ಬೆಳ್ತಂಗಡಿ:ಪಾದಚಾರಿಗೆ ಕಾರು ಡಿಕ್ಕಿ – ಓರ್ವ ಸಾವು
ಬೆಳ್ತಂಗಡಿ: ಗುರುವಾಯನಕೆರೆ ಸಮೀಪ ಮದ್ದಡ್ಕ ನಾಗನ ಕಟ್ಟೆ ಬಳಿ ನಿಂತಿದ್ದ ಬಸ್ಸಿನ ಹಿಂಬದಿಯಿಂದ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವೇಳೆ ಕಾರು ಡಿಕ್ಕಿಹೊಡೆದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.ಮೃತ ವ್ಯಕ್ತಿ ಮೂಡಬಿದ್ರೆ ನಿವಾಸಿ ವಿಶ್ವನಾಥ 38 ಎಂಬವರಾಗಿದ್ದಾರೆ. ಬಸ್ ಹಿಂಬದಿಯಿಂದ ರಸ್ತೆ ದಾಟುತ್ತಿರುವುದನ್ನು ಗಮನಿಸದೆ ವೇಗವಾಗಿ ಬಂದ ಕಾರು ಈತನಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಮೃತಪಟ್ಟಿದ್ದಾನೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





