ಲಕ್ನೋ: ಶೌಚಕ್ಕೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ

ಲಕ್ನೋ, ಮೇ 29: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯದ ಪ್ರಾಮುಖ್ಯತೆ ಎಷ್ಟಿದೆ ಎನ್ನುವುದು ಉತ್ತರ ಪ್ರದೇಶದಲ್ಲಿ ನಡೆದಿರುವ ಅತ್ಯಾಚಾ ರ ಘಟನೆಯೊಂದು ಸಾಕ್ಷಿಯಾಗಿದೆ.
ಇಲ್ಲಿನ ನಾನ್‌ಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕಿ ಮನೆ ಸಮೀಪದ ಗದ್ದೆಯೊಂದರಲ್ಲಿ ರಾತ್ರಿ ವೇಳೆ ಶೌಚಕ್ಕೆ ತೆರಳಿದ್ದಳು. ಹೊಂಚುಹಾಕಿ ಕುಳಿತ್ತಿದ್ದ ಕಾಮುಕರು ಬಾಲಕಿಯನ್ನು ಅತ್ಯಾಚಾರ ನಡೆಸಿದ್ದಲ್ಲದೆ, ಕೊಲೆ ನಡೆಸಿ ಪರಾರಿಯಾಗಿದ್ದಾರೆ. ಬಾಲಕಿಯ ರಕ್ತಸಿಕ್ತ ಮೃತದೇಹ ಮರಕ್ಕೆ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬಾಲಕಿಯ ಕುಟುಂಬ ಮನೆಯಲ್ಲಿ ಶೌಚಾಲಯ ಹೊಂದಿರದ ಕಾರಣ ಬಯಲು ಶೌಚಾಲಯವನ್ನು ಅವಲಂಬಿಸಿತ್ತು. ಇದನ್ನೇ ದುರುಪಯೋಗಿಸಿಕೊಂಡ ದುರುಳರು ಈ ಹೀನ ಕೃತ್ಯ ಎಸಗಿದ್ದಾರೆ.
ಮೃತ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಅದೇ ಹಳ್ಳಿಯ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
Next Story





