ಕುರ್ನಾಡು ಸರಕಾರಿ ಪ.ಪೂ.ಕಾಲೇಜಿಗೆ 87.15% ಫಲಿತಾಂಶ

ಕೊಣಾಜೆ: ಮುಡಿಪುವಿನ ಕುರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 87.15% ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 257 ವಿದ್ಯಾರ್ಥಿಗಳಲ್ಲಿ 224 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 137 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 63 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದ ಸಹನಾ, ಬುಶ್ರಾ, ಭವ್ಯಾ, ಮರಿಯಮ್ಮತ್ ಮಸೂದ ಅವರು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾಗಿದ್ದಾರೆ.

ಸಹನಾ

ಬುಶ್ರಾ

ಭವ್ಯಾ

ಮರಿಯಮ್ಮತ್ ಮಸೂದ
Next Story







