ಕುಮಟಾ: ಬೈಕ್- ಕಾರು ಮುಖಾಮುಖಿ ಢಿಕ್ಕಿ; ಮೂವರು ಸ್ಥಳದಲ್ಲೇ ಮೃತ್ಯು

ಕುಮಟಾ, ಮೇ 29: ಉತ್ತರಕನ್ನಡದ ಕುಮಟಾ ಬಳಿ ರವಿವಾರ ಮುಂಜಾವ ಸುಮಾರು 2:30ರ ವೇಳೆ ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ವಿದ್ಯಾಧರ್ ಆಚಾರಿ (30), ಅರ್ಸಾದ್ ಗೌಸ್(29) , ಶ್ರೀಕಾಂತ ಹಳ್ಳೇರ (24) ಎಂದು ಗುರುತಿಸಲಾಗಿದೆ.
ಅವರು ಹೊನ್ನಾವರದಿಂದ ಧಾರೇಶ್ವರಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





