Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಇನ್ನೊಬ್ಬರನ್ನು ನೋಡಿ ನಾವು ಕಲಿಯುವದಲ್ಲ...

ಇನ್ನೊಬ್ಬರನ್ನು ನೋಡಿ ನಾವು ಕಲಿಯುವದಲ್ಲ ಬದಲಾಗಿ ನಮ್ಮನ್ನು ನೋಡಿ ಎಲ್ಲರೂ ಕಲಿಯುವಂತಾಗಬೇಕು-ಡಾ.ರಾಜೇಂದ್ರ ಕುಮಾರ

ವಾರ್ತಾಭಾರತಿವಾರ್ತಾಭಾರತಿ28 May 2016 8:39 PM IST
share
ಇನ್ನೊಬ್ಬರನ್ನು ನೋಡಿ ನಾವು ಕಲಿಯುವದಲ್ಲ ಬದಲಾಗಿ ನಮ್ಮನ್ನು ನೋಡಿ ಎಲ್ಲರೂ ಕಲಿಯುವಂತಾಗಬೇಕು-ಡಾ.ರಾಜೇಂದ್ರ ಕುಮಾರ

ಭಟ್ಕಳ; ಇನ್ನೊಬ್ಬರನ್ನು ನೋಡಿ ನಾವು ಕಲಿಯುವದಲ್ಲ ಬದಲಾಗಿ ನಮ್ಮನ್ನು ನೋಡಿ ಎಲ್ಲರೂ ಕಲಿಯುವಂತಾಗಬೇಕು ಎಂದು ನವೋದಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ ಹೇಳಿದರು.

ಅವರು ನವೋದಯ ಚಾರಿಟೇಬಲ್ ಟ್ರಸ್ಟ್ ಅವರ ನವೋದಯ ವಿವಿದೋದ್ಧೇಶ ಸೌಹಾರ್ಧ ಸಹಕಾರಿ ನಿಯಮಿತದ ಭಟ್ಕಳ ಶಾಖೆಯನ್ನು ಉದ್ಘಾಟಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನವೋದಯ ಚಾರಿಟೇಬಲ್ ಟ್ರಸ್ಟ್‌ನಿಂದ ನಾವು ಯಾವುದೇ ವ್ಯಕ್ತಿಗೆ ವೈಯುಕ್ತಿಕವಾಗಿ ಸಾಲ ನೀಡುತ್ತಿಲ್ಲ. ಬದಲಾಗಿ ಗುಂಪು ಮಾಡಿ ಆ ಗುಂಪಿಗೆ ಸಾಲ ನೀಡುತ್ತಿದ್ದೇವೆ. ಇದರಿಂದ ಅವರು ಪಡೆದುಕೊಂಡ ಹಣ ಸರಿಯಾದ ರೀತಿಯಲ್ಲಿ ವಿನಿಯೋಗವಾಗುತ್ತದೆ.ಮಹಿಳೆಯರು ಹೆಚ್ಚೆಚ್ಚು ಸಭಲರಾಗಬೇಕು. ನಮ್ಮ ಸ್ವಸಹಾಯ ಸಂಘದಲ್ಲಿ ಲಕ್ಷಾಂತರ ಮಹಿಳೆಯರಿದ್ದಾರೆ. ಇಂದು ಸಂಘದ ವತಿಯಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ನಾವು ಉತ್ತಮ ಜೀವನ ಹೊಂದಿದಾಗ ಹಲವಾರು ಮಂದಿ ನಮ್ಮನ್ನು ನೋಡಿ ಕಲಿಯುತ್ತಾರೆ. ಸಂಸ್ಥೆಯ ವತಿಯಿಂದ ಅನೇಕರು ಉದ್ಯೋಗ ರೂಪಿಸಿಕೊಂಡಿದ್ದಾರೆ. ಗುಡಿಕೈಗಾರಿಕೆಗಳನ್ನ ಮಾಡಿಕೊಂಡಿದ್ದಾರೆ. ಹೀಗೆ ಹತ್ತು ಹಲವು ರೀತಿಯಲ್ಲಿ ಸಂಘದಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಮುಂದೆಯೂ ಕೂಡಾ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸೌಲಭ್ಯಗಳು ನಿಮಗೆಲ್ಲಾ ದೊರಕಲಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಜಯಶ್ರೀ ಮೊಗೇರ ನವೋದಯ ಚಾರಿಟೇಬಲ್ ಟ್ರಸ್ಟ್ ಮಹಿಳೆಯರ ಹಾಗೂ ಸಮಾಜದ ಸಭಲೀಕರಣಕ್ಕೆ ಉತ್ತಮ ವೇದಿಕೆಯಾಗಿದೆ. ಭಟ್ಕಳ ತಾಲೂಕು ಒಂದರಲ್ಲಿಯೇ ಹಲವಾರು ಸಂಘಗಳು ನವೋದಯ ದಲ್ಲಿ ನೋಂದಾಯಿತವಾಗಿದ್ದು, ಸಂಘದ ಮುಖಾಂತರ ಹಲವಾರು ಮಹಿಳೆಯರು ತಮ್ಮ ಸಂಸಾರ ರೂಪಿಸಿಕೊಂಡಿದ್ದಾರೆ. ನಾನು ಕೂಡಾ ಈ ಸಂಸ್ಥೆಯ ಸಂಘದಲ್ಲಿ ಸದಸ್ಯೆಯಾಗಿದ್ದೆ. ನವೋದಯ ಸಂಗದಲ್ಲಿ ಮಹಿಳೆಯರು ಸಾಲ ಪಡೆದು ಉದ್ಯೋಗ ಮಾಡುವತ್ತ ಗಮನ ಹರಿಸಬೇಕೇ ಹೊರತು ಇನ್ಯಾವುದೋ ಖರ್ಚುಗಳಿಗೆ ಹಣ ವಿನಿಯೋಗಿಸಿದರೆ ಸಾಲ ತೀರಿಸಲು ಸಮಸ್ಯೆಯಾಗಬಹುದು. ಆದ್ದರಿಂದ ಸಂಘದ ಉದ್ಧೇಶವನ್ನು ಅರಿತು ಅದರಿಂದ ದೊರೆಯುವ ಪ್ರಯೋಜನವನ್ನು ಪಡೆಯುವಂತಾಗಬೇಕು ಎಂದರು.

 ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ ಹಲವಾರು ವರ್ಷಗಳ ಹಿಂದೆ ಆರಂಭವಾದ ನವೋದಯ ಚಾರಿಟೇಬಲ್ ಟ್ರಸ್ಟ್ ಇಂದು ಹಲವಾರು ಜಿಲ್ಲೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಿಂದ ಎಷ್ಟೋ ಕುಟುಂಬಗಳು ಬದುಕು ಕಟ್ಟಕೊಂಡಿವೆ.ಸಂಸ್ಥೆಯ ಅಧ್ಯಕ್ಷರಾದ ಡಾ.ರಾಜೇಂದ್ರಕುಮಾರ ಒಬ್ಬ ಒಳ್ಳೆಯ ಆಡಳಿತಗಾರರು. ಸಹಕಾರ ಸಂಘವೊಂದನ್ನು ಸ್ಥಾಪಿಸಿ ಅದನ್ನು ಜನರ ಜನರಕಲ್ಯಾಣಕ್ಕಾಗಿ ವಿನಿಯೋಗಿಸಿದ ಕೀರ್ತಿ ಅವರದ್ದು ಎಂದರು. ಅಲ್ಲದೇ ಈ ನವೋದಯ ಸಂಘಗಳ ವತಿಯಿಂದ ಏನೇನು ಪ್ರಯೋಜನ ಪಡೆದಿದ್ದೀರಿ ಅವರೆಲ್ಲರೂ ಸಂಸ್ಥೆಯ ಬೆಳವಣಿಗೆಗೂ ಸಹಕಾರ ನೀಡಬೇಕು. ಸಾಲ ಪಡೆದಿದ್ದರೆ ಅದನ್ನು ಸಕಾಲದಲ್ಲಿ ಮರುಪಾವತಿಯಾಗಬೇಕು. ಭಟ್ಕಳದಲ್ಲಿಯೇ ನವೋದಯ ಸಹಕಾರಿ ಸಂಘದ ಶಾಖೆ ತೆರೆದು ಇಲ್ಲಿನ ಸಾವಿರಾರು ಸದಸ್ಯರುಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಜನತೆ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂ.ಆರ್.ನಾಯ್ಕ, ಬಾಬು ಮಾಸ್ಟರ್ ಮುಂತಾದವರು ಮಾತನಾಡಿದರು. ನವೋದಯ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾದ ರಾಜು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿ, ಜಾರಿಗೆ ತಂ ಹಾಗೂ ತರುವ ಯೋಜನೆಗಳ ಬಗ್ಗೆ ವಿವರ ನೀಡಿದರು.

ನವೋದಯ ಸಂಸ್ಥೆಯಿಂದ ಆಸರಕೇರಿ ನಾಮಧಾರಿ ಗುರುಮಠ ವೆಂಕಟ್ರಮಣ ದೇವಸ್ಥಾನ ನೂತನ ಗರ್ಭಗುಡಿ ನಿರ್ಮಾಣಕ್ಕೆ 2ಲಕ್ಷರೂ ದೇಣಿಗೆ ನೀಡಲಾಯಿತು. ಹಾಗೆಯೇ ಜಿಲ್ಲಾಪಂಚಾಯತ್ ನೂತನ ಅಧ್ಯಕ್ಷ್ಯೆಯಾಗಿ ಆಯ್ಕೆಯಾಗಿದ್ದ ಜಯಶ್ರೆಈ ಮೊಗೇರ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎಮ್‌ಜಿಎಮ್ ಸಹಕಾರಿ ಸಂಘದ ಅಧ್ಯಕ್ಷ ಈರಪ್ಪ ಗರ್ಡೀಕರ, ಬೆಳಕೆ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿಥರಿದ್ದರು.

ಕಾರ್ಯುಕ್ರಮಕ್ಕೂ ಮುನ್ನ ನವೋದಯ ಸೌಹಾರ್ಧ ಸಹಕಾರಿ ನಿಯಮಿತದ ಭಟ್ಕಳ ಶಾಖೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X