Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅನಂತ್ ಗೆ ಆಳ್ವಾಸ್ ನಿಂದ 5 ಲಕ್ಷ ರೂ....

ಅನಂತ್ ಗೆ ಆಳ್ವಾಸ್ ನಿಂದ 5 ಲಕ್ಷ ರೂ. ಪ್ರೋತ್ಸಾಹ ಧನ

ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ನಂ.1

ವಾರ್ತಾಭಾರತಿವಾರ್ತಾಭಾರತಿ28 May 2016 10:26 PM IST
share
ಅನಂತ್ ಗೆ ಆಳ್ವಾಸ್ ನಿಂದ 5 ಲಕ್ಷ ರೂ. ಪ್ರೋತ್ಸಾಹ ಧನ

ಮೂಡುಬಿದಿರೆ: ಈ ಸಾಲಿನ ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ  ಮೊದಲ ರ್ಯಾಂಕ್ ಪಡೆಯುವುದರೊಂದಿಗೆ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ. 

ಉತ್ತರ ಕನ್ನಡ ಮೂಲದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿರುವ ಅನಂತ್ ಭೌತಶಾಸ್ತ್ರದಲ್ಲಿ 55, ಕೆಮಿಸ್ಟ್ರಿಯಲ್ಲಿ 59, ಗಣಿತದಲ್ಲಿ 55, ಬಯಾಲಜಿ 60,  ಅಂಕಗಳನ್ನು ಪಡೆದಿದ್ದು ಪಿಸಿಎಂನಲ್ಲಿ 169 ಹಾಗೂ ಪಿಸಿಬಿಯಲ್ಲಿ 174 ಅಂಕಗಳಿಸಿದ್ದಾರೆ. ಈ ರೀತಿ ಪಿಸಿಬಿಯಲ್ಲಿ ವಿದ್ಯಾರ್ಥಿಯೋರ್ವ 180ರಲ್ಲಿ 174 ಅಂಕಗಳನ್ನು ಪಡೆದಿರುವುದೂ ಅಪರೂಪದ ಸಾಧನೆ. ಈ ದಾಖಲೆಯೂ ಅನಂತ್ ಪಾಲಾಗಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 98 ಅಂಕಗಳು, ಪಿಯುಸಿಯಲ್ಲಿ ಶೇ 97.7 ಅಂಕಗಳನ್ನು ಪಡೆದಿದ್ದ ಅನಂತ್ ಶೈಕ್ಷಣಿಕ ಪ್ರತಿಭಾವಂತರಾಗಿ ಉಚಿತ ದತ್ತು ಶಿಕ್ಷಣ ಯೋಜನೆಯಡಿ ಆಳ್ವಾಸ್‍ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಸಿಇಟಿಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಯನ್ನು ನೀಡುವ ಮೂಲಕ ಈ ಬಾರಿ ಆಳ್ವಾಸ್ ಗಮನಾರ್ಹ ಸಾಧನೆ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂತಸವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಈವರೆಗೆ ಸುಮಾರು 353 ಮಂದಿ ಮೆಡಿಕಲ್‍ಗೆ ಹೋಗಿದ್ದು 8 ನೇ ರ್ಯಾಂಕ್ ನಮ್ಮಲ್ಲಿ ಬಂದಿತ್ತು. ಈಗ ಅನಂತ್ ಮೊದಲ ರ್ಯಾಂಕ್ ಸಾಧನೆ ಮಾಡಿದ್ದಾರೆ. 180ರಲ್ಲಿ 174 ಅಂಕಗಳಿಸಿರುವುದೂ ಅಪರೂಪದ ದಾಖಲೆಯೊಂದಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಕೀರ್ತಿ  ಗಳಿಸಿದ್ದಾನೆ. 

ಸಿಇಟಿ ಸಾಧಕರು: 

ಸಿಇಟಿ ಸಾಧಕರ ಟಾಪ್ ಟೆನ್ ಪಟ್ಟಿಯಲ್ಲಿ ಆಳ್ವಾಸ್‍ನ ಅನಂತ್ ಹಾಗೂ ಅಭಿಲಾಶ್ ಅವಳಿ ಸಾಧಕರಾಗಿದ್ದಾರೆ. ಅನಂತ್ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ  ಪ್ರಥಮ, ಬಿಫಾರ್ಮಾ, ಡಿ ಫಾರ್ಮಾದಲ್ಲಿ 6ನೇ ರ್ಯಾಂಕ್, ಐಎಸ್‍ಎಂಎಚ್. ನಲ್ಲಿ 03ನೇ ರ್ಯಾಂಕ್ ಹೀಗೆ 5 ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದು ಮತ್ತೋರ್ವ ವಿದ್ಯಾರ್ಥಿ ಅಭಿಲಾಷ್ ಬಿಎಸ್ಸಿ ಕೃಷಿಯಲ್ಲಿ 4ನೇ ರ್ಯಾಂಕ್ ಪಡೆದಿದ್ದಾರೆ. 

ಆಳ್ವಾಸ್ ವಿದ್ಯಾರ್ಥಿಗಳ ಪೈಕಿ ಸಿ.ಇ.ಟಿಯಲ್ಲಿನ ಮೊದಲ ನೂರು ರ್ಯಾಂಕ್‍ಗಳೊಳಗೆ 56 ವಿದ್ಯಾರ್ಥಿಗಳು, 200 ರ್ಯಾಂಕಿನೊಳಗೆ 109, 300 ರ್ಯಾಂಕಿನೊಳಗೆ 160, 400 ರ್ಯಾಂಕಿನೊಳಗೆ 223, 500 ರ್ಯಾಂಕಿನೊಳಗೆ 271, 1000 ರ್ಯಾಂಕಿನೊಳಗೆ 532, 2000 ರ್ಯಾಂಕಿನೊಳಗೆ 1038, 3000 ರ್ಯಾಂಕಿನೊಳಗೆ 1479, 5000 ರ್ಯಾಂಕಿನೊಳಗೆ 2189, 1000 ರ್ಯಾಂಕಿನೊಳಗೆ 3873 ಮಂದಿ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದರೆ. 

ಮೊದಲ ರ್ಯಾಂಕ್ ಅನಂತ್‍ನಿಗೆ ' ಐದು ಲಕ್ಷ' ಪ್ರೋತ್ಸಾಹ ಧನ

ಸಿಇಟಿಯಲ್ಲಿ ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ರ್ಯಾಂಕ್ ಪಡೆದಿರುವ ಸಾಧಕ ಆಳ್ವಾಸ್ ವಿದ್ಯಾರ್ಥಿ ಅನಂತ್ ಜಿ.ಯವರಿಗೆ ಈ ಅಪರೂಪದ ಸಾಧನೆಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 5 ಲಕ್ಷ ರು. ನಗದು ಪ್ರೋತ್ಸಾಹ ಧನ ನೀಡುವುದಾಗಿ ಡಾ.ಎಂ. ಮೋಹನ್ ಆಳ್ವ ತಿಳಿಸಿದರು. ಇತ್ತಿಚಿಗೆ ಪಿ.ಯು.ಸಿ ಫಲಿತಾಂಶದಲ್ಲಿ ಕಾಮರ್ಸ್‍ನಲ್ಲಿ ರಾಜ್ಯದಲ್ಲಿ 2 ನೇ ರ್ಯಾಂಕ್ ಪಡೆದಿದ್ದ ದಕ್ಷಾ ಜೈನ್ ಮತ್ತು ಆಶಿಕ್ ನಾರಾಯಣ್ ಅವರಿಗೆ ತಲಾ 1 ಲಕ್ಷ ರು. ನಗದು ಬಹುಮಾನ ನೀಡಿ, ಹಾಗೂ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಡಾ.ಆಳ್ವ ತಿಳಿಸಿದ್ದಾರೆ. 

ಮೆಡಿಕಲ್‍ನಲ್ಲಿ  7 ವಿದ್ಯಾರ್ಥಿಗಳು 100 ರ್ಯಾಂಕಿನೊಳಗಿನ ಸಾಧನೆ ಮಾಡಿದ್ದಾರೆ. ಅನಂತ್ ಜಿ (1) ಅಭಿಲಾಷ್ (37) ವಿನಯಕುಮಾರ್ ತುರುಮುರಿ (50) ಸೃಷ್ಟಿ (58) ಮಧು ಬಿ,ಕೆ. (66) ನಿಹಾಲ್ ಹೆಚ್.ಜಿ (77) ಮತ್ತು ಪವನ್ ಕುಮಾರ್ (90) ಈ ಸಾಧಕರಾಗಿದ್ದಾರೆ. ಇದೇ ವೇಳೆ ಮೆಡಿಕಲ್‍ನಲ್ಲಿಯೂ 7 ಮಂದಿ ವಿದ್ಯಾರ್ಥಿಗಳು ಪವನ್ (15) ಅಭಿಲಾಷ್ (16) ಅನಂತ್ (18) ಸಿದ್ಧೇಶ್ ( 32) ಚೆನ್ನವೀರೇಶ (46) ವಿನಯ ಕುಮಾರ್ ತುರುಮುರಿ (72) ಭರತ್ (80) ಈ ಸಾಧಕರಾಗಿದ್ದಾರೆ. 

ಸಿಇಟಿ ಸಾಧಕರು..

► ಅನಂತ್ ಜಿ. ಮೆಡಿಕಲ್,  ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ರ್ಯಾಂಕ್

►ಪಿಸಿಬಿಯಲ್ಲಿ 180ರಲ್ಲಿ 174 ಅಂಕಗಳನ್ನು ಪಡೆದಿರುವುದೂ ಅನಂತ್‍ಗೆ  ಅಪರೂಪದ ಸಾಧನೆ. 

► ಬಯೋಲಜಿಯಲ್ಲಿ ಅನಂತ್, ಗಣಿತದಲ್ಲಿ ಪವನ್ ಕುಮಾರ್ಮ ಸಿದ್ಧೇಶ್,ಸಚಿನ್ 60ರಲ್ಲಿ 60 ಅಂಕ

► ಮೊದಲ ನೂರು ರ್ಯಾಂಕ್‍ಗಳೊಳಗೆ 56 ವಿದ್ಯಾರ್ಥಿಗಳು,

► ಮೆಡಿಕಲ್, ಎಂಜಿನಿಯರಿಂಗ್‍ನಲ್ಲಿ 100 ರ್ಯಾಂಕೊಳಗೆ ತಲಾ 7 ವಿದ್ಯಾರ್ಥಿಗಳು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X