ಮೇ 29ರಂದು "ಕಟ್ಟಡ ಕಾರ್ಮಿಕರ ಸಮ್ಮಿಲನ’’ ಶ್ರಮ ಸಂಭ್ರಮ -2016 ಸಾಂಸ್ಕ್ರತಿಕ ಕಾರ್ಯಕ್ರಮ

‘’ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಫೇಡರೇಶನ್‌ನ ಮಂಗಳೂರು ನಗರ ಸಮಿತಿ ಆಶ್ರಯದಲ್ಲಿ ಮಂಗಳೂರು ನಗರದ ಪುರಭವನದಲ್ಲಿ "ಕಟ್ಟಡ ಕಾರ್ಮಿಕರ ಸಮ್ಮಿಲನ’’ ಶ್ರಮ ಸಂಭ್ರಮ -2016 ಸಾಂಸ್ಕ್ರತಿಕ ಕಾರ್ಯಕ್ರಮ 29-05-2016ರಂದು ಬೆಳಿಗ್ಗೆ 9.00 ಗಂಟೆಯಿಂದ ನಡೆಯಲಿದೆ.
C.I.T.U ಸಂಘಟನೆ 2 ದಶಕಗಳ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯದಲ್ಲಿ 2006ರಲ್ಲಿ ಕಲ್ಯಾಣ ಮಂಡಲಿ ಸ್ಥಾಪನೆಯಾಗಿದ್ದು ಇದೀಗ 10 ವರುಷಗಳು ಕಳೆದಿವೆ.
C.I.T.U. ಸಹಾಯಕ ಕಾರ್ಮಿಕ ಆಯುಕ್ತರಾದ ಡಿ.ಜಿ ನಾಗೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು ರಾಜ್ಯ ಕಾರ್ಯದರ್ಶಿ ಕಾಂ|| ಮಹಾಂತೇಶ್.ಜಿಲ್ಲಾ ಕಾರ್ಯದರ್ಶಿ ಕಾಂ|| ವಸಂತ ಆಚಾರಿ ಆಗಮಿಸಲಿದ್ದಾರೆ. ಎಂದು ಪ್ರಧಾನ ಕಾರ್ಯದರ್ಶಿ ಯೋಗಿಶ್ ಜಪ್ಪಿನಮೊಗರು ತಿಳಿಸಿದ್ದಾರೆ.
Next Story





