Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೃಷಿ ರಫ್ತಿನಲ್ಲಿ ಕುಸಿತ

ಕೃಷಿ ರಫ್ತಿನಲ್ಲಿ ಕುಸಿತ

ರೈತರ ಬಗೆಗಿನ ಸರಕಾರದ ದೃಷ್ಟಿಕೋನ ಅಪಾಯಕಾರಿ

ಸುಧಾಕರ್ ಗುಮ್ಮುಲಸುಧಾಕರ್ ಗುಮ್ಮುಲ29 May 2016 12:12 AM IST
share
ಕೃಷಿ ರಫ್ತಿನಲ್ಲಿ ಕುಸಿತ

ಕೇಂದ್ರ ಸರಕಾರದ ಇತ್ತೀಚಿನ ಬಜೆಟ್‌ನಲ್ಲಿ ರೈತರ ಆದಾಯವನ್ನು 2022ರ ವೇಳೆಗೆ ದುಪ್ಪಟ್ಟುಗೊಳಿಸುವ ಗುರಿ ಹೊಂದಿರುವುದಾಗಿ ಸರಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ರಫ್ತ್ತು ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸುವುದರಿಂದ ನೇರವಾಗಿ ರೈತರ ಆದಾಯವನ್ನು ಹೆಚ್ಚುಗೊಳಿಸುವ ಕಾರಣ ಕೃಷಿ ರಫ್ತು ಪ್ರಮುಖ ಪಾತ್ರ ನಿಭಾಯಿಸುತ್ತದೆ. ಮತ್ತದರ ಮೇಲೆ ಗಮನಹರಿಸುವ ಅಗತ್ಯವಿದೆ. ಭಾರತೀಯ ಕೃಷಿ ಉತ್ಪನ್ನಗಳ ರಫ್ತುವಿನ ವಿನ್ಯಾಸದತ್ತ ನೋಟ ಬೀರಿದಾಗ 2013-14ರಲ್ಲಿ 33 ಬಿಲಿಯನ್ ಎತ್ತರಕ್ಕೆ ಏರಿದ್ದ ಕೃಷಿ ರಫ್ತು ಮಾರ್ಚ್ 2016ರ ಆರ್ಥಿಕ ವರ್ಷಕ್ಕೆ ಐದು ವರ್ಷಗಳಲ್ಲೇ ಅತ್ಯಂತ ಕಡಿಮೆಯಾದ 24ಕ್ಕೆ ಕುಸಿದಿತ್ತು. ರಫ್ತು ಎಂಬುದು ಬಾಹ್ಯ ಬೇಡಿಕೆಯ ಮೇಲೆ ಅವಲಂಬಿತವಾಗಿದ್ದರೂ, ಒಂದು ಕ್ಷೇತ್ರದ ನಿರ್ವಹಣೆಯ ಮೇಲೆ ಬಾಹ್ಯ ಮತ್ತು ದೇಶೀಯ ಅಂಶಗಳು ಪರಿಣಾಮ ಬೀರುತ್ತವೆ.

ಕೊನೆಗೊಂಡ ಗೋಧಿ ರಪ್ತು

ಗೋಧಿಯೂ ಸೇರಿದಂತೆ ಜಾಗತಿಕವಾಗಿ ಕೃಷಿ ಉತ್ಪನ್ನಗಳ ದರಗಳಲ್ಲಿ ಕುಸಿತ ಭಾರತದ ಗೋಧಿ ರಫ್ತಿನ ಮೇಲೆ ನೇರ ಪರಿಣಾಮ ಬೀರಿತು. 2013ರ ಎಪ್ರಿಲ್-ಮಾರ್ಚ್‌ನಲ್ಲಿ 1.93 ಬಿಲಿಯನ್ ತಲುಪಿದ್ದ ಗೋಧಿ ರಪ್ತ್ತು 2016ರ ಎಪ್ರಿಲ್-ಮಾರ್ಚ್ ವೇಳೆಗೆ 151ಕ್ಕೆ ಕುಸಿದಿತ್ತು. ಅತಿಯಾದ ದೇಶೀಯ ದರದ ಜೊತೆಗೆ ಅತಿಯಾದ ಕನಿಷ್ಠ ಬೆಂಬಲ ಬೆಲೆ ಮತ್ತು ಸ್ಥಳೀಯ ಬೆಳೆಯಲ್ಲಿ ಉಂಟಾದ ಇಳಿಕೆ ಜಾಗತಿಕ ಗೋಧಿ ವ್ಯಾಪಾರದಲ್ಲಿ ಭಾರತದ ಸವಾಲನ್ನು ಬಹುಬೇಗನೆ ಕೊನೆಗೊಳಿಸಿತು. ಸಾರ್ವಜನಿಕ ಹಂಚಿಕೆಗಾಗಿ ಸ್ಥಳೀಯವಾಗಿ ಅಗತ್ಯವನ್ನು ಪೂರೈಸುವ ಸಲುವಾಗಿ ಸರಕಾರವು ರಫ್ತಿಗೆ ಸಹಾಯಧನ ಒದಗಿಸದೇ ಇರುವುದು ಭಾರತವನ್ನು ಜಾಗತಿಕ ಮಾರುಕಟ್ಟೆಯಿಂದ ಹಲವು ವರ್ಷಗಳ ಕಾಲ ದೂರವಿಡಬಹುದು ಅಥವಾ ಕನಿಷ್ಠಪಕ್ಷ ಮತ್ತೊಮ್ಮೆ ಅಂತಾರಾಷ್ಟ್ರೀಯ ಬೆಲೆಯಲ್ಲಿ ಏರಿಕೆಯಾಗುವವರೆಗೆ.

ಜೋಳ ಆಮದು: ಭಾರತದ ಜೋಳ ರಪ್ತು ಉತ್ಪಾದನೆ ಕಡಿಮೆಯಾದ ಕಾರಣ ಅತಿಯಾದ ದೇಶೀಯ ದರ ಮತ್ತು ಕಡಿಮೆಯಾಗಿರುವ ಅಂತಾರಾಷ್ಟ್ರೀಯ ದರದ ಪರಿಣಾಮವಾಗಿ ಹತ್ತು ವರ್ಷಗಳಲ್ಲೇ ಕನಿಷ್ಠ ಮಟ್ಟವನ್ನು ತಲುಪಿದೆ. ಆರ್ಥಿಕ ವರ್ಷದ ಕೊನೆಯಲ್ಲಿ ಜೋಳವನ್ನು ಆಮದು ಮಾಡಿಕೊಳ್ಳುವ ಮೂಲಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಗೋಧಿ ಮತ್ತು ಅಕ್ಕಿಯಂತಲ್ಲದೆ, ಜೋಳಕ್ಕೆ ಸಾರ್ವಜನಿಕ ಹಂಚಿಕೆಗೆ ಸರಕಾರದ ಬೆಂಬಲವಿಲ್ಲದಿರುವುದರಿಂದ ಜೋಳಕ್ಕೆ ಬೇಡಿಕೆ ಬರಲು ರಫ್ತನ್ನು ಅವಲಂಬಿಸಬೇಕಾಗುತ್ತದೆ ಮತ್ತದು ದೇಶೀಯ ದರವು ಜಾಗತಿಕ ಮಾರುಕಟ್ಟೆಯೊಂದಿಗೆ ಸರಿದೂಗಿಸುವಂತೆ ಒತ್ತಡ ಹೇರುತ್ತದೆ. ಒಂದು ವರ್ಷದ ಕೆಳಗೆ 2014-15ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ದರದ ಇಳಿಕೆ ಮತ್ತು ಇದರಿಂದ ಬಾಹ್ಯ ಬೇಡಿಕೆಯಲ್ಲಿ ಇಳಿಕೆಯಾಗುವ ಬೆದರಿಕೆ ಸ್ಥಳೀಯವಾಗಿ ದರವನ್ನು ಸರಕಾರ ನಿಗದಿಪಡಿಸಿದ್ದ ಕನಿಷ್ಠ ಬೆಂಬಲ ಬೆಲೆಗಿಂತಲೂ ಕೆಳಗೆ ಇಳಿಸಿತ್ತು. ಆದರೆ, ಒಂದು ವರ್ಷದ ನಂತರ ಪರಿಸ್ಥಿತಿ ಬದಲಾಗಿ ದೇಶೀಯ ಉತ್ಪಾದನೆಯಲ್ಲಿ ಇಳಿಕೆ ಕಾಣುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗಿಂತ ಬೆಲೆಯನ್ನು ಮೇಲೆ ಕೊಂಡೊಯ್ಯಿತು. ಇದರಿಂದ ರಫ್ತು ಅಸಾಧ್ಯವಾಯಿತು. ದೇಶೀಯ ಬೆಳೆಯಲ್ಲಿ ಗಣನೀಯ ಏರಿಕೆಯಾಗದ ಹೊರತು ಭಾರತವು ಜೋಳವನ್ನು ರಫ್ತು ಮಾಡುವುದು ಸದ್ಯೋಭವಿಷ್ಯತ್ತಿನಲ್ಲಂತೂ ಕಷ್ಟ ಸಾಧ್ಯ.

ಅಕ್ಕಿ ರಫ್ತಿಗೆ ತಡೆಗಳು: ಜಾಗತಿಕ ಅಕ್ಕಿ ರಫ್ತು ವ್ಯಾಪಾರದಲ್ಲಿ ಭಾರತ ಪ್ರಮುಖ ಪಾತ್ರಧಾರ. ಭಾರತದ ಬೃಹತ್ ಉತ್ಪಾದನೆಯ ಪ್ರಮಾಣ ಮತ್ತು ದರದ ಲಾಭದ ಪರಿಣಾಮವಾಗಿ ಅಕ್ಟೋಬರ್ 2007ರಿಂದ ಸೆಪ್ಟಂಬರ್ 2011ರವರೆಗೆ ಅಕ್ಕಿ ರಫ್ತಿಗೆ ಸಂಪೂರ್ಣ ನಿಷೇಧ ಹೇರಿದ್ದರೂ, ತನ್ನ ಸ್ಥಾನವನ್ನು ಭಾರತ ಇತ್ತೀಚಿನ ವರ್ಷಗಳಲ್ಲಿ ಕಾಯ್ದುಕೊಂಡು ಬಂದಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ ಅಕ್ಕಿಯ ರಫ್ತು ಪ್ರಮಾಣ ಕೂಡಾ ಇಳಿಕೆ ಕಂಡಿದೆ. ಇದಕ್ಕೆ ಕಾರಣ ಎರಡು ಪ್ರಮುಖ ಆಮದುದಾರರಾದ ಬಾಂಗ್ಲಾದೇಶ ಮತ್ತು ನೈಜೀರಿಯಾ ವ್ಯಾಪಾರಕ್ಕೆ ನಿರ್ಬಂಧ ಹೇರಿರುವುದು. ಬಾಂಗ್ಲಾದೇಶ ಶೇಕಡಾ 20 ಆಮದು ಸುಂಕ ಹೇರಿದೆ ಮೊದಲು ಈ ಸುಂಕ ಇರಲಿಲ್ಲ. ಇವತ್ತಿನ ಅತ್ಯಂತ ದೊಡ್ಡ ಅಕ್ಕಿ ಆಮದುದಾರನಾಗಿರುವ ಮತ್ತು ಭಾರತದ ಬಾಸ್ಮತಿಯಲ್ಲದ ಅಕ್ಕಿಯ ಪ್ರಮುಖ ಆಮದುದಾರನಾಗಿರುವ ನೈಜೀರಿಯಾ 2017ರ ವೇಳೆಗೆ ಸ್ವಯಂಪೂರ್ಣತೆ ಹೊಂದುವ ಅದರ ದೀರ್ಘ ಕಾಲದ ನೀತಿಯ ಪರಿಣಾಮವಾಗಿ ಅಕ್ಕಿ ಅಮದಿನ ಮೇಲೆ ನಿರ್ಬಂಧವನ್ನು ಹೇರಿದೆ. ಮೇ 2014ರಿಂದ ಆರಂಭವಾಗಿ ದೇಶವು ನೂತನ ಅಕ್ಕಿ ಆಮದು ನೀತಿಯನ್ನು ಪರಿಚಯಿಸಿತು, ಆ ಪ್ರಕಾರ ಬೃಹತ್ ಆಮದುದಾರರಿಗೆ (ಶೇಕಡಾ 70 ಸುಂಕ ಪಾವತಿಸುವವರಿಗೆ) ಮತ್ತು ಸ್ಥಳೀಯ ಅಕ್ಕಿ ಮಿಲ್ಲು ಕೈಗಾರಿಕೆಗಳಲ್ಲಿ ಬದಲಿಸಬಹುದಾದ ದೇಶೀಯ ಹೂಡಿಕೆಯನ್ನು ಹೊಂದಿರುವ ಆಮದುದಾರರಿಗೆ (ಶೇ. 30 ಸುಂಕ ಪಾವತಿಸುವವರು) ವಿಭಿನ್ನ ದರಪಟ್ಟಿಯನ್ನು ರಚಿಸಿತು. ಮೊದಲಿಗೆ ಇದ್ದಂಥಾ ಶೇ. 110 ಸುಂಕಕ್ಕೆ ಹೋಲಿಸಿದರೆ ಇದು ಗಣನೀಯವಾಗಿ ಕಡಿಮೆಯಾಗಿದ್ದರೂ ವಿಭಿನ್ನ ಸುಂಕ ಮತ್ತು ಭೂಗಡಿಯ ಮೂಲಕ ಅಕ್ಕಿ ಆಮದಿಗೆ ನಿಷೇಧ ಹೇರಿರುವುದು ಭಾರತದ ರಫ್ತಿನ ಮೇಲೆ ಪರಿಣಾಮ ಬೀರಿದೆ. (ಭಾರತದ ಅಕ್ಕಿಯನ್ನು ಬೆನಿನ್ ಮೂಲಕ ಭೂಗಡಿಯ ಮುಖಾಂತರ ಸುಂಕ ಪಾವತಿಸುವುದನ್ನು ತಪ್ಪಿಸಿ ನೈಜೀರಿಯಾ ಸಾಗಿಸಲಾಗುತ್ತದೆ). 2015ರ ಜೂನ್‌ನಲ್ಲಿ ನೈಜೀರಿಯಾದ ಸೆಂಟ್ರಲ್ ಬ್ಯಾಂಕ್ ಅಕ್ಕಿ ಮತ್ತು ಇತರ 40 ಉತ್ಪನ್ನಗಳ ಆಮದುದಾರರು ಡಾಲರ್ ಖರೀದಿಗಾಗಿ ಫಾರೆಕ್ಸ್ ಮಾರುಕಟ್ಟೆ ಪ್ರವೇಶಿಸುವುದರ ಮೇಲೆ ನಿಷೇಧ ಹೇರಿದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಇದರಿಂದಾಗಿ ಎಪ್ರಿಲ್ 2015-ಪೆಬ್ರವರಿ 2016ರ ಅವಧಿಯಲ್ಲಿ ನೈಜೀರಿಯಾಕ್ಕೆ ಭಾರತದ ಬಾಸ್ಮತಿಯಲ್ಲದ ಅಕ್ಕಿಯ ರಫ್ತು ಶೇಕಡಾ 85ರಷ್ಟು ಕುಸಿಯಿತು. ಅನಧಿಕೃತ ಫಾರೆಕ್ಸ್ ಮಾರುಕಟ್ಟೆಯಲ್ಲಿ ನೈಜೀರಿಯನ್ ಕರೆನ್ಸಿಯ ಕೊರತೆ ಕೂಡಾ ಹಣ ಪಾವತಿಯ ಮೇಲೆ ಪರಿಣಾಮ ಬೀರಿದ್ದರಿಂದ ಬೆನಿನ್‌ಗೆ ಕೂಡಾ ರಫ್ತು ಸಾಧ್ಯವಾಗಲಿಲ್ಲ. ನೈಜೀರಿಯಾವನ್ನು ಅಕ್ಕಿ ರಫ್ತು ಗುರಿಯಾಗಿ ಖಾಯಂ ಆಗಿ ಕಳೆದುಕೊಳ್ಳುವ ಭೀತಿಯನ್ನು ಹೊಂದಿದ್ದರೂ ಭಾರತ ಸರಕಾರ ಈ ಸಮಸ್ಯೆಯನ್ನು ಬಗೆಹರಿಸಲು ಅಂತಾರಾಷ್ಟ್ರೀಯ ಅಥವಾ ದ್ವಿಪಕ್ಷೀಯ ಮಟ್ಟದಲ್ಲಿ ಯಾವುದೇ ಪ್ರಯತ್ನಗಳನ್ನು ನಡೆಸಿಲ್ಲ. ನೈಜೀರಿಯಾವು ಭಾರತಕ್ಕೆ ತೈಲ ಮತ್ತು ಅನಿಲ ಉತ್ಪಾದನೆಗಳನ್ನು ಪೂರೈಸುವ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿದ್ದು ಎಪ್ರಿಲ್ 2015-ಫೆಬ್ರವರಿ 2016ರ ಅವಧಿಯಲ್ಲಿ ಅದು ಈ ಸ್ಥಾನಮಾನವನ್ನು ಕಾಯ್ದುಕೊಂಡು ಬಂದಿದೆ. ಈ ಅವಧಿಯಲ್ಲಿ ಕಡಿಮೆ ದರದಿಂದಾಗಿ ತೈಲದ ವೌಲ್ಯದಲ್ಲಿ ಇಳಕೆಯಾಗಿದ್ದರೂ ತೈಲ ಮತ್ತು ಅನಿಲ ಉತ್ಪಾದನೆಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನೈಜೀರಿಯಾವು ಭಾರತದ ಹಣವನ್ನು ಸುಲಭವಾಗಿ ಪಡೆಯುತ್ತಿದ್ದತ್ತು. ಭಾರತದ ಅಕ್ಕಿ ರಫ್ತುದಾರರು ನಿರ್ಬಂಧಗಳನ್ನು ಎದುರಿಸಬೇಕಿದೆ-ಈ ಪರಿಸ್ಥಿತಿಯಲ್ಲಿ ಭಾರತ ಸರಕಾರ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕಿತ್ತು.

ತೈಲಾಹಾರ ರಫ್ತಿನಲ್ಲಿ ಇಳಿಕೆ: ಭಾರತದ ತೈಲಾಹಾರ ರಫ್ತು ಮುಖ್ಯವಾಗಿ ಸೋಯಾಬೀನ್ ಆಹಾರವನ್ನು ಒಳಗೊಂಡಿದೆ. ಇದನ್ನು ಪ್ರಮುಖವಾಗಿ ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಬರ ಪರಿಸ್ಥಿತಿಯಿಂದಾಗಿ ಕೆಲವು ವರ್ಷಗಳಿಂದ ದೇಶೀಯ ಸೋಯಾಬೀನ್ ಉತ್ಪಾದನೆಯಲ್ಲಿ ಇಳಿಕೆಯಾಗಿದ್ದು ಇದರಿಂದಾಗಿ ಸೋಯಾಮೀಲ್ ಪೂರೈಕೆಯಲ್ಲೂ ಇಳಿಕೆಯಾಗಿ ಸ್ಥಳೀಯವಾಗಿ ದರದಲ್ಲಿ ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಯಾಬೀನ್ ಬೆಲೆ ಇಳಿಕೆಯಾಗಿರುವುದು ಪಕ್ಕದ ರಾಷ್ಟ್ರವಾದ ಶ್ರೀಲಂಕಾದಲ್ಲೂ ಭಾರತದ ಸೋಯಾಮೀಲ್‌ನ್ನು ಅನರ್ಹವಾಗಿಸಿದೆ. ಇದರಿಂದಾಗಿ 2012-13ರಲ್ಲಿ 3.04 ಬಿಲಿಯನ್ ಡಾಲರ್‌ನಷ್ಟು ಏರಿಕೆ ಕಂಡಿದ್ದ ರಫ್ತು ಇತ್ತೀಚಿನ ಆರ್ಥಿಕ ವರ್ಷ ಕೊನೆಗೊಂಡಾಗ 14 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿರುವ 535 ಮಿಲಿಯನ್ ಡಾಲರ್‌ಗೆ ಕುಸಿದಿದೆ. ಸೋಯಾಮೀಲ್ ಹೆಚ್ಚಾಗಿ ವ್ಯವಹರಿಸಲ್ಪಡುವ ಉತ್ಪನ್ನವಾಗಿದ್ದು ಭಾರತವು ಸಣ್ಣ ರಫ್ತುದಾರನಾಗಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ದರಗಳ ಇಳಿಕೆ ಮತ್ತು ಭಾರತೀಯ ರಫ್ತುದಾರರ ಗೈರು ಸ್ಥಳೀಯವಾಗಿ ದರವನ್ನು ಕೆಳಗಿಳಿಸಿ ರಫ್ತನ್ನು ಸ್ಪರ್ಧಾತ್ಮಕಗೊಳಿಸಬೇಕಿತ್ತು. ಆದರೆ ಎರಡು ಅಂಶಗಳು ಹೀಗಾಗದಂತೆ ತಡೆದವು: ಸೋಯಾಬೀನ್ ಉತ್ಪಾದನೆಯಲ್ಲಿ ಇಳಿಕೆ ಮತ್ತು ಪಶು ಆಹಾರಕ್ಕೆ ಹೆಚ್ಚಿದ ಬೇಡಿಕೆ, ಸೋಯಾಬೀನ್ ಒಂದು ಪ್ರಮುಖ ಪಶು ಆಹಾರ ಕೂಡಾ. ಪಶುಹತ್ಯೆಯ ಮೇಲೆ ನಿರ್ಬಂಧ ಹೇರಿದ ಪರಿಣಾಮವಾಗಿ ಪಶುಗಳ ಸಂಖ್ಯೆಯಲ್ಲಿ ಏರಿಕೆಯ ಫಲಿತಾಂಶವಾಗಿ ಪಶು ಆಹಾರಕ್ಕೆ ಬೇಡಿಕೆ ಹೆಚ್ಚಿದೆ. ಇದರ ಪರಿಣಾಮವಾಗಿ ಸೋಯಾಬೀನ್ ದರ ದೇಶೀಯವಾಗಿ ಏರಿಕೆ ಕಂಡಿದೆ. ಹತ್ತಿಕಾಳು ತೈಲಬಿಲ್ಲೆ ಹಾಗೂ ಇತರ ತೈಲಾಹಾರಗಳ ಬೆಲೆ ಇನ್ನಷ್ಟು ಹೆಚ್ಚಾಗಿರುವುದನ್ನು ಗಮನಿಸಬಹುದು. .ಗೋರಿಕಾಯಿ ಬೇಡಿಕೆಯಲ್ಲಿ ಕುಸಿತಪ್ರಮುಖವಾಗಿ ಅಮೆರಿಕಾದಲ್ಲಿ ಜೇಡಿಪದರಗಲ್ಲುಗಳಿಂದ ತೈಲ ಮತ್ತು ಅನಿಲವನ್ನು ಹೊರತೆಗೆಯಲು ಹೈಡ್ರಾಲಿಕ್ಸ್ ಒತ್ತಡವನ್ನುಂಟು ಮಾಡಲು ಬಳಸುವ ವಸ್ತುಗಳಲ್ಲಿ ಗೋರಿಕಾಯಿ ಒಂದು. ಭಾರತದಿಂದ ರಫ್ತಾಗುತ್ತಿದ್ದ ಈ ಕಾಯಿಗೆ ಬೇಡಿಕೆ ತೀವ್ರವಾಗಿ ಕುಸಿದಿದೆ. ಯಾಕೆಂದರೆ ತೈಲ ಮತ್ತು ಅನಿಲ ದರಗಳಲ್ಲಿ ಉಂಟಾಗಿರುವ ತೀವ್ರ ಇಳಿಕೆ ಜೇಡಿಪದರಗಲ್ಲುಗಳಿಂದ ತೈಲವನ್ನು ಉತ್ಪಾದಿಸುವುದು ಅಸಾಧ್ಯವನ್ನಾಗಿಸಿದೆ. ಹಾಗಾಗಿ ಗೋರಿಕಾಯಿಗೆ ಬೇಡಿಕೆಯೂ ಕುಸಿದಿದೆ. ಕೆಲವು ಕಡಿಮೆ ಪ್ರಮಾಣದಲ್ಲಿ ತೈಲ ಉತ್ಪಾದಿಸುವ ರಿಗ್‌ಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದರೂ ಲಾಭ ಎಷ್ಟೊಂದು ಕಡಿಮೆಯಾಗಿದೆಯೆಂದರೆ ಗೋರಿಕಾಯಿ ರಫ್ತಿನಿಂದ ಆದಾಯವನ್ನು ನಿರೀಕ್ಷಿಸುವುದು ಅಸಾಧ್ಯವೇ ಸರಿ. .ಮಸಾಲೆಗಳ ರಫ್ತಿನಲ್ಲಿ ಹಿನ್ನಡೆರಿಮೆಣಸು, ಅರಶಿನ ಮತ್ತು ಮೆಣಸಿನ ರಫ್ತಿನಲ್ಲಿ ಏರಿಕೆಯಾಗಿದ್ದರೂ, ಜೀರಿಗೆ ಮತ್ತು ಪುದೀನಾ ರಫ್ತಿನಲ್ಲಿ ಕುಸಿತ ಕಂಡಿರುವುದರಿಂದ ಭಾರತದ ಮಸಾಲೆ ರಫ್ತು ಒಂದಷ್ಟು ಹಿನ್ನಡೆ ಕಂಡಿದೆ. ಜೀರಿಗೆಯ ದೇಶೀಯ ಬೆಳೆಯಲ್ಲಿ ಕುಸಿತ ಮತ್ತು ಮುಖ್ಯ ಆಮದುದಾರನಾದ ವಿಯೇಟ್ನಾಂನ ಕರೆನ್ಸಿ ಬಲ ಕಳೆದುಕೊಂಡಿದ್ದು ಜೀರಿಗೆ ರಫ್ತಿನ ಮೇಲೆ ಪರಿಣಾಮ ಬೀರಿದೆ. ಸಿರಿಯನ್ ಸಂಘರ್ಷದಿಂದಾಗಿ ಮಾರುಕಟ್ಟೆಯಲ್ಲಿ ಒಂದು ಪ್ರತಿಸ್ಪರ್ಧಿ ಕಡಿಮೆಯಾಗಿದ್ದರೂ ಈ ಇಳಿಕೆ ಕಂಡಿದೆ. ದುರ್ಬಲ ಜಾಗತಿಕ ಕರೆನ್ಸಿಗಳು ಮುಖ್ಯವಾಗಿ ಚೀನಾದ್ದು. ಭಾರತದ ಮೆಂಥಾಲ್ ಮತ್ತು ಪುದೀನಾ ತೈಲದಂಥಾ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರಿದೆ. ಅದರ ಜೊತೆಗೆ ಯೂರೋಪ್ ಒಕ್ಕೂಟ ಮತ್ತು ಅಮೆರಿಕ ಹಾಗೂ ಕೆನಡಾ ದೇಶಗಳಲ್ಲಿ ಮೆಂಥಾಲ್ ಸಿಗರೇಟ್ ಮೇಲೆ ಹೇರಲಾಗಿರುವ ಮತ್ತು ಸದ್ಯದಲ್ಲೇ ಹೇರಬಹುದಾದ ನಿಷೇಧದ ಭಯ ಕೂಡಾ ಮೆಂಥಾಲ್ ಕೈಗಾರಿಕೆಯ ಮೇಲೆ ದೊಡ್ಡ ಬೆದರಿಕೆಯಾಗಿದೆ. ೆಲ್ಲಾ ಉತ್ಪನ್ನಗಳ ರಫ್ತು ಕುಸಿತವನ್ನು ಕಂಡಿರುವಾಗ ಸರಕಾರದ ಧನಸಹಾಯದ ಪರಿಣಾಮವಾಗಿ ಸಕ್ಕರೆ ರಫ್ತು ಮಾತ್ರ ಏರಿಕೆ ಕಂಡಿದೆ. ಷ್ಟೊಂದು ಕಡಿಮೆ ಅವಧಿಯಲ್ಲಿ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದು ಕಷ್ಟವಾದರೂ ಅದು ಅಸಾಧ್ಯವೇನೂ ಅಲ್ಲ. ತಜ್ಞರು ಹೇಳುವಂತೆ ಈ ಗುರಿಯನ್ನು 2004-05 ಮತ್ತು 2009-10ರ ಅವಧಿಯಲ್ಲಿ ಸಾಧಿಸಲಾಗಿದೆ. ಈ ಅವಧಿಯಲ್ಲಿ ಜಾಗತಿಕ ದರಗಳಲ್ಲಿ ಏರಿಕೆಯಾದ ಪರಿಣಾಮ ಕೃಷಿ ಉತ್ಪನ್ನಗಳ ಬಾಹ್ಯ ಬೇಡಿಕೆ ಹೆಚ್ಚಾಗಿ ರಫ್ತು ಏರಿಕೆಯನ್ನು ಕಂಡಿತ್ತು. ಭಾರತೀಯ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಆಂತರಿಕ ಮತ್ತು ಬಾಹ್ಯ ಅಂಶಗಳು ಪರಿಣಾಮ ಬೀರುವುದರಿಂದ ಸರಕಾರವು ಎಲ್ಲಾ ಅಡ್ಡಿಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಉತ್ಪಾದನಾ ಮಟ್ಟದಲ್ಲಿ ನಿರೀಕ್ಷಿತ ಏರಿಕೆಯಿಂದಾಗಿ ಸಾಧಿಸುವ ಹೆಚ್ಚುವರಿ ಉತ್ಪಾದನೆಯನ್ನು ಬಾಹ್ಯ ಬೇಡಿಕೆಯ ಮೂಲಕ ವಿಲೇವಾರಿ ಆಡುವ ಅಗತ್ಯವಿದೆ ಇಲ್ಲವಾದರೆ ಸರಕಾರವು ಶೇಖರಣೆಯನ್ನೇ ಅವಲಂಬಿಸಬೇಕಾಗುತ್ತದೆ. ನಿಜವಾಗಿ ಇದು ಗೋಧಿ ಮತ್ತು ಅಕ್ಕಿಯ ವಿಷಯದಲ್ಲಿ ಈಗಾಗಲೇ ನಡೆಯುತ್ತಿದೆ.

ಕೃಪೆ: thewire.in

share
ಸುಧಾಕರ್ ಗುಮ್ಮುಲ
ಸುಧಾಕರ್ ಗುಮ್ಮುಲ
Next Story
X