ಭಟ್ಕಳ: ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ ದಿಂದ ’ಗ್ರಾಫಿಕ್ ಡಿಸೈನರ್ ತರಬೇತಿ’

ಭಟ್ಕಳ: ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ ಇದರ ವತಿಯಿಂದ ’ಗ್ರಾಫಿಕ್ ಡಿಸೈನರ್ ತರಬೇತಿ’ ಯ ಉದ್ಘಾಟನೆ, ’ಉದಯೋನ್ಮುಖ ಮಕ್ಕಳ ಪ್ರತಿಭಾ ಸಂಭ್ರಮ’, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಪ್ರತಿಷ್ಠಾನದ ಶ್ರೀ ಸಿದ್ಧಿವಿನಾಯಕ ಕೃಪಾ ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೊನ್ನಾವರದ ಉದ್ಯಮಿ ಜೆ, ಟಿ. ಪೈ ಮಾತನಾಡಿದರು. ಡಿ. ಜೆ. ಕಾಮತ್, ಜಮಾತ್ -ಈ-ಮುಸ್ಲೀಮಿನ್ ಸಂಸ್ಥೆಯ ಅಮಿನುದ್ಧೀನ್ ಗೌಡಾ,ಜನಾಬ್ ಜಹೂರ್ ಹಾಜಿ ಅಮಿನ್,ಜಿಲ್ಲಾ ಪಂಚಾಯಿತಿ ಮಾವಳ್ಳಿ ಕ್ಷೇತ್ರದ ಸದಸ್ಯೆ ಸಿಂಧು ಭಾಸ್ಕರ ನಾಯ್ಕ,ಮಾವಳ್ಳಿ 2 ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಪಡಿಯಾರ್ ಇದ್ದರು.ಸಂಸ್ಥೆಯ ಅಧ್ಯಕ್ಷ ಎಸ್.ಎಸ್.ಕಾಮತ್ ತಮ್ಮ ಪ್ರಾಸ್ಥಾವಿಕ ಮಾತನಾಡಿ ಸ್ವಾಗತಿಸಿದಸಂಸ್ಥೆಯ ಪ್ರಾರ ಪ್ರಾಚಾರ್ಯೆ ಕು.ಲತಾ ವರದಿ ವಾಚನ ಮಾಡಿದರು.
ವಾಸುದೇವ ರಾಮ ಪೈ, ಗುಣವಂತೆ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಜನಪದ, ಕೌಶಲ್ಯ, ಸಂಘಟನಾ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ, ಡಾ॥ ಅಮಿನುದ್ಧೀನ್ ಗೌಡಾ, ಡಿ. ಜೆ. ಕಾಮತ್, ಪಾಂಡುರಂಗ ಅಳ್ವೇಗದ್ದೆ, ಸಂಗೀತ ಕ್ಷೇತ್ರದಲ್ಲಿ ಕು. ಅನ್ನಪೂರ್ಣ ಶಾನಭಾಗ್, ಹೊನ್ನಾವರ, ಯಕ್ಷಗಾನ ಕ್ಷೇತ್ರದಲ್ಲಿ ಕೃಷ್ಣ ಭಂಡಾರಿ, ಭಜನೆ ಹಾಗೂ ಹಾಡುಗಾರಿಕೆಯಲ್ಲಿ ತಮ್ಮ ಕೌಶಲ್ಯವನ್ನು ತೋರಿಸುತ್ತಿರುವ ವಾಸು ಮೊಗೇರ, ತೆರ್ನಮಕ್ಕಿ, ಸಂಗೀತ ಮತ್ತು ಕಲಾ ಕ್ಷೇತ್ರದಲ್ಲಿ ಪ್ರಸನ್ನ ಪ್ರಭು, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೋಮಯ್ಯ ಗೊಂಡ, ಕುಂಟವಾಣಿಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಉತ್ತಮ ದರ್ಜೆಯ ಡ್ರಾಯಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಝೇಂಕಾರ ಮೆಲೋಡಿಸ್ ಕಲಾ ಸಂಘದ ವಿದ್ಯಾರ್ಥಿಗಳಾದ ಕು. ರಶ್ಮೀ ರಮೇಶ ಗೌಡ, ರಾಜ್ಯಕ್ಕೆ 3 ನೇ ಸ್ಥಾನ ಪಡೆದ ಕು.ಚಂದನ ಅರುಣ ಶೆಟ್ಟಿ, ಡ್ರಾಯಿಂಗ್ ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ಸ್ಥಾನ ಪಡೆದ ಕು.ಪ್ರದೀಪ ಜಟ್ಟಾ ನಾಯ್ಕ, ರಾಜ್ಯಕ್ಕೆ 6ನೇ ಸ್ಥಾನ ಪಡೆದ ಕು. ಮಂಜುನಾಥ ಲಿಂಗಯ್ಯ ನಾಯ್ಕ, ಭರತನಾಟ್ಯ ವಿಭಾಗದಲ್ಲಿ ಶೈಕ್ಷಣಿಕ ಜಿಲ್ಲೆ ಕಾರವಾಕ್ಕೆ ಪ್ರಥಮ ಸ್ಥಾನ ಪಡೆದ ಕು.ಅದಿತಿ ಪೈ ಹಾಗೂ ಚಿತ್ರಕಲೆ ಹಾಗೂ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ರಾಜ್ಯಕ್ಕೆ 2 ನೇ ಸ್ಥಾನ ಪಡೆದ, ಅಸ್ಸೀಸಿ ಕಿರಿಯ ಪ್ರಾಥಮಿಕ ಶಾಲೆ, ಮಂಕಿ ಯ ವಿದ್ಯಾರ್ಥಿನಿ ಯಾದ ಕು.ಧನು ಪ್ರಭು ಇವರನ್ನು ಸನ್ಮಾನಿಸಲಾಯಿತು.







