ಭಾರತೀಯ ಹುಲಿಗಳ ಸಂಖ್ಯೆ 2,226: ಆದರೆ ಹಿಂದಿನ ಸತ್ಯ?

ವನ್ಯಜೀವಿಯ ಉಳಿವನ್ನು ತೋರಿಸುವುದು ಸಂಖ್ಯೆ. ಆದರೆ ಸಂಖ್ಯೆಗಳು ಯಾವಾಗಲೂ ಸತ್ಯ ನುಡಿಯುವುದಿಲ್ಲ, ಭದ್ರತೆ ಕೊಡುವುದಿಲ್ಲ. ಕಳೆದ ವರ್ಷದಿಂದ ಭಾರತದಲ್ಲಿ ವನ್ಯಜೀವಿ ಸಂಖ್ಯೆ ಹೆಚ್ಚಾದ ಬಗ್ಗೆ ಮೂರು ಬಾರಿ ಸಂಭ್ರಮ ಪಡಲಾಗಿದೆ. 1706ರಿಂದ 2226ಗೆ ಹುಲಿಗಳ ಸಂಖ್ಯೆ ಏರಿದೆ. ನಂತರ ಚಿರತೆಗಳ ಸಂಖ್ಯೆ 10,000ದಿಂದ 12,000ಕ್ಕೆ ಏರಿದ ಖುಷಿ ಪಡಲಾಯಿತು. ಅಂತಿಮವಾಗಿ 3ನೇ ಏಷ್ಯಾ ಸಮ್ಮೇಳನದಲ್ಲಿ ಹುಲಿಗಳ ಸಂಖ್ಯೆ ಐದು ವರ್ಷಗಳಲ್ಲಿ 3200ರಿಂದ 3890ಕ್ಕೆ ಏರಿದೆ ಎಂದು ಹೇಳಲಾಯಿತು. ಹೀಗಾಗಿ ಎಲ್ಲವೂ ಸರಿಯಾದ ದಿಕ್ಕಿನಲ್ಲಿದೆ ಎಂದರೆ ತಪ್ಪಾಗುತ್ತದೆ.
ಎಣಿಕೆಯ ವಿಧಾನವೇ ತಪ್ಪು?
ವನ್ಯಜೀವಿ ತಜ್ಞರ ಪ್ರಕಾರ 1990ರಲ್ಲಿ ಹುಲಿಗಳ ಸಂಖ್ಯೆಯನ್ನು ಎಣಿಸುತ್ತಿದ್ದ ರೀತಿಯೇ ತಪ್ಪಾಗಿತ್ತು. ಹುಲಿಗಳ ಹೆಜ್ಜೆ ಗುರುತನ್ನು ಕಂಡು ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತಿತ್ತು. ತಜ್ಞರ ಅಭಿಪ್ರಾಯವನ್ನು ಅಲಕ್ಷಿಸಲಾಗಿದೆ. 2002ರಲ್ಲಿ 3642 ಹುಲಿಗಳಿದ್ದವು ಎಂದು ಹಾಗೆಯೇ ಅಂದಾಜಿಸಲಾಗಿತ್ತು. ಅದರ ಪರಿಣಾಮವಾಗಿಯೇ ಸಾರಿಸ್ಕಾದಲ್ಲಿ ಹುಲಿಗಳು ಕಣ್ಮರೆಯಾಗಿರುವ ವಿವಾದವೂ ಹುಟ್ಟಿಕೊಂಡಿದೆ. ಅದಾಗದಿದ್ದರೆ ನಮ್ಮಲ್ಲಿ ಇನ್ನೂ ಹೆಚ್ಚಿನ ಹುಲಿಗಳು ಇರುತ್ತಿದ್ದವು.
ನೆಲಮಟ್ಟದ ಸತ್ಯ
ಈ ಸಂಖ್ಯೆಗಳು ನೆಲಮಟ್ಟದಲ್ಲಿ ವನ್ಯಜೀವಿಗಳಿಗೆ ಇರುವ ಆತಂಕವನ್ನು ಹೇಳುವುದಿಲ್ಲ. ಉದಾಹರಣೆಗೆ ಆರುಪಥದ ಹೆದ್ದಾರಿ 7 ಮಧ್ಯಪ್ರದೇಶದ ಕಾನಾ ಪೆಂಚ್ ಅರಣ್ಯ ಕಾರಿಡಾರಿನಲ್ಲಿ ಹುಲಿಗಳಿಗೆ ಆತಂಕ ಒಡ್ಡಿದೆ. ಇಲ್ಲಿ ವಿಶ್ವದ ಹುಲಿಗಳ ಶೇ. 10ರಷ್ಟು ಇವೆ. ವನ್ಯ ಸಂರಕ್ಷಕರು ಇದರ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಹೆದ್ದಾರಿ ಇದ್ದರೆ ತೊಂದರೆ ಇಲ್ಲ ಎನ್ನುವ ಮಟ್ಟಿಗೆ ನಿರ್ಧಾರಗಳು ಆಗಿವೆ. ಈ ಸಂಖ್ಯೆಗಳಿಗಾಗಿ ಸ್ಥಳೀಯ ಮಟ್ಟದಲ್ಲಿ ಕ್ರಮಗಳು ನಡೆದಿರುವುದು ಕಡಿಮೆ. ರಾಷ್ಟ್ರಮಟ್ಟದಲ್ಲಿ 12,000 ಚಿರತೆಗಳು ಇರುವುದು ಉತ್ತಮ ಸಂಖ್ಯೆ. ಹುಲಿಗಳಿಗೆ ಹೋಲಿಸಿದರೆ ಚಿರತೆಗಳು ಸಾಕಷ್ಟಿವೆ. ಆದರೆ ಮಾನವನ ಜೊತೆಗಿನ ಸಂಘರ್ಷದಲ್ಲಿ ಬಹಳಷ್ಟು ಚಿರತೆಗಳು ಬಲಿಯಾಗಿವೆ. ಜನರು ಕ್ರೂರ ಪ್ರಾಣಿಗಳ ಜೊತೆಗೆ ಬದುಕುವುದನ್ನು ಅಭ್ಯಾಸ ಮಾಡಲು ಸಿದ್ಧರಿಲ್ಲ. ಹೀಗಾಗಿ ಸಂಘರ್ಷ ಏರ್ಪಡುತ್ತಿದೆ ಎನ್ನುತ್ತಾರೆ ಜೈವಿಕ ತಜ್ಞರು.
ಆವಾಸದಲ್ಲಿಯೇ ಸಂಘರ್ಷ
ವನ್ಯಜೀವಿಗಳ ಚಲನೆ ಮತ್ತು ಮಾನವನ ಆಧುನಿಕ ಪರಿಸರದ ನಡುವೆ ತಿಕ್ಕಾಟ ಆರಂಭವಾಗಿದೆ. ಹೀಗಾಗಿ ಕ್ರೂರ ಪ್ರಾಣಿಗಳ ಸಂಖ್ಯೆ ಹೆಚ್ಚಾಗುವುದು ಅಪಾಯಕಾರಿ ಎನ್ನುವ ಭಾವನೆ ಬೆಳೆಯುತ್ತಿದೆ. ಅವೈಜ್ಞಾನಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸಂಘರ್ಷ ಇನ್ನಷ್ಟು ತೀವ್ರವಾಗಿದೆ. ಸಾರಿಸ್ಕಾ ವಿವಾದದ ಬಳಿಕ ಹುಲಿ ಆಡಳಿತದ ಆತ್ಮಶೋಧನೆಯ ಸಂದರ್ಭದಲ್ಲಿ ಹುಲಿ ಟಾಸ್ಕ್ ಫೋರ್ಸ್ ಎಲ್ಲರನ್ನೂ ಒಳಗೊಂಡ ಪರಿಸರದ ಅಗತ್ಯವಿರುವುದನ್ನು ಹೇಳಲಾಗಿತ್ತು. ಹಾಗಿದ್ದರೂ ಈ ಶಿಫಾರಸ್ಸುಗಳನ್ನು ಅಲಕ್ಷಿಸಲಾಗಿದೆ.







