ಡಾ. ಕೃಪಾ ಆಳ್ವರಿಂದ ನಾಡಗೀತೆಗೆ ಆಗೌರವ!

ಮಂಗಳೂರು, ಮೇ 28: ನಗರದ ಪುರಭವನದಲ್ಲಿ ಇಂದು ಸ್ತ್ರೀಶಕ್ತಿ ಸಮಾವೇಶ, ಮಾಹಿತಿ ಕಾರ್ಯಾಗಾರ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ತಾಲೂಕು ಸ್ತ್ರೀ ಶಕ್ತಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಡಗೀತೆಯ ಸಂದರ್ಭ ರಾಜ್ಯ ಮಹಿಳಾ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ಮೊಬೈಲ್‌ನಲ್ಲಿ ಮಾತನಾಡುವ ಮೂಲಕ ಅಗೌರವ ಪ್ರದರ್ಶಿಸಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯ ಉನ್ನತ ಸ್ಥಾನದಲ್ಲಿರುವ ಡಾ. ಕೃಪಾ ಅಮರ್ ಆಳ್ವ ಅವರು ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯಲ್ಲಿ ನಾಡಗೀತೆ ಹಾಡುವ ಸಂದರ್ಭ ವೇದಿಕೆಯ ಮೇಲಿದ್ದುಕೊಂಡು ಕೆಲ ಸೆಕೆಂಡುಗಳಿಗೂ ಅಧಿಕ ಕಾಲ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ದೃಶ್ಯ ವೇದಿಕೆಯ ಎದುರಿಗಿದ್ದವರನ್ನು ಮುಜಗರಕ್ಕೊಳ ಮಾಡಿತ್ತು.
Next Story





