Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕೆಟ್ಟು ನಿಂತ ಲಿಫ್ಟ್ ಏಕಾಂಗಿಯನ್ನು...

ಕೆಟ್ಟು ನಿಂತ ಲಿಫ್ಟ್ ಏಕಾಂಗಿಯನ್ನು ಮೇಲೆತ್ತೀತೇ?

ವಾರ್ತಾಭಾರತಿವಾರ್ತಾಭಾರತಿ29 May 2016 12:37 AM IST
share
ಕೆಟ್ಟು ನಿಂತ ಲಿಫ್ಟ್ ಏಕಾಂಗಿಯನ್ನು ಮೇಲೆತ್ತೀತೇ?

ರವಿಚಂದ್ರನ್ ‘ಪ್ರೇಮಲೋಕ’ದ ಮೂಲಕ ಅದ್ದೂರಿ ಪ್ರವೇಶ ಮಾಡಿದಾಗ, ನಿಜಕ್ಕೂ ಗಾಂಧಿನಗರದ ಪಾಲಿಗೆ ಅದು ದೊಡ್ಡ ತಿರುವೇ ಆಗಿತ್ತು. ರವಿಚಂದ್ರನ್ ಮತ್ತು ಹಂಸಲೇಖ ಗಾಂಧಿನಗರದಲ್ಲಿ ತಮ್ಮದೇ ಹೊಸ ಯುಗವನ್ನು ಆರಂಭಿಸಿದರು. ರವಿಚಂದ್ರನ್ ಪಾಲಿಗೆ ಪ್ರೇಮವೆಂದರೆ ಕೇವಲ ಭಾವನೆಯಷ್ಟೇ ಅಲ್ಲ, ಅದನ್ನು ಮೂರ್ತರೂಪಕ್ಕೆ ಇಳಿಸಲು ಅವರು ಪ್ರತಿ ಫ್ರೇಮ್‌ನಲ್ಲೂ ಹೆಣಗುತ್ತಿದ್ದರು. ಅದ್ದೂರಿತನಕ್ಕೆ ಇನ್ನೊಂದು ಹೆಸರು ರವಿಚಂದ್ರನ್ ಎಂದಾಯಿತು. ಅಂದರೆ ಪ್ರೇಮವನ್ನು ಎಲ್ಲ ರೀತಿಯಲ್ಲೂ ಅದ್ಭ್ಬುತವಾಗಿ ಪ್ರೇಕ್ಷಕನ ಮನದೊಳಗೆ ಇಳಿಸಲು ಶ್ರಮಿಸುತ್ತಿದ್ದರು. ಅದಕ್ಕಾಗಿ ಕೋಟಿಗಟ್ಟಳೆ ಹಣವನ್ನು ಹುಡಿ ಹಾರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ರವಿಯ ಕಲ್ಪನೆಗೆ ಪೂರಕವಾಗಿ ಹಂಸಲೇಖ ಅವರ ಸಂಗೀತವೂ. ಅದಾವ ಘಳಿಗೆಯಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಸಂಧಿಸಿದರೋ...ಪರಸ್ಪರರಿಗಾಗಿ ಹುಟ್ಟಿದವರಂತೆ ಗಾಂಧಿನಗರದಲ್ಲಿ ಹೊಸ ಗಾಳಿಯನ್ನು ಎಬ್ಬಿಸಿದರು. ಪ್ರೇಮಲೋಕ, ರಣಧೀರ, ಶಾಂತಿಕ್ರಾಂತಿ, ಕಿಂದರ ಜೋಗಿ, ಅಂಜದ ಗಂಡು....ಹೀಗೆ ಒಂದರ ಹಿಂದೆ ಒಂದರಂತೆ ಚಿತ್ರ ಮಾಡುತ್ತಲೇ ಹೋದರು. ಕೆಲವನ್ನು ಪ್ರೇಕ್ಷಕರು ಅಪಾರ ಪ್ರೀತಿಯಿಂದ ಸ್ವೀಕರಿಸಿದರು. ಕೆಲವನ್ನು ಸಾರಸಗಟಾಗಿ ನಿರಾಕರಿಸಿದರು. ವಿಪರ್ಯಾಸವೆಂದರೆ, ರವಿಚಂದ್ರನ್ ಯಾವೆಲ್ಲ ಚಿತ್ರಗಳನ್ನು ಮಹತ್ವಾಕಾಂಕ್ಷೆಯ ಚಿತ್ರವೆಂದು ಬಗೆದರೋ ಅವೆಲ್ಲವೂ ನೆಲಕಚ್ಚಿತು. ಅವುಗಳಲ್ಲಿ ಶಾಂತಿಕ್ರಾಂತಿ ಮುಖ್ಯವಾದುದು. ಜೊತೆಗೆ ಕಿಂದರಿಜೋಗಿ ಚಿತ್ರವೂ ಮೂಲೆಗುಂಪಾಯಿತು. ತಮಿಳಿನ ರಿಮೇಕ್ ರಾಮಾಚಾರಿ ನೆಲಕಚ್ಚಿದ ರವಿಯನ್ನು ಮೇಲೆತ್ತಿತ್ತು. ಅಂತಿಮವಾಗಿ ‘ಏಕಾಂಗಿ’ ಎನ್ನುವ ತಲೆಬುಡವಿಲ್ಲದ ಚಿತ್ರವನ್ನು ಮಾಡಿ ಅವರು ಗಾಂಧಿನಗರದಲ್ಲಿ ಏಕಾಂಗಿಯಾಗಿ ಬಿಟ್ಟರು. ಹಂಸಲೇಖ ಅವರ ಜೊತೆಗಿನ ಸಂಬಂಧವೂ ಈ ಹೊತ್ತಿಗೆ ಸಂಪೂರ್ಣ ಹಳಸಿತ್ತು. ಆ ಬಳಿಕ ಹಟವಾದಿಯಂತೆ ಅದೇನೇನೋ ಮಾಡಿ, ಇನ್ನೇನೋ ಫಲಿತಾಂಶಗಳನ್ನು ಪಡೆದುಕೊಳ್ಳತೊಡಗಿದರು. ಇದೀಗ ರವಿಚಂದ್ರನ್ ‘ಅಪೂರ್ವ’ ಚಿತ್ರದಲ್ಲಿ ಮತ್ತೊಂದು ಸೋಲನ್ನು ತಬ್ಬಿಕೊಂಡು ಕೂತಿದ್ದಾರೆ.
 ಏಕಾಂಗಿ ಚಿತ್ರವನ್ನು ಪ್ರೇಕ್ಷಕರು ನಿರ್ಲಕ್ಷಿಸಿ ದರೂ, ಅದರ ಕುರಿತ ಮೋಹದಿಂದ ರವಿಚಂದ್ರನ್ ಹೊರ ಬಂದಿರಲಿಲ್ಲ. ಪ್ರೇಕ್ಷಕರ ಕುರಿತಂತೆ ಅವರಿಗೊಂದು ಅಸಹನೆಯೂ ಇತ್ತು. ತಮಗೆ ವಯಸ್ಸಾಗಿದೆ ಎನ್ನುವುದು ಒಪ್ಪಿಕೊಳ್ಳಲಾದ ಹೀರೋಗಳ ಮನಸ್ಥಿತಿ ರವಿಚಂದ್ರನ್‌ನಲ್ಲೂ ಕೆಲಸ ಮಾಡಿದೆ .


ಅವುಗಳನ್ನು ಮೀರುವ ಒಂದು ಸಣ್ಣ ಪ್ರಯತ್ನವನ್ನು ‘ಅಪೂರ್ವ’ದಲ್ಲಿ ಮಾಡಿದ್ದಾರಾದರೂ, ಇಲ್ಲೂ ರವಿಚಂದ್ರನ್ ಅವರ ಮೇಲರಿಮೆ ಚಿತ್ರವನ್ನು ದುರ್ಬಲಗೊಳಿಸಿದೆ. ಲಿಫ್ಟ್‌ನಲ್ಲಿ ನಡೆಯುವ ಕತೆ ಎಂದು ಮಾಧ್ಯಮಗಳಲ್ಲಿ ಲಿಫ್ಟ್ ತೆಗೆದುಕೊಂಡ ಚಿತ್ರ ಇದಾದರೂ, ಪ್ರೇಕ್ಷಕ ಚಿತ್ರಮಂದಿರದಲ್ಲಿ ಲಿಫ್ಟ್‌ನಲ್ಲಿ ಸಿಲುಕಿಕೊಂಡವನಂತೆ ಒದ್ದಾಡುವುದು ಸತ್ಯ. ಚಿತ್ರ ಒಂದು ವಿಭಿನ್ನ ಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಖ್ಯ ವಾಗಿ ಚಿತ್ರ ಲಿಫ್ಟ್‌ನಲ್ಲಿ ನಡೆಯುತ್ತದೆ. ಎರಡನೆಯದು, ರವಿಚಂದ್ರನ್ ವೃದ್ಧಾಪ್ಯದೆಡೆಗೆ ಕಾಲಿಡುವ ನಾಯಕನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಕನಿಷ್ಠ ಅಷ್ಟರಮಟ್ಟಿಗಾದರೂ ಅವರು ಆತ್ಮವಿಮರ್ಶೆ ಮಾಡಿಕೊಂಡ ಚಿತ್ರ. ರವಿಚಂದ್ರನ್ ಈ ಚಿತ್ರದಲ್ಲಿ 60 ದಾಟಿದ ಕಲಾವಿದನ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆಯೇ ಇದು ಸಿನೆಮಾ ಕುರಿತಂತೆ ಅವರ ವಿಫಲ ಪ್ರಲಾಪವೂ ಹೌದು. ರವಿಚಂದ್ರನ್ ಚಿತ್ರವೆಂದರೆ, ಅದರ ಫ್ರೇಮ್ ಅಥವಾ ಚೌಕಟ್ಟು ಅದ್ದೂರಿಯಾಗಿರುತ್ತದೆ. ಇಲ್ಲೂ ಅಷ್ಟೇ. ಬಣ್ಣ ಬಣ್ಣದ ಕೆತ್ತನೆಗಳು, ವಿನ್ಯಾಸಗಳಿಂದ, ಸಂಕೇತಗಳಿಂದ ಪ್ರೇಕ್ಷಕರನ್ನು ಈ ಚೌಕಟ್ಟು, ಪರದೆಗಳು ಸೆಳೆಯುತ್ತವೆ. ಆದರೆ ಈ ಸಂಕೇತಗಳು ಏನನ್ನು ಹೇಳುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಅದು ಅಸ್ಪಷ್ಟವಾಗಿ ಬಿಡುತ್ತದೆ. ಸಿನೆಮಾದಲ್ಲಿ ತತ್ವಶಾಸ್ತ್ರವನ್ನು, ಪ್ರೇಮಶಾಸ್ತ್ರವನ್ನು, ವಿರಹಶಾಸ್ತ್ರವನ್ನು ಒಟ್ಟಾಗಿ ಬೆರಕೆ ಮಾಡಿದಂತಿದೆ. ಜೊತೆಗೆ, ಪರದೆಯ ಮೇಲೆ ಅಕ್ಷರಗಳ ಮೂಲಕ ದೃಶ್ಯಗಳಿಗೆ ವಿವರಣೆ ಕೊಡುವ ಪ್ರಯತ್ನ. ಇವೆಲ್ಲವೂ ರವಿಚಂದ್ರನ್‌ನ ಸಾಹಸವಾಗಿಯಷ್ಟೇ ಗುರುತಿಸಬಹುದು. ಆದರೆ ಅದನ್ನು ಪ್ರೇಕ್ಷಕ ಒಪ್ಪಿಕೊಳ್ಳಬೇಕು ಎಂದೇನಿಲ್ಲ. ಒಂದು ಕೆಟ್ಟು ನಿಂತ ಲಿಫ್ಟ್, ಅದರೊಳಗೆ ಸಿಲುಕಿಕೊಂಡ, ಬದುಕಿನುದ್ದಕ್ಕೂ ಏಕಾಂಗಿತನವನ್ನು ಅನುಭವಿಸಿದ ಒಬ್ಬ ವೃದ್ಧ ಮತ್ತು 19ರ ಹೃದಯದ ತರುಣಿ ಇಷ್ಟನ್ನು ಇಟ್ಟುಕೊಂಡು ಖಂಡಿತವಾಗಿಯೂ ಒಬ್ಬ ಸೃಜನಶೀಲ ನಿರ್ದೇಶಕ ಒಳ್ಳೆಯ ಚಿತ್ರವನ್ನು ಮಾಡಬಹುದಿತ್ತು. ಆದರೆ ಈ ಚಿತ್ರಕ್ಕೆ ರವಿಚಂದ್ರನ್ ಅವರ ಅತಿ ಮೇಲರಿಮೆಯೇ ಮುಳುವಾಗಿ ಬಿಟ್ಟಿದೆ ಎನ್ನುವುದು ಚಿತ್ರ ಮುಗಿಯುವಾಗ ಗೊತ್ತಾಗಿ ಬಿಡುತ್ತದೆ. ಪ್ರೇಮಲೋಕದ ರವಿಚಂದ್ರನ್ ಮಾಗಿದ್ದಾರೆ. ಅವರಿಗೆ ಏನೋ ಹೇಳಬೇಕಾಗಿದೆ. ಅದನ್ನು ಸಿನೆಮಾದಲ್ಲಿ ಹೇಳುವ ಪ್ರಯತ್ನವಂತೂ ಮಾಡಿದ್ದಾರೆ. ಆದರೆ ಅದರಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಈ ಚಿತ್ರವನ್ನು ಪ್ರೇಕ್ಷಕರು ನಿರಾಕರಿಸಿದರೆ, ಅದಕ್ಕಾಗಿ ರವಿಚಂದ್ರನ್ ಪ್ರೇಕ್ಷಕರನ್ನು ದೂಷಿಸಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X