ಭಟ್ಕಳ:ಶಮ್ಸ್ ಶಾಲಾ ದ್ಯಾರ್ಥಿಗಳಿಂದ ’ನಮ್ಮ ನಡೆ ಶಾಲೆಯಡೆ’ ಶೈಕ್ಷಣಿಕ ಜಾಗೃತಿ ರ್ಯಾಲಿ
.jpg)
ಭಟ್ಕಳ: ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಶಾಲಾ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಜಾಗೃತಿ ಅಂಗವಾಗಿ ’ನಮ್ಮ ನಡೆ ಶಾಲೆಯಡೆ’ ಎಜ್ಯುವಾಕ್ ರ್ಯಾಲಿಯನ್ನು ಶನಿವಾರ ಆಯೋಜಿಸಲಾಗಿತ್ತು.
ರ್ಯಾಲಿಯನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಸಂಯೋಜಕ ಎಂ.ಆರ್.ಮಾನ್ವಿ ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದ್ದು ಇದರಿಂದ ಒಬ್ಬ ಮಗುವೂ ವಂಚಿತನಾಗಬಾರದು,ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ನಗರಠಾಣೆಯ ಪಿ.ಎಸ್.ಐರೇವತಿ, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್,ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ,ಸ್ಕೂಲ್ ಬೋರ್ಡ್ ಕಮಿಟಿಯ ಅಝೀಝುರ್ರಹ್ಮಾನ್ ನದ್ವಿ ಮತ್ತಿತರರು ಉಪಸ್ಥಿತರಿದ್ದರು.
ಹಳೆ ಬಸ್ ನಿಲ್ದಾಣದ ಸಾವಾಜನಿಕ ಮೈದಾನದಿಂದ ಆರಂಭಗೊಂಡ ರ್ಯಾಲಿಯು ಸುಲ್ತಾನ್ ಸ್ಟ್ರೀಟ್ ಮೂಲಕ ಚೌಕ್ ಬಝಾರ್, ಮುಖ್ಯರಸ್ತೆಯಿಂದ ಸಾರ್ವಜನಿಕ ಮೈದಾನದಲ್ಲಿ ಸಮಾಪ್ತಿಗೊಂಡಿತು.





