ಸಿಇಟಿ ಫಲಿತಾಂಶ ಪ್ರಕಟ: ಬೆಂಗಳೂರು, ದಕ್ಷಿಣ ಕನ್ನಡಕ್ಕೆ ಮೊದಲ ರ‍್ಯಾಂಕ್

ಬೆಂಗಳೂರು, ಮೇ 28: ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶವು ಪ್ರಕಟ ಗೊಂಡಿದ್ದು, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ದಕ್ಷಿಣ ಕನ್ನಡ ಮತ್ತು ಬೆಂಗಳೂರಿನ ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಗಳನ್ನು ಪಡೆದಿದ್ದಾರೆ.
ದಂತ ವೈದ್ಯಕೀಯ, ಕೃಷಿ, ಪಶುಸಂಗೋಪನೆ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಜಿ.ಅನಂತ್, ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜಿನ ಮಿಲಿಂದ್ ಕುಮಾರ್ ವಾದಿರಾಜ್ ಮೊದಲ ರ‍್ಯಾಂಕ್ ಪಡೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಸಿಇಟಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿಇಟಿ ರ್ಯಾಂಕ್‌ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಿಇಟಿ ಪರೀಕ್ಷೆಗೆ 1,71,868 ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ ಹುಡುಗರು 88,342, ಹುಡುಗಿಯರು 83,526. ಇವರಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ 41,530, ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿಗೆ 99,791, ಎಂಜಿನಿಯರಿಂಗ್‌ಗೆ 1,27,576, ಆರ್ಕಿಟೆಕ್ಚರ್‌ಗೆ 1,395, ಕೃಷಿಗೆ 96,341, ಪಶುಸಂಗೋಪನೆಗೆ 99,788, ಬಿ.ಫಾರ್ಮಗೆ 1,31,324 ಅಭ್ಯರ್ಥಿಗಳಿಗೆ ರ್ಯಾಂಕ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಜೂ.3ರಿಂದ ದಾಖಲಾತಿ ಪರಿಶೀಲನೆ: ಸಿಇಟಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ರ್ಯಾಂಕ್ ಪಡೆದ ಅಭ್ಯರ್ಥಿಗಳ ದಾಖಲಾತಿಯನ್ನು ಪರಿಶೀಲಿಸಲಾಗುವುದು. ರ್ಯಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆಯ ನಂತರ ಅರ್ಹತೆಯನ್ನು ಪರಿಗಣಿಸಲಾಗುವುದು ಎಂದು ಸಚಿವ ಜಯಚಂದ್ರ ತಿಳಿಸಿದ್ದಾರೆ.
ದಾಖಲಾತಿ ಪರಿಶೀಲನೆಗೆ 15 ಕೇಂದ್ರಗಳು: ಸಿಇಟಿಯಲ್ಲಿ ರ್ಯಾಂಕ್ ಪಡೆದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು ದಾವಣಗೆರೆ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಕಾರವಾರ, ಮಂಗಳೂರು, ಶಿವಮೊಗ್ಗ, ಹಾಸನ, ಮೈಸೂರು, ತುಮಕೂರು, ಬೀದರ್ ಹಾಗೂ ಬೆಂಗಳೂರಿನಲ್ಲಿ ನಡೆಯುವುದು.
ವೈದ್ಯಕೀಯ, ದಂತ ವೈದ್ಯಕೀಯ
-ಜಿ.ಅನಂತ್-ಮೊದಲ ರ್ಯಾಂಕ್(ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ)
-ಸಂಜಯ್ ಎಂ.ಗೌಡರ್-ಎರಡನೆ ರ್ಯಾಂಕ್(ಶೇಷಾದ್ರಿಪುರಂ ಕಾಲೇಜು, ಬೆಂಗಳೂರು)
-ವಚನಾ ಶ್ರೀ ಪಾಟೀಲ್-ಮೂರನೆ ರ್ಯಾಂಕ್(ಶಾಹೀನ್ ಐಎನ್‌ಡಿಪಿ ಪಿಯು ಕಾಲೇಜು, ಬೀದರ್)
ಹೋಮಿಯೋಪತಿ
-ಸಂಜಯ್ ಎಂ.ಗೌಡರ್- ಮೊದಲ ರ್ಯಾಂಕ್(ಶೇಷಾದ್ರಿಪುರಂ ಕಾಲೇಜು, ಬೆಂಗಳೂರು)
-ವಚನಾ ಶ್ರೀ ಪಾಟೀಲ್ -ಎರಡನೆ ರ್ಯಾಂಕ್(ಶಾಹೀನ್ ಐಎನ್‌ಡಿಪಿ ಪಿಯು ಕಾಲೇಜು, ಬೀದರ್)
-ಜಿ.ಅನಂತ್-ಮೂರನೆ ರ್ಯಾಂಕ್(ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ)
ಎಂಜಿನಿಯರಿಂಗ್
-ಮಿಲಿಂದ ಕುಮಾರ್ ವಾದಿರಾಜ್- ಮೊದಲ ರ್ಯಾಂಕ್(ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು)
-ನಿರಂಜನ್ ಕಾಮತ್- ಎರಡನೆ ರ್ಯಾಂಕ್(ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು)
-ದಿವ್ಯಾ ಎ.ಜಮಖಂಡಿ- ಮೂರನೆ ರ್ಯಾಂಕ್(ಕೆಎಲ್‌ಇಎಸ್ ಪಿಯು ಕಾಲೇಜು, ಬೆಂಗಳೂರು)
ಆರ್ಕಿಟೆಕ್ಚರ್
-ಸಿ.ಆರ್.ಮೃದುಲಾ-ಮೊದಲ ರ್ಯಾಂಕ್(ಸಿಎಂಆರ್ ನ್ಯಾಷನಲ್ ಪಬ್ಲಿಕ್ ಕಾಲೇಜು, ಬೆಂಗಳೂರು)
-ಐಶ್ವರ್ಯ ಮಹದೇವನ್-ಎರಡನೆ ರ್ಯಾಂಕ್(ದ ಅಮೃತಾ ಅಕಾಡಮಿ, ಬೆಂಗಳೂರು)
-ನೇಹಾ ಸರಹ ಅಬ್ರಹಾಂ-ಮೂರನೆ ರ್ಯಾಂಕ್(ಸೋಫಿಯಾ ಹೈಸ್ಕೂಲ್, ಬೆಂಗಳೂರು)
ಕೃಷಿ
-ಜಿ.ಅನಂತ್-ಮೊದಲ ರ್ಯಾಂಕ್(ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ)
-ಎಚ್.ಎಲ್.ಪ್ರವೀಣ್ ರಾಜ್-ಎರಡನೆ ರ್ಯಾಂಕ್(ಮಾಸ್ಟರ್ಸ್ ಪಿಯು ಕಾಲೇಜು, ಹಾಸನ)
-ಸಂಪತ್ ಕೋಟಿ-ಮೂರನೆ ರ್ಯಾಂಕ್(ವಿದ್ಯಾಮಂದಿರ್ ಪಿಯು ಕಾಲೇಜು, ಬೆಂಗಳೂರು)
ಪಶುಸಂಗೋಪನೆ
-ಜಿ.ಆನಂತ್-ಮೊದಲ ರ್ಯಾಂಕ್(ಆಳ್ವಾಸ್ ಪಿಯು ಕಾಲೇಜು, ಮೂಡಬಿದರೆ)
-ಸಂಜಯ್ ಎಂ.ಗೌಡರ್-ಎರಡನೆ ರ್ಯಾಂಕ್(ಶೇಷಾದ್ರಿಪುರಂ ಪಿಯು ಕಾಲೇಜು, ಬೆಂಗಳೂರು)
ವಚನಾ ಶ್ರೀ ಪಾಟೀಲ್-ಮೂರನೆ ರ್ಯಾಂಕ್(ಶಾಹೀನ್ ಐಎನ್‌ಡಿಪಿ ಪಿಯು ಕಾಲೇಜು, ಬೀದರ್)
ಬಿ.ಫಾರ್ಮ
-ಮಿಲಿಂದ್ ಕುಮಾರ್ ವಾದಿರಾಜ್-ಮೊದಲ ರ್ಯಾಂಕ್(ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು)
-ನಿರಂಜನ್ ಕಾಮತ್-ಎರಡನೆ ರ್ಯಾಂಕ್(ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು)
-ಆರ್.ರಾಹುಲ್-ಮೂರನೆ ರ್ಯಾಂಕ್(ಆರ್‌ವಿ ಪಿಯು ಕಾಲೇಜು, ಬೆಂಗಳೂರು)
ಮೊದಲ 5 ರ‍್ಯಾಂಕ್ ಗಳಿಗೆ ಉಚಿತ ಸೀಟು
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸ್‌ಗಳಲ್ಲಿ ಮೊದಲ ಐದು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಸೀಟು ಕೊಡ ಲಾಗುವುದು. ಈ ವಿದ್ಯಾರ್ಥಿಗಳು ಕೋರ್ಸ್ ಮುಗಿಯುವರೆಗೂ ಯಾವುದೇ ಶುಲ್ಕವನ್ನು ಕಟ್ಟಬೇಕಾಗಿರುವುದಿಲ್ಲ. ಪ್ರತಿಯೊಂದು ಖರ್ಚು ವೆಚ್ಚವನ್ನು ಸರಕಾರವೇ ಭರಿಸಲಿದೆ.







