Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ 13 ದೇಶಗಳಲ್ಲಿ ಭಾರತೀಯ ರೂಪಾಯಿ ಇದ್ದರೆ...

ಈ 13 ದೇಶಗಳಲ್ಲಿ ಭಾರತೀಯ ರೂಪಾಯಿ ಇದ್ದರೆ ಸಾಕು, ನಿಮಗದೇ ಕೋಟಿ ರೂಪಾಯಿ!

ವಾರ್ತಾಭಾರತಿವಾರ್ತಾಭಾರತಿ29 May 2016 11:22 AM IST
share
ಈ 13 ದೇಶಗಳಲ್ಲಿ ಭಾರತೀಯ ರೂಪಾಯಿ ಇದ್ದರೆ ಸಾಕು, ನಿಮಗದೇ ಕೋಟಿ ರೂಪಾಯಿ!

ಭಾರತೀಯ ಪಾಸ್‌ಪೋರ್ಟ್ 59ನೇ ರ್ಯಾಂಕಿನಲ್ಲಿದೆ. ಸಾಮಾನ್ಯವಾಗಿ ಭಾರತೀಯರು ವಿದೇಶಿ ಪ್ರವಾಸ ಮಾಡುವಾಗ ದರ ವಿನಿಮಯದ ಬಗ್ಗೆ ಸಾಕಷ್ಟು ಜಾಗರೂಕತೆ ವಹಿಸಿ ಖರ್ಚು ಮಾಡಬೇಕಾಗುತ್ತದೆ. ಆದರೆ ಕೆಲವು ದೇಶಗಳಲ್ಲಿ ಭಾರತೀಯ ಕರೆನ್ಸಿ ಸ್ಥಳೀಯ ಕರೆನ್ಸಿಗಿಂತ ಹೆಚ್ಚು ಮೌಲ್ಯ ಹೊಂದಿರುವ ಕಾರಣ ನೀವು ಶ್ರೀಮಂತರೆಂದು ಅನಿಸಬಹುದು. ಅಂತಹ ಕೆಲವು ದೇಶಗಳು ಇವು. ಇಲ್ಲಿ ಕೊಟ್ಟ ದರ ಸ್ವಲ್ಪ ಭಿನ್ನವಾಗಿರಬಹುದು.

ಬೆಲಾರಸ್

1 ರೂಪಾಯಿ ಎಂದರೆ 268 ಬೆಲಾರಷ್ಯನ್ ರುಬೆಲುಗಳು. ಆದರೆ ಇಲ್ಲಿಗೆ ಹೋಗಲು ವೀಸಾ ಬೇಕು.ಕಡಿಮೆ ಬಜೆಟಲ್ಲಿ ಯುರೋಪ್ ಸುತ್ತಲು ಬಯಸುವವರಿಗೆ ಇದು ಉತ್ತಮ ಸ್ಥಳ. ರಷ್ಯಾಗೆ ಹೋದ ಅನುಭವವೂ ಸಿಗಲಿದೆ, ವೆಚ್ಚವೂ ಕಡಿಮೆಯಾಗಲಿದೆ. ಅರಣ್ಯ ಪ್ರದೇಶ ಇಲ್ಲಿನ ವಿಶೇಷ. ಬಟಾಟೆಯಿಂದ ತಯಾರಿಸಿದ ಪ್ಯಾನ್ ಕೇಕ್ ಚೆನ್ನಾಗಿರುತ್ತದೆ.

ಬೊಲಿವಿಯ

1 ರೂಪಾಯಿ ಎಂದರೆ 0.11 ಬೊಲಿವಿಯನೊ. ಇಲ್ಲಿಗೆ ಹೋಗಲು ವೀಸಾ ಬೇಕಾಗಿಲ್ಲ. ದಕ್ಷಿಣ ಅಮೆರಿಕ ದೇಶದ ಈ ನಾಲ್ಕೂ ಕಡೆಗೆ ಭೂ ಪ್ರದೇಶವಿರುವ ದೇಶದ ಪ್ರಕೃತಿ ಸೌಂದರ್ಯ ವಿಭಿನ್ನವಾಗಿದೆ. ಸ್ಪೇನಿಗೆ ಹೋಗಿ ಇಲ್ಲಿಗೆ ತೆರಳಬೇಕು. ಇಲ್ಲಿನ ವಿಶೇಷ ಸಲಾರ್ ಡೆ ಯುಯುನಿ ವಿಶ್ವದ ಅತೀ ದೊಡ್ಡ ಉಪ್ಪಿನ ಪ್ರದೇಶ. ಚೀಸ್ ಎಂಪನಡಾಸ್ ವಿಶೇಷ ತಿನಿಸು.

ಕಾಂಬೋಡಿಯ

1 ರೂಪಾಯಿ ಎಂದರೆ 62 ರೈಲ್‌ಗಳು. ಇಲ್ಲಿಗೆ ತಲುಪಿ ವೀಸಾ ಪಡೆಯಬಹುದು. ಈ ಆಗ್ನೇಯ ದೇಶದ ದೇವಾಲಯಗಳು ಮತ್ತು ವಾಸ್ತುಶಿಲ್ಪ ಸುವರ್ಣ ಇತಿಹಾಸವನ್ನು ತೆರೆದಿಡುತ್ತದೆ. ಇಲ್ಲಿನ ವಿಶೇಷ ಆಂಗ್ಕಾರ್ ವಾಟ್ ದೇಗುಲ. ಫಿಶ್ ಅಮೋಕ್ ಎನ್ನುವುದು ವಿಶೇಷ ತಿನಿಸು.

ಕೋಸ್ಟರಿಕಾ

ಇಲ್ಲಿನ 1 ರೂಪಾಯಿ ಎಂದರೆ 8.07 ಕಲನುಗಳು. ಇಲ್ಲಿಗೆ ತಲುಪಿದ ಮೇಲೆ 30 ದಿನಗಳಿಗೆ ವೀಸಾ ಪಡೆಯಬಹುದು. ಈ ಲ್ಯಾಟಿನ್ ಅಮೆರಿಕದ ದೇಶವು ಪ್ರಕೃತಿ, ಮರಳು, ಕಾಡು ಮತ್ತು ಸೂರ್ಯನನ್ನು ಬಯಸುವವರಿಗೆ ಉತ್ತಮ ಸ್ಥಳ. ಗೋವಾ ಬಿಟ್ಟು ಕೋಸ್ಟರಿಕಾಗೆ ಹೋಗಿ. ಇಲ್ಲಿನ ಕಡಲತೀರಗಳೇ ವಿಶೇಷ. ಲಾಟಿನ್ ಅಮೆರಿಕದ ಥಾಯ್ಲಂಡ್ ಇದು. ರೆಫ್ರೆಸ್ಕೊಸ್ ನ್ಯಾಚುರಲ್ಸ್, ಟ್ರಾಪಿಕಲ್ ಫ್ರುಟ್ ಸ್ಮೂತೀಸ್ ಪ್ರಯತ್ನಿಸಬಹುದು.

ಇಂಡೋನೇಷ್ಯಾ

ಇಲ್ಲಿನ 1 ರೂಪಾಯಿ ಎಂದರೆ 215 ರೂಪಾಯಿ. ಇಲ್ಲಿಗೆ ತಲುಪಿದ ಮೇಲೆ 30 ದಿನಗಳಿಗೆ ವೀಸಾ ಸಿಗುತ್ತದೆ. ಇಂಡೋನೇಷ್ಯಾದಲ್ಲಿ ಸಾವಿರಾರು ದ್ವೀಪಗಳಿವೆ. ಸ್ನೇಹಪರ ಜನರು ಸಿಗುತ್ತಾರೆ. ಬಾಲಿ ಮತ್ತು ಜಾವಾ ಉತ್ತಮ ಸ್ಥಳ. ಸ್ಥಳೀಯ ಸಂಸ್ಕೃತಿ, ಕಡಲತೀರಗಳಲ್ಲಿ ತಿರುಗಾಡಬಹುದು. ಇಲ್ಲಿನ ತಿನಿಸು ನಾಸಿ ಗೊರೆಂಗ್, ಚೀನೀ ಶೈಲಿಯ ಫ್ರೈಡ್ ರೈಸ್ ಮತ್ತು ಮಸಾಲೆ ಭರಿತ ಕಾಂಡಿಮೆಂಟುಗಳು.

ಮಂಗೋಲಿಯ

ಇಲ್ಲಿನ 1 ರೂಪಾಯಿ ಎಂದರೆ 30 ತುಗ್ರಿಕ್. ಇಲ್ಲಿಗೆ ತಲುಪಿದ ಮೇಲೆ 3 ತಿಂಗಳಿಗೆ ವೀಸಾ ಸಿಗುತ್ತದೆ. ಈ ದೇಶ ಗೋಬಿ ಮರುಭೂಮಿಯಲ್ಲಿದೆ. ಆಧುನಿಕ ತಂತ್ರಜ್ಞಾನಗಳು ಇಲ್ಲಿವೆಯಾದರೂ ಅವರ ಪೂರ್ವಜರ ಜೀವನಶೈಲಿಯನ್ನೇ ಹೊಂದಿದ್ದಾರೆ. ಕುದುರೆ ಸವಾರಿ, ದನ ಸಾಕುವುದು ಮೊದಲಾದುವುಗಳನ್ನು ಮಾಡುತ್ತಾರೆ. ಯಾವಾಗಲೂ ಚಲಿಸುತ್ತಲೇ ಇದ್ದು, ಒಂದು ಕಡೆ ನೆಲೆಸದ ಸಂಚಾರಿ ಜನಾಂಗಗಳೇ ಇಲ್ಲಿ ಹೆಚ್ಚು. ಸಂಚಾರಿಗಳ ವಾಸದಲ್ಲಿ ಒಂದು ದಿನ ಇರುವ ಅನುಭವ. ಅದು ಹೊಲ ಅಥವಾ ಮರುಭೂಮಿ ವಾಸವೂ ಆಗಿರಬಹುದು. ಮಾಂಸಾಹಾರ ಇಲ್ಲಿ ಚೆನ್ನಾಗಿರುತ್ತದೆ. ಮಟನ್ ಸೂಪ್ ವಿಶೇಷ ತಿನಿಸು. ಉತ್ತಮ ಊಟವನ್ನು 300 ರೂಪಾಯಿ ಒಳಗೆ ಪಡೆಯಬಹುದು.

ನೇಪಾಳ

ಇಲ್ಲಿನ 1 ರೂಪಾಯಿ ಎಂದರೆ 1.61 ನೇಪಾಳ ರೂಪಾಯಿ. ಇಲ್ಲಿಗೆ ಭೇಟಿ ಕೊಡಲು ವೀಸಾ ಬೇಕಿಲ್ಲ. ಅಗ್ಗದ ಸ್ಥಳವಾಗಿರುವ ಕಾರಣ ಭಾರತೀಯ ಪ್ರವಾಸಿಗರು ಹೆಚ್ಚಾಗಿದ್ದಾರೆ. ಹಿಮಾಲಯವನ್ನು ಹತ್ತಿರದಿಂದ ನೋಡಬಹುದು. ಮೌಂಟ್ ಎವರೆಸ್ಟನ್ನು ಹತ್ತಿರದಿಂದ ವೀಕ್ಷಿಸಬಹುದು. ಚಟಮರಿ ಎನ್ನುವ ನೇಪಾಳಿ ಪಿಜ್ಜಾ ಉತ್ತಮ ತಿನಿಸು.

ಪೆರುಗ್ವೆ

ಇಲ್ಲಿನ 1 ರೂಪಾಯಿ ಎಂದರೆ 84 ಗುವರಾನಿ. ಇಲ್ಲಿಗೆ ವೀಸಾ ಬೇಕಾಗಿಲ್ಲ. ದಕ್ಷಿಣ ಅಮೆರಿಕದ ಹೃದಯಭಾಗದಲ್ಲಿರುವ ಇದು ಅಮೆಜಾನ್ ನದೀಪಾತ್ರ. ನೀರನ್ನು ಇಷ್ಟಪಡುವವರಿಗೆ ಉತ್ತಮ ಸ್ಥಳ. ಹಲವು ಪ್ರವಾಸಿ ತಾಣಗಳು ಇಲ್ಲಿವೆ. ಬೇಸಗೆಯಲ್ಲಿ ಡಿಸೆಂಬರಿನಿಂದ ಫೆಬ್ರವರಿ ನಡುವೆ ಉತ್ತಮ ಸೀಸನ್. ಸ್ಥಳೀಯ ಕಡಲತೀರಗಳಲ್ಲಿ ಮಜಾ ಮಾಡಬಹುದು. ಗಿಡಮೂಲಿಕೆಗಳ ಪಾನೀಯ ಇಲ್ಲಿನ ವಿಶೇಷ.

ಶ್ರೀಲಂಕಾ

ಇಲ್ಲಿನ 1 ರೂಪಾಯಿ ಎಂದರೆ 2.1 ಲಂಕಾ ರೂಪಾಯಿಗಳು. ಇವೀಸಾ ಮತ್ತು ತಲುಪಿದ ನಂತರ ವೀಸಾ ಸಿಗುತ್ತದೆ. ಈ ದ್ವೀಪ ಸುಂದರವಾಗಿದೆ ಮತ್ತು ರಾಜಕೀಯ ಗಲಭೆಗಳ ಬೀಡು. ಕಡಲತೀರಗಳು, ಕಾಡುಗಳು, ಬೆಟ್ಟ ಗುಡ್ಡಗಳು ಮತ್ತು ಚಹಾ ತೋಟ ಇಲ್ಲಿನ ವಿಶೇಷ. ಇದು ನೋಡಲು ಕೇರಳದಂತೆಯೇ ಇದೆ. ಗಾಲ್ಫ್ ಕೋರ್ಸ್‌ಗಳಿವೆ. ಲಾಂಪ್ರೈಸ್ ಎನ್ನುವ ಡಚ್ ಬರ್ಗರ್ ಇಲ್ಲಿನ ವಿಶೇಷ. ಬೇಯಿಸಿದ ಅನ್ನವನ್ನು ಬಾಳೆ ಎಲೆಯಲ್ಲಿ ಮಾಂಸಾಹಾರ ಮತ್ತು ಮಸಾಲೆ ಜೊತೆಗೆ ಕೊಡುತ್ತಾರೆ ಮತ್ತು ರುಚಿಕರವಾಗಿರುತ್ತದೆ.

ವಿಯೆಟ್ನಾಂ

ಇಲ್ಲಿನ 1 ರೂಪಾಯಿ ಎಂದರೆ 339 ಡಾಂಗ್. ಅಂತರ್ಜಾಲದಲ್ಲಿ ವೀಸಾ ಪಡೆಯಬಹುದು. ಹನಾಯ್ ಇಲ್ಲಿನ ಪ್ರಮುಖ ಸ್ಥಳ. ಸಾರಿಗೆಗೆ ಎಗ್ಗಿಲ್ಲ. ನಿಮಗೆ ದಾರಿ ಮಾಡಿಕೊಂಡು ಹೋಗುವುದನ್ನು ಕಲಿಯಬೇಕು. ಹಲಾಂಗ್ ಬೇಗೆ ಕ್ರೂಸಲ್ಲಿ ಪ್ರಯಾಣಿಸಬಹುದು. ವಿಯೆಟ್ನಾಂನ ವಿಶೇಷ ಅದು. ದನದ ಮಾಂಸ ಮತ್ತು ದನದ ಸೂಪ್ ಇಲ್ಲಿನ ವಿಶೇಷ. ಹಂದಿ ಮತ್ತು ಕೋಳಿ ಮಾಂಸಗಳೂ ಸಿಗುತ್ತವೆ.

ತಾಂಜಾನಿಯ

ಇಲ್ಲಿನ 1 ರೂಪಾಯಿ ಎಂದರೆ 33 ಶಿಲ್ಲಾಂಗುಗಳು. ವೀಸಾ ಬೇಕು. ಸೆರೆಂಗೆಟಿ, ಕಿಲಿಮಂಜರೊ ಮತ್ತು ಸುಂದರ ಪ್ರಾಣಿಗಳಿಗೆ ಹೆಸರುವಾಸಿ. ಈ ಆಫ್ರಿಕಾ ದೇಶ ಪ್ರಕೃತಿಯ ಮಡಿಲು. ಸಾಹಸಿಗರು ಚಾರಣ ಹೋಗಬಹುದು. ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಹೋಗಬಹುದು. ಸಮೋಸಗಳು ಇಲ್ಲಿನ ವಿಶೇಷ. ಗ್ರಿಲ್ ಮಾಡಿದ ಮಾಂಸ, ಮಾರಿನೇಟ್ ಮಾಡಿದ ದನದ ಮಾಂಸ ಮತ್ತು ರೈಸ್ ಬ್ರೆಡ್ ಜನಪ್ರಿಯ.

ಸಾವೋ ಟೋಮ್ ಮತ್ತು ಪ್ರಿನ್ಸಿಪ್

ಇಲ್ಲಿನ 1 ರೂಪಾಯಿ ಎಂದರೆ 326.85 ಡೋರಾ. ವೀಸಾ ಬೇಕಾಗಿಲ್ಲ. ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿದೆ. ಒಮ್ಮೆ ಪೋರ್ಚುಗೀಸರ ಕಾಲನಿಯಾಗಿತ್ತು. ಪರಿಸರ ಪ್ರವಾಸಕ್ಕೆ ಉತ್ತಮ ತಾಣ. ಸುಂದರ ಕಡಲ ತೀರಗಳು, ಮಳೆಕಾಡುಗಳು, ಜ್ವಾಲಾಮುಖಿ ಬೆಟ್ಟಗಳು ಮೀನುಗಾರಿಕಾ ಗ್ರಾಮಗಳು ಇಲ್ಲಿವೆ. ಕಡಲತೀರದಲ್ಲಿ ಮೋಜು ಮಾಡಬಹುದು. ಸ್ಥಳೀಯ ಮಾರುಕಟ್ಟೆಗೆ ಭೇಟಿ ಕೊಡಬಹುದು. ಫೈಜೊವಾಡ ಎನ್ನುವ ಸ್ಥಳೀಯ ಬೀನ್ ಸ್ಟ್ಯೂ ಜೊತೆಗಿನ ಹಂದಿ ಮಾಂಸ ಅಥವಾ ಮೀನು ಅತ್ಯುತ್ತಮ ತಿನಿಸು.

ಲಾವೋಸ್

ಇಲ್ಲಿನ 1 ರೂಪಾಯಿ ಎಂದರೆ 122 ಕಿಪ್. ತಲುಪಿ ವೀಸಾ ಪಡೆಯಬಹುದು. ವೀಸಾಗೆ 40 ಡಾಲರ್ ಬೇಕು. ತುಂಬಿದ ಅರ್ಜಿ ಫಾರಂ ಮತ್ತು 2 ಫೋಟೋ ಬೇಕು. ಥಾಯ್ಲಂಡ್ ಮತ್ತು ವಿಯೆಟ್ನಾಂ ಇಲ್ಲಿನ ನೆರೆಹೊರೆ. ಬೌದ್ಧ ದೇವಾಲಯ ಮತ್ತು ವಸಾಹತುಶಾಹಿ ವಾಸ್ತುಶಿಲ್ಪ ಇಲ್ಲಿನ ವಿಶೇಷ.

ಕೃಪೆ: http://www.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X