ಭಟ್ಕಳ: ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ವಶ - ಓರ್ವನ ಬಂಧನ
ಭಟ್ಕಳ:ಭಟ್ಕಳದ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದು ಈ ಮನೆಯ ಮೇಲೆ ಧಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.ಬಂಧಿತನನ್ನುಕುರುಂದೂರಿನ ಮಾದೇವಕುಪ್ಪಯ್ಯ ನಾಯ್ಕಎಂದು ಗುರುತಿಸಲಾಗಿದೆ.
ಹಿತೈಷಿಯೊಬ್ಬರು ನೀಡಿದಚಿಕ್ಕ ಸುಳಿವನ್ನು ಹಿಂಬಾಲಿಸಿ ಅತಿಚಾಕಚಕ್ಯತೆಯಿಂದ ಈ ಧಾಳಿಯನ್ನು ನಡೆಸಿ ಅಕ್ರಮ ಮದ್ಯತಯಾರಿಸುತ್ತಿದ್ದಾಗಲೇ ಹಿಡಿಯಲಾಗಿದೆ.ಮನೆಯಿಂದಇಪ್ಪತ್ತೊಂಭತ್ತು ಲೀಟರ್ ಹುಳಿಬಂದ ಬೆಲ್ಲ, ಒಂದು ಲೀಟರ್ ಮದ್ಯ ಮತ್ತುಅಕ್ರಮ ಮದ್ಯತಯಾರಿಕೆಗೆ ಬಳಸಲಾಗುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಧಾಳಿ ನಡೆಸಿದ ತಂಡದಲ್ಲಿ ಸಬ್‌ಇನ್ಸ್ ಪೆಕ್ಟರ್ ವಿಶ್ವನಾಥ ಭಟ್, ಕೆ. ಮನೋಹರ್, ಶ್ರೀಧರ ಮಡಿವಾಳ ಇದ್ದರು.ಇವರಿಗೆ ಮಹಾಂತೇಶ ಮತ್ತು ಮಂಜುನಾಥ ನಾಯ್ಕ ಸಹಕರಿಸಿದರು.
Next Story





