ಭಟ್ಕಳ: ಕಡವೆ ಬೇಟೆ, ಓರ್ವನ ಬಂಧನ - ಮೂವರು ಪರಾರಿ

ಭಟ್ಕಳ: ಕಡವೆ(ಸಾಂಬಾರ್) ಪ್ರಾಣಿಯನ್ನು ಬೇಟೆಯಾಡಿ ಆರೋಪಿಯೊಬ್ಬ ಅರಣ್ಯ ಅಧಿಕಾರಿಗಳ ಕೈವಶವಾಗಿರುವ ಘಟನೆ ಹಾಡುವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲಿ ಜರಗಿದೆ.
ಕಡವೆ ಬೇಟೆಯಾಡಿ ಬಂಧಿಸಲ್ಪಟ್ಟ ವ್ಯಕ್ತಿಯನ್ನು ನಾಗಪ್ಪ ಈರಪ್ಪ ನಾಯ್ಕ ಓಣಿಬಾಗಿಲು ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರು ಆರೋಪಿಗಳು ತಲೆಮರೆಸಿಕೊಂಡಿದು್ದ ಅವರ ಶೋಧಕಾರ್ಯ ನಡೆದಿದೆ.
ಈ ಕುರಿತು ಶನಿವಾರ ವಲಯ ಅರಣ್ಯ ಕಚೇರಿಯಲ್ಲಿ ವಲಯ ಅರಣ್ಯಾಧಿಕಾರಿ ನಂದೀಶ್ ಪತ್ರಿಕಾಗೋಷ್ಟಿಯನ್ನು ನಡೆಸಿದ್ದು ಘಟನೆಯ ಕುರಿತಂತೆಪತ್ರಕರ್ತಕರಿಗೆ ವಿವರ ನೀಡಿದರು.
ಗುರುವಾರ ರಾತ್ರಿ ಹಾಡುವಳ್ಳಿ ಅರಣ್ಯ ಇಲಾಖೆಯಲ್ಲಿ ಗುಂಡಿನ ಸದ್ದು ಕೇಳಿಸಿದೆ. ತಕ್ಷಣ ಅಧಿಕಾರಿಗಳು ಕಾರ್ಯಪ್ರವರ್ತರಾಗಿದ್ದಾರೆ. ಹಾಡುವಳ್ಳಿ ಪಂಚಾಯಿತಿಯ ಓಣಿಬಾಗಿಲು ಅರಣ್ಯಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ ಖಚಿತ ಮಾಹಿತಿ ಪಡೆದ ಎಸಿಎಪ್ ನಂದೀಶ, ಆರ್‌ಎಫ್‌ಒ ರವೀಂದ್ರ, ಅಧಿಕಾರಿಗಳಾದ ನಾಗೇಕರ, ಸಂತೋಷ ಸೇರಿದಂತೆ ಇತರ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟರಲ್ಲಾಗಲೆ ಕಡವೆಯನ್ನು ಸಾಗಿಸಲು ಎಲ್ಲಾ ಸಿದ್ಧತೆಗಳು ನಡೆದಿದ್ದವು. ತಲೆಯನ್ನು ಮಚ್ಚಿನಿಂದ ಕಡಿದು ಸುತ್ತಲೂ ಬಳ್ಳಿ ಹಾಕಿ ಸಾಗಿಸಲು ಸಿದ್ಧತೆಯಾಗಿತ್ತು. ಅಷ್ಟರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಆಗಮನವಾಗುತ್ತಿದ್ದ ಹಾಗೆ ಮೂವರು ಪರಾರಿಯಾಗಿದ್ದಾರೆ ಎಂದು ಅವರು ವಿವರಿಸಿದರು.







