ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್ (ಡಿಕೆಎಂಎ) ವತಿಯಿಂದ ಫಲಾನುಭವಿಗಳಿಗೆ ಅರ್ಜಿ ವಿತರಣೆ
ಮಂಗಳೂರು,ಮೇ 28: ದಕ್ಷಿಣ ಕನ್ನಡ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡುವ ಸದುದ್ದೇಶದಿಂದ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನನ್ನು ಸ್ಥಾಪಿಸಲಾಗಿದೆ. ಸದರಿ ಯೋಜನೆಯ ಫಲಾನುಭವಿಯಾಗಲು ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಅರ್ಜಿಯನ್ನು ಜೂನ್ 1 ಬುಧವಾರದಿಂದ ಪೂರ್ವಾಹ್ನ ಗಂಟೆ 10 ರಿಂದ ಸಂಜೆ 5 ರವೆರಗೆ ಸಂಸ್ಥೆಯ ಕಛೇರಿಯಲ್ಲಿ ವಿತರಿಸಲಾಗುವುದು. ಫಲಾನುಭವಿಗಳ ಅರ್ಜಿಗಳನ್ನು ಜಮಾಅತ್ ಕಮಿಟಿಯವರು ಅಥವಾ ಫಲಾನುಭವಿಗಳು ವೈಯಕ್ತಿಕವಾಗಿ ಪಡೆದುಕೊಳ್ಳಬಹುದು. ದ.ಕ ಜಿಲ್ಲೆಯ ಎಲ್ಲಾ ಮಸೀದಿಗಳ ಆಡಳಿತ ಸಮಿತಿಯವರು ತಮ್ಮ ಜಮಾಅತ್ ಮಟ್ಟದಲ್ಲಿ ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ಹಾಗೂ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ದೃಢೀಕರಿಸಿ ಸಹಕರಿಸುವಂತೆ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್‌ನ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ ರಶೀದ್ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.ಕಛೇರಿಯ ವಿಳಾಸ: ಮೊದಲನೇ ಮಹಡಿ, ವೆಸ್ಟ್ ಗೇಟ್ ಹೈಟ್ಸ್, ಸ್ಟರ್ರಕ್ ರೋಡ್, ಮಲಬಾರ್ ಗೋಲ್ಡ್ -ಕಾಸಾ ಗ್ರಾಂಡ್ ರಸ್ತೆ ನಡುವೆ, ಫಳ್ನೀರ್ ಮಂಗಳೂರು-1. ದೂರವಾಣಿ:0824-2435255, ಮೊಬೈಲ್: 9740799555, 7204009305





