ ಕೂರುವವರಿಗೆ ಆರು ಗವರ್ನರೇಟ್‌ಗಳಲ್ಲಿ ಆರು ರೀತಿಯ ಇಅ್ತಿಕಾಫ್ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಇಂತಿರುವ 36 ಇಅ್ತಿಕಾಫ್ ಕೇಂದ್ರಗಳಿದ್ದು ಇದನ್ನು ಸ್ವದೇಶಿಗಳು ಹಾಗೂ ವಿದೇಶಿಗಳಿಗೆ ಸಮಾನವಾಗಿ ಬಳಸಬಹುದಾಗಿದೆ.





