ಕಾಶಿಪಟ್ಣ ದಾರುನ್ನೂರಿನಲ್ಲಿ ಪ್ರವೇಶಾತಿ ಆರಂಭ
ಮಂಗಳೂರು, ಮೇ 28: ದೇಶದ ಉನ್ನತ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣ ಕೇಂದ್ರವಾದ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿ ಚೆಮ್ಮಾಡ್ ಇದರ ಅಂಗೀಕಾರದೊಂದಿಗೆ ಕಾರ್ಯಾಚರಿಸುತ್ತಿರುವ ಮೂಡುಬಿದಿರೆ ಸಮೀಪದ ಕಾಶಿಪಟ್ಣ ದಾರುನ್ನೂರ್ ಇಸ್ಲಾಮಿಕ್ ಅಕಾಡಮಿಯಲ್ಲಿ ಪ್ರವೇಶಾತಿ ಆರಂಭಗೊಂಡಿರುತ್ತದೆ.
ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಕ ಉಸ್ತಾದ್ ನೇತೃತ್ವದಲ್ಲಿ ನಡೆಯುತ್ತಿರುವ ಅಕಾಡಮಿಗೆ ಮದ್ರಸ ಹಾಗೂ ಶಾಲೆಯಲ್ಲಿ ಐದನೇ ತರಗತಿ ಪಾಸಾಗಿರುವ ಹನ್ನೆರಡು ವರ್ಷ ವಯಸ್ಸಿನೊಳಗಿನ ಗಂಡು ಮಕ್ಕಳನ್ನು ಸೇರಿಸಬಹುದಾಗಿದೆ. ಇಲ್ಲಿ ಸಂಪೂರ್ಣ ಉಚಿತ ಆಹಾರ, ವಸತಿಯೊಂದಿಗೆ ಲೌಕಿಕ ವಿದ್ಯಾಬ್ಯಾಸ ಆರನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ ಸಹಿತ ಸರಕಾರಿ ವಿಶ್ವ ವಿದ್ಯಾಲಯದಲ್ಲಿ ಪದವಿ ಹಾಗೂ ಧಾರ್ಮಿಕ ವಿದ್ಯಾಭ್ಯಾಸದಲ್ಲಿ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯಿಂದ ಹುದವಿ ಬಿರುದನ್ನೂ ನೀಡಲಾಗುತ್ತಿದೆ.
ಪೋಷಕರು ರಮಝಾನ್ ಇಪ್ಪತ್ತರೊಳಗೆ ವಿದ್ಯಾರ್ಥಿಯ ಭರ್ತಿ ಮಾಡಿದ ಅರ್ಜಿಯನ್ನು ಸಂಸ್ಥೆಗೆ ತಲುಪಿಸಬೇಕಾಗಿದ್ದು ಜುಲೈ ಹನ್ನೆರಡರಂದು ದಾರುನ್ನೂರ್ ಕಾಶಿಪಟ್ಣದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಸಂಸ್ಥೆಯ ಮಾನೇಜರ್ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.





